Advertisement

ವ್ಲಾಡಿಮಿರ್‌ ಪುತಿನ್‌ ಆಪ್ತೆ ಮರೀನಾ ಯಾಂಕಿನಾ ನಿಗೂಢ ಸಾವು

11:59 PM Feb 17, 2023 | Team Udayavani |

ಮಾಸ್ಕೋ: ರಷ್ಯಾ-ಉಕ್ರೇನ್‌ ಯುದ್ಧ ಆರಂಭ ಗೊಂಡಾಗಿನಿಂದಲೂ ರಷ್ಯಾದ ಹಲವು ಅಧಿಕಾರಿಗಳು ನಿಗೂಢವಾಗಿ ಸಾವನ್ನಪ್ಪುತ್ತಿದ್ದು, ಈಗ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಅವರ ಆಪ್ತರಾದ ಮರೀನಾ ಯಾಂಕಿನಾ ಕೂಡ ನಿಗೂಢವಾಗಿ ಮೃತಪಟ್ಟಿದ್ದಾರೆ.

Advertisement

ರಷ್ಯಾ ರಕ್ಷಣ ಇಲಾಖೆಯ ವಿತ್ತೀಯ ಉಸ್ತುವಾರಿಯಾಗಿದ್ದ ಮರೀನಾ, ಪೀಟರ್ ಬರ್ಗ್‌ ನಲ್ಲಿರುವ ಪತಿಯ ನಿವಾಸದ 16ನೇ ಅಂತಸ್ತಿನ ಕಟ್ಟಡದ ಕಿಟಕಿಯಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ಅಂಶ ನಿಗೂಢವಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next