Advertisement

ಜೋಗ ಜಲಪಾತ ವೀಕ್ಷಣೆಗೆ ಹುಬ್ಬಳ್ಳಿಯಿಂದ ವೋಲ್ವೊ ಬಸ್‌  

08:33 PM Aug 07, 2021 | Team Udayavani |

ಹುಬ್ಬಳ್ಳಿ: ಜೋಗ ಫಾಲ್ಸ… ವೀಕ್ಷಣೆಗೆ ರವಿವಾರ ಮತ್ತು ಸಾರ್ವಜನಿಕ ದಿನಗಳಂದು ಹುಬ್ಬಳ್ಳಿ ಗೋಕುಲ ರಸ್ತೆ ಹೊಸ ಬಸ್‌ ನಿಲ್ದಾಣದಿಂದ ವೋಲ್ವೊ ಮತ್ತು ರಾಜಹಂಸ ವಿಶೇಷ ಪ್ಯಾಕೇಜ್‌ ಟೂರ್‌ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌.ರಾಮನಗೌಡರ ತಿಳಿಸಿದ್ದಾರೆ.

Advertisement

ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹುಬ್ಬಳ್ಳಿಯಿಂದ ಜೋಗ ಜಲಪಾತಕ್ಕೆ ವಾರಾಂತ್ಯ ದಿನಗಳಂದು ಶನಿವಾರ ಮತ್ತು ರವಿವಾರ ಹಾಗೂ ಸಾರ್ವಜನಿಕ ರಜೆ ದಿನ ಈಗಾಗಲೆ ವೇಗದೂತ ಮಾದರಿಯ ಪ್ಯಾಕೇಜ್‌ ಟೂರ್‌ ಬಸ್‌ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಯಾತ್ರಿಗಳಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವೋಲ್ವೊ ಮತ್ತು ರಾಜಹಂಸ ಬಸ್‌ ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ರಾಜಹಂಸ ಬಸ್‌ ಬೆಳಗ್ಗೆ 7:45 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 435 ರೂ. ನಿಗದಿಪಡಿಸಲಾಗಿದೆ. ವೋಲ್ವೋ ಬಸ್‌ ಬೆಳಗ್ಗೆ 8 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 605 ರೂ. ನಿಗದಿಪಡಿಸಲಾಗಿದೆ. ಇವುಗಳೊಂದಿಗೆ ಹಿಂದಿನಂತೆ ವೇಗದೂತ ಬಸ್‌ ಬೆಳಗ್ಗೆ 7:30 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 350 ರೂ. ನಿಗದಿ ಮಾಡಲಾಗಿದೆ.

ಈ ವಿಶೇಷ ಬಸ್‌ಗಳ ಪ್ರಯಾಣದ ಸಂದರ್ಭದಲ್ಲಿ ಶಿರಸಿ ಮಾರಿಕಾಂಬಾ ದೇವಾಲಯ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 12:30 ರಿಂದ 1 ಗಂಟೆಗೆ ಜೋಗ ತಲುಪುತ್ತವೆ. ಅಲ್ಲಿ ಸ್ಥಳ ವೀಕ್ಷಣೆ, ಊಟೋಪಚಾರಕ್ಕೆ ನಾಲ್ಕು ತಾಸು ಸಮಯಾವಕಾಶ ನೀಡಲಾಗುತ್ತದೆ. ಸಂಜೆ ಜೋಗದಿಂದ ಬಿಟ್ಟು ರಾತ್ರಿ 9 ಗಂಟೆಗೆ ಹುಬ್ಬಳ್ಳಿಗೆ ಆಗಮಿಸುತ್ತವೆ. ಕೋವಿಡ್‌ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಪ್ರಯಾಣಿಕರು 72 ಗಂಟೆ ಮುಂಚಿತವಾಗಿ ಪಡೆದಿರುವ ಕೋವಿಡ್‌ ನೆಗೆಟಿವ್‌ ವರದಿ ಹೊಂದಿರುವುದು ಕಡ್ಡಾಯ. ಸುರಕ್ಷತೆಯ ದೃಷ್ಟಿಯಿಂದ ಮನೆಯಿಂದಲೇ ಆಹಾರ ಮತ್ತು ಕುಡಿಯಲು ನೀರು ತೆಗೆದುಕೊಂಡು ಬರುವುದು ಸೂಕ್ತ. ಈ ವಿಶೇಷ ಬಸ್‌ಗಳಿಗೆ  Wæ www.ksrtc.in ವೆಬ್‌ಸೈಟ್‌ನಲ್ಲಿ ಮತ್ತು ಹೊಸೂರು ಹಾಗೂ ಗೋಕುಲ ರಸ್ತೆ ಬಸ್‌ ನಿಲ್ದಾಣದಲ್ಲಿ ಮುಂಗಡ ಬುಕ್ಕಿಂಗ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿಗೆ ಬಸ್‌ ನಿಲ್ದಾಣ ಅಧಿಕಾರಿಗಳ ಮೊ: 7760991662/ 682 ಅಥವಾ ಘಟಕ ವ್ಯವಸ್ಥಾಪಕರು ಮೊ: 7760991677, (ವೇಗದೂತ ಬಸ್‌)/7760991674(ವೊಲ್ವೊ ಮತ್ತು ರಾಜಹಂಸ ಬಸ್‌) ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next