ಬೆಂಗಳೂರು: ಹೊಸ ವರ್ಷ ಆರಂಭವಾಗುತ್ತಿದ್ದಂತೆ ಆಡಳಿ ತಾ ರೂಢ ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ಬೀಸುವಂತಾಗಿದ್ದು ಸಂಪುಟ ಸೇರಲು ಕಾಯುತ್ತಿರುವ ಆಕಾಂಕ್ಷಿಗಳಿಗೆ ಸಂಕ್ರಾಂತಿ ಹೊತ್ತಿಗೆ ಎಳ್ಳು, ಬೆಲ್ಲದ ಸಿಹಿ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಸಂಪುಟದಲ್ಲಿ ಖಾಲಿ ಉಳಿದಿರುವ ನಾಲ್ಕು ಸ್ಥಾನಗಳ ಜತೆಗೆ ಆರು ಸಚಿವರನ್ನು ಕೈ ಬಿಟ್ಟು ಹತ್ತು ಮಂದಿ ಹೊಸಬರಿಗೆ ಅವಕಾಶ ನೀಡಲಾಗುವುದು. ಪಕ್ಷದ ವರಿಷ್ಠರು ಮುಂದಿನ ವಾರ ರಾಜ್ಯಕ್ಕೆ ಆಗಮಿಸಿ ಸಚಿವರ ಕಾರ್ಯವೈಖರಿ ಬಗ್ಗೆ ಮೌಲ್ಯಮಾಪನ ಸಹ ನಡೆಸಲಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡದ ಸಚಿವರನ್ನು ಕೈ ಬಿಡಲಾಗುವುದು ಎಂದು ಮಾತುಗಳು ಕೇಳಿಬರುತ್ತಿವೆ. ನಾಯಕತ್ವ ಬದಲಾವಣೆ ಗಾಳಿ ತುಸು ತಣ್ಣಗಾಗಿದ್ದು, ಸಂಪುಟ ಪುನಾರಚನೆಯಾಗುವುದು ನಿಶ್ಚಿತ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ.
ಗುಜರಾತ್ ಮಾದರಿ?: ಬಹುತೇಕ ಶಾಸಕರು ಈಗಾ ಗಲೇ ಅಧಿಕಾರ ಅನುಭವಿಸಿರುವ ಎಲ್ಲ ಸಚಿವರನ್ನು ಕೈ ಬಿಟ್ಟು ಗುಜರಾತ್ ಮಾದರಿಯಲ್ಲಿ ಹೊಸ ಸಂಪುಟ ರಚನೆ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪಕ್ಷದ ರಾಜ್ಯ ನಾಯಕರೂ ಹಾಗೂ ಹೈಕಮಾಂಡ್ ಮಟ್ಟ ದಲ್ಲಿ ಯೂ ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾದ ತಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿ, ಈಗಿನ ಬಸವರಾಜ ಬೊಮ್ಮಾ ಯಿ ಅವರ ಸಂಪುಟದಲ್ಲಿಯೂ ಸಚಿವರಾಗಿ ಮುಂದುವರಿ ಯುತ್ತಿರುವವರನ್ನು ಕೈಬಿಟ್ಟು ಯುವ ಶಾಸಕರಿಗೆ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆಯೂ ಇದೆ. ಕನಿಷ್ಠ 14 ರಿಂದ 15 ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುತ್ತಾರೆ ಎಂದೂ ಹೇಳಲಾಗುತ್ತಿದೆ. ಚುನಾವಣೆಯ ವರ್ಷವಾಗಿರುವುದರಿಂದ ಸರ್ಕಾರದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸಕ್ರಿಯರಾಗಿ ಕಾರ್ಯನಿರ್ವಹಿಸುವ ಶಾಸಕರಿಗೆ ಅವಕಾಶ ಕಲ್ಪಿಸಿ, ಸರ್ಕಾರದ ಇಮೇಜ್ ಹೆಚ್ಚಿಸಿಕೊಳ್ಳಬೇಕು. ಅಲ್ಲದೇ ಈಗಾಗಲೇ ಆಡಳಿತ ನಡೆಸಿರುವ ಹಿರಿಯ ಸಚಿವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಆಗುತ್ತಿರುವ ಹಿನ್ನಡೆಯನ್ನು ಸರಿಪಡಿಸಿ ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ ಮಾಡಬೇಕೆಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ. ಸಚಿವ ಸಂಪು ಟ ದಲ್ಲಿ ಇದ್ದುಕೊಂಡೇ ನಾಯಕತ್ವ ಬದಲಾವಣೆಯ ಬಗ್ಗೆ ಗೊಂದಲ ಸೃಷ್ಟಿಸಲು ಪ್ರಯತ್ನಿಸು ತ್ತಿದ್ದಾರೆ ಎನ್ನುವ ಸಚಿವರನ್ನು ಮಾತ್ರ ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಸಚಿವರ ಮೌಲ್ಯಮಾಪನ ?: ಹಾಲಿ ಸಚಿವರ ಕಾರ್ಯ ವೈಖರಿಯ ಬಗ್ಗೆ ಪಕ್ಷದ ಹೈಕಮಾಂಡ್ ಮೌಲ್ಯಮಾಪನ ನಡೆಸಿ, ಅವರು ನಿರ್ವಹಿಸುವ ಇಲಾಖೆ ಹಾಗೂ ಪಕ್ಷ ಸಂಘ ಟನೆಯಲ್ಲಿ ಯಾವ ರೀತಿ ಸಕ್ರಿಯರಾಗಿ ತೊಡಗಿಕೊಂಡಿದ್ದಾರೆ. ಕಾರ್ಯಕರ್ತರು ಹಾಗೂ ಪಕ್ಷದೊಂದಿಗೆ ಯಾವ ರೀತಿ ಒಡನಾಟ ಇಟ್ಟುಕೊಂಡಿದ್ದಾರೆ ಎನ್ನುವುದನ್ನು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಮೌಲ್ಯಮಾಪನ ನಡೆಸಿ, ಸಚಿವರಿಗೆ ಸೂಚನೆ ನೀಡುತ್ತಾ ರೆಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ಮೂಲದ ಪ್ರಕಾರ ಜನವರಿ ಎರಡನೇ ವಾರದಲ್ಲಿ ಸಚಿವರಿಗಾಗಿ ಒಂದು ದಿನದ ಪ್ರಶಿಕ್ಷಣ ವರ್ಗ ಹಮ್ಮಿಕೊಳ್ಳುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆಸಲಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸಮಯ ನೋಡಿಕೊಂಡು ಪ್ರಶಿಕ್ಷಣ ವರ್ಗದ ಸಮಯ ನಿಗದಿಯಾಗಲಿದೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.