Advertisement

ವಿಐಯಿಂದ ನಜಾರಾ ಸಹಯೋಗದೊಂದಿಗೆ ವಿ ಗೇಮ್‍

10:53 AM Mar 20, 2022 | Team Udayavani |

ಮುಂಬಯಿ: ಟೆಲಿಕಾಂ ಕಂಪೆನಿ ವೊಡಾಫೋನ್‍ ಐಡಿಯಾ ಲಿಮಿಟೆಡ್‍ ತನ್ನ ವಿ ಆಪ್‍ನಲ್ಲಿ ಗೇಮಿಂಗ್‍ ಆಸಕ್ತರಿಗಾಗಿ ನಜಾರಾ ಟೆಕ್ನಾಲಜೀಸ್‍ ಸಹಯೋಗದಲ್ಲಿ ವಿ ಗೇಮ್‍ ಅನ್ನು ಪರಿಚಯಿಸಿದೆ.

Advertisement

ವಿ ಗೇಮ್‍ನಲ್ಲಿ ಸಾಹಸ, ಶಿಕ್ಷಣ, ವಿನೋದ, ಒಗಟು, ರೇಸಿಂಗ್‍, ಕ್ರೀಡೆ, ತಂತ್ರಗಾರಿಕೆಯಂತಹ ಪ್ರಕಾರಗಳಲ್ಲಿ 1200ಕ್ಕೂ ಹೆಚ್ಚು ಮೊಬೈಲ್‍ ಗೇಮ್‍ಗಳಿರುತ್ತವೆ. ಭಾರತೀಯ ಗ್ರಾಹಕರು ಆನ್‍ಲೈನ್‍ ಗೇಮಿಂಗ್‍ನಲ್ಲಿ ಸರಾಸರಿ 4 ಗಂಟೆಗಳ ಕಾಲ ಕಳೆಯುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಹೀಗಾಗಿ ತನ್ನ ಬಳಕೆದಾರರ ವಿಶ್ರಾಂತಿಗೆ ಅನುಕೂಲವಾಗಲು ವಿ ಗೇಮ್‍ ಅನ್ನು ನಜಾರಾ ಟೆಕ್ನಾಲಜೀಸ್ ಸಹಯೋಗದೊಂದಿಗೆ ಆರಂಭಿಸಿರುವುದಾಗಿ ವೊಡೋಫೋನ್‍ ಐಡಿಯಾದ ಅಧಿಕಾರಿ ಅವನೀಶ್‍ ಖೋಸ್ಲಾ ತಿಳಿಸಿದ್ದಾರೆ. ವಿ ಗೇಮ್ಸ್ ನಲ್ಲಿ 250 ಕ್ಕೂ ಹೆಚ್ಚು ಉಚಿತ ಆಟಗಳಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next