Advertisement
ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದದರು, ಕುಮಾರ ಸ್ವಾಮಿಗೆ ಕೊಟ್ಟ ಕುದುರೆಯನ್ನು ಏರಲಾಗದವರು ವೀರರೂ ಅಲ್ಲ ಶೂರರೂ ಅಲ್ಲ ಎಂಬತಾಗಿದೆ. 80 ಶಾಸಕರನ್ನು ಹೊಂದಿದ್ದರು ಅವರನ್ನು ಮುಖ್ಯಮಂತ್ರಿ ಮಾಡಿದೆವು. ಅವರಿಗೆ ಉತ್ತಮ ಆಡಳಿತ ಮಾಡಲಾಗದೆ ಮೈತ್ರಿ ಸರ್ಕಾರ ಪತನಗೊಳಿಸಿದರು ಎಂದು ಕಿಡಿಕಾರಿದರು.
Related Articles
Advertisement
ಸಾಲ ಮಾಡುತ್ತಿರುವ ಮೋದಿ: ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ದೇಶದ ಸಾಲ 53 ಲಕ್ಷ ಕೋಟಿ ಇತ್ತು, ಮೋದಿ ಪ್ರಧಾನಿಯಾದ ಮೇಲೆ 155 ಲಕ್ಷ ಕೋಟಿಗೆ ಸಾಲವಾಗಿದೆ. ದೇಶದ ಪ್ರತಿಯೊಬ್ಬ 1.68 ಲಕ್ಷ ಸಾಲಗಾರರನ್ನಾಗಿ ಮಾಡಿದ ಕೀರ್ತಿ ಮೋದಿಗೆ ಸಲ್ಲುತ್ತದೆ.
ವಿಧಾನಸೌಧದ ಗೋಡೆಗಳು ಲಂಚಾ ಎನ್ನುತ್ತಿವೆ: ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ಮಾಡುವಾಗ ವಿಧಾನಸೌಧದದ ಗೋಡೆಗಳು ಲಂಚ, ಲಂಚ ಎನ್ನುತ್ತಿತ್ತು. ಬಿಜೆಪಿ ಸರ್ಕಾರದಲ್ಲಿ ಪಿಎಸ್‌ಐ ಪರೀಕ್ಷೆ ಬರೆಯಲು ಲಂಚ, ಸಹಪ್ರದ್ಯಾಪಕರ ಹುದ್ದಗೆ ಪರೀಕ್ಷೆ ಬರೆಯಲು ಲಂಚ ಇನ್ನು ಸರ್ಕಾರಿ ಇಲಾಖೆ ಅಧಿಕಾರಿಗಳು ವರ್ಗಾವಣೆಗೂ ಲಂಚವನ್ನು ಜಾರಿ ಮಾಡಿದ್ದಾರೆ. ಪಿಎಸ್‌ಐ ಪರೀಕ್ಷೆಯಲ್ಲಿ ಮುಖ್ಯ ಮಂತ್ರಿ, ಸಂಬಂಧಪಟ್ಟ ಸಚಿವ ಹಾಗೂ ಪೊಲೀಸ್ ಅಧಿಕಾರಿಗಳಿಗೂ ಲಂಚ ಹೋಗಿದೆ. ಇಂತಹ ಭ್ರಷ್ಟ ಸರ್ಕಾರ ಕಿತ್ತು ಹಾಕುವ ತಾಕತ್ತು ನಿಮ್ಮ ಕೈಲಿದೆ. ನೀವು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತನ್ನಿ ಲಂಚ ಮುಕ್ತ ಅಧಿಕಾರ ಮಾಡುತ್ತೇವೆ ಎಂದರು.
ಪದವೀಧರ ಕ್ಷೇತ್ರದ ಅಭ್ಯರ್ಥಿ ಮಧು ಜಿ. ಮಾದೇಗೌಡ, ದೃವನಾರಾಯಣ್, ಮಾಜಿ ಸಚಿವ ಬಿ.ಶಿವರಾಮ್, ಚಲುವರಾಯಸ್ವಾಮಿ, ಮಾಜಿ ಎಂಎಲ್ಸಿ ಗೋಪಾಸ್ವಾಮಿ, ಎಚ್.ಕೆ.ಮಹೇಶ್, ಮಂಜೇಗೌಡ, ಮಂಜುನಾಥ್ ಮೊದಲಾದವರಿದ್ದರು.
ಹಾಸನ ಜಿಲ್ಲೆಗೆ ಹಿಡಿದಿರುವ ಜೆಡಿಎಸ್ ಭೂತ ಬಿಡಿಸುತ್ತೇನೆರಾಜ್ಯದಲ್ಲಿ ಯಾವುದೇ ಜಿಲ್ಲೆಗೆ ಇಲ್ಲದ ಭೂತ ಹಾಸನ ಜಿಲ್ಲೆಗೆ ಹಿಡಿದಿದೆ. ಅದು ಜೆಡಿಎಸ್ ಭೂತ. ಇದನ್ನು ಬಿಡಿಸುವ ಶಕ್ತಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತುಂಬಬೇಕು. ಮುಂದಿನ ಚುನಾವಣೆಗೆ ಹಾಸನ ಜಿಲ್ಲೆಗೆ ಬರುತ್ತೇನೆ. ಜೆಡಿಎಸ್ ಭೂತವನ್ನು ಬಿಡಿಸುವುದಾಗಿ ಕಾಂಗ್ರೆಸ್ ಶಕ್ತಿ ಮಂತ್ರ ಜಪಿಸಿದರು.