Advertisement

ನೀರಿನ ಸಮಸ್ಯೆ ನಿಭಾಯಿಸಲು ಮುಂದಾದ ಸ್ವಯಂಸೇವಕರು

10:32 PM May 13, 2020 | Team Udayavani |

ವಂಡ್ಸೆ: ವಂಡ್ಸೆ ಗ್ರಾಮದಲ್ಲಿ ಎದುರಾದ ಕುಡಿಯವ ನೀರಿನ ಸಮಸ್ಯೆ ಬಗೆ ಹರಿಸುವಲ್ಲಿ ಸಾಮಾಜಿಕ ಕಾರ್ಯ ಕರ್ತರು ಸ್ವಯಂ ಸ್ಪೂರ್ತಿಯಿಂದ ಸ್ವಂತ ಖರ್ಚಿನಲ್ಲಿ ಕಳೆದ ಕೆಲವು ದಿನಗಳಿಂದ ಟ್ಯಾಂಕರ್‌ ಮೂಲಕ ಕುಡಿಯುವ ನೀರನ್ನು ಒದಗಿಸುತ್ತಿದ್ದಾರೆ.

Advertisement

ಟ್ಯಾಂಕರ್‌ ಮೂಲಕ ಕುಡಿಯವ ನೀರು ಒದಗಿಸಲು ಸರಕಾರವು ಟೆಂಡರ್‌ಮೂಲಕ ನಡೆಯ ಬೇಕೆಂದು ಸೂಚಿಸಿರುವ ಹಿನ್ನಲೆಯಲ್ಲಿ ಹಲವು ಗ್ರಾ.ಪಂ.ಗಳಲ್ಲಿ ಈ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿತ್ತು, ಟೆಂಡರ್‌ ಪಡೆಯಲು ಗುತ್ತಿಗೆದಾರರು ಹಿಂಜರಿಯುತ್ತಿದ್ದರು. ಸರಕಾರವು ಸೂಚಿಸಿದ ದರವು ಗುತ್ತಿಗೆದಾರರಿಗೆ ನಷ್ಟ ಉಂಟು ಮಾಡುತ್ತದೆ ಎಂಬ ಕಾರಣಕ್ಕಾಗಿ ಪ್ರಕ್ರಿಯೆಯಲ್ಲಿ ಮುಂದು ವರಿಯಲು ಗುತ್ತಿಗೆದಾರರು ಹೆಚ್ಚಿನ ಆಸಕ್ತಿ ತೋರಿಲ್ಲ. ಇಡೀ ಗ್ರಾಮದಲ್ಲಿ ಬಾವಿ ಬತ್ತಿದ್ದು ಕುಡಿಯವ ನೀರಿಗಾಗಿ ಅಲ್ಲಿನ ನಿವಾಸಿಗಳು ಪರಿತಪಿಸುವ ಪರಿಸ್ಥಿತಿ ಎದುರಾಯಿತು. ಈನಡುವೆ ಗ್ರಾಮ ನಿವಾಸಿಯಾಗಿರುವ ಪ್ರಶಾಂತ ಪೂಜಾರಿ ಕುಡಿಯುವ ನೀರನ್ನು ಗ್ರಾಮಸ್ಥರಿಗೆ ಒದಗಿಸುವ ಬಗ್ಗೆ ಕಾಳಜಿ ವಹಿಸಿ ಟ್ಯಾಂಕರ್‌ ಮೂಲಕ ನೀರನ್ನು ಪೂರೈಸುತ್ತಿದ್ದಾರೆ.

ವಂಡ್ಸೆ ಗ್ರಾ.ಪಂ.ನೇತೃತ್ವದಲ್ಲಿ ಮೇ 13 ರಿಂದ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ. ಕಳೆದ ಹಲವು ದಿನಗಳಿಂದ ನೀರಿನ ಕ್ಷಾಮ ಎದುರಿಸುತ್ತಿದ್ದ ವಂಡ್ಸೆ ನಿವಾಸಿಗಳಿಗೆ ಬುಧವಾರದಿಂದ ಗ್ರಾ.ಪಂ.ಸಹಿತ ಸಮಾಜ ಸೇವಕರಿಂದ ಒದಗಿಸಲಾಗುತ್ತಿದ್ದ ಟ್ಯಾಂಕರ್‌ ನೀರು ತಾತ್ಕಾಲಿಕ ನೆಲೆಯಲ್ಲಿ ಉಪಶಮನ ನೀಡಿದಂತಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next