ಹೊಸದಿಲ್ಲಿ:ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಸ್ಪಷ್ಟವಾಗಿ ಲವ್ ಜೆಹಾದ್ ಪ್ರಕರಣ. ಕರ್ನಾಟಕದ ಕಾಂಗ್ರೆಸ್ ಸರಕಾರವು ತನ್ನ ಮತ ರಾಜಕಾರಣಕ್ಕಾಗಿ ಅದನ್ನು ಖಾಸಗಿ ವಿಚಾರ ಎಂದು ಬಿಂಬಿಸುತ್ತಿದೆ ಎಂದು ಅಮಿತ್ ಶಾ ಕಿಡಿಕಾರಿದ್ದಾರೆ.
ಇದನ್ನೂ ಓದಿ:
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಲೇಜು ಕ್ಯಾಂಪಸ್‌ನಲ್ಲಿ ಯಾವುದೇ ಯುವತಿ ರಕ್ಷಣೆ ಪಡೆಯಲು ಸಾಧ್ಯವೇ? ಕೊಲೆಗಳು ನಡೆ ಯುವುದೇ ಹೀಗೆ. ಇದನ್ನು ನೀವು ಖಾಸಗಿ ವಿಷಯ ಅಂದರೆ ನೀವೊಂದು ಸಾಮಾಜಿಕ ಪಿಡುಗನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದೀರಿ ಎಂದರ್ಥ. ಅದೂ ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಎಂದು ಶಾ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ಸ್ಫೋಟ ಪ್ರಕರಣವನ್ನೂ ಅವರು (ಕಾಂಗ್ರೆಸ್) ಗ್ಯಾಸ್ ಸಿಲಿಂಡರ್ ಸ್ಫೋಟ ಎಂದು ತಪ್ಪಾಗಿ ಬಿಂಬಿಸಿದ್ದರು. ಎನ್‌ಐಎ ತನಿಖೆಯ ಅನಂತರ ಸತ್ಯ ಹೊರಕ್ಕೆ ಬಂತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಈಗ ಮತ್ತೆ ಬಾಂಬ್
ಸ್ಫೋಟಗಳು ಆರಂಭವಾಗಿವೆ. ತಮ್ಮ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅವರು ಇನ್ನೆಷ್ಟು ಕೆಳಮಟ್ಟಕ್ಕೆ ಹೋಗುತ್ತಾರೆ ಎಂದು ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಸುಳ್ಳುಗಾರ: ಶಾ ವ್ಯಂಗ್ಯ ರಾಹುಲ್ ಒಬ್ಬ ಸುಳ್ಳುಗಾರ. ನಾವು ಇವಿಎಂನಿಂದಲೇ ಗೆಲ್ಲುತ್ತಿರುವುದಾದರೆ ತೆಲಂಗಾಣ, ತಮಿಳುನಾಡು, ಹಿಮಾಚಲ ಪ್ರದೇಶ, ಪ. ಬಂಗಾಲದಲ್ಲಿ ಏಕೆ ಸೋತಿದ್ದೇವೆ ಎಂದು ಪ್ರಶ್ನಿಸಿದ್ದಾರೆ.