Advertisement

ವಿ.ಕೆ.ಸುವರ್ಣ ಅಭಿಮಾನಿ ಬಳಗದಿಂದ ಸುವರ್ಣ ಸಂಭ್ರಮ

04:47 PM Oct 25, 2018 | |

ಮುಂಬಯಿ: ಜೀವನದಲ್ಲಿ ಅಭಿಮಾನಿಗಳನ್ನು ಪಡೆದು ಅವರ ಪ್ರೀತಿ, ಗೌರವಕ್ಕೆ ಪಾತ್ರರಾಗುವುದು ಸುಲಭದ ಮಾತಲ್ಲ. ಐಶ್ವರ್ಯವನ್ನು ಹೆಚ್ಚಿನವರು ಸಂಪಾದಿಸುತ್ತಾರೆ. ಆದರೆ ವಿ. ಕೆ. ಸುವರ್ಣರು ಅದಕ್ಕಿಂತಲೂ ಮಿಗಿಲಾಗಿ ಕಲಾಮಾತೆಯ ಆಶೀರ್ವಾದವನ್ನು ಪಡೆದು ಸಾವಿರಾರು ಅಭಿಮಾನಿಗಳೊಂದಿಗೆ ನವಿಮುಂಬಯಿಯಲ್ಲಿ ಓರ್ವ ಸರಳ, ಸಜ್ಜನಿಕೆಯ ಮೇರು ಕಲಾವಿದರಾಗಿ ಗುರುತಿಸಿಕೊಂಡವರು. ಇಂತಹ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಇದು ಅವರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವೆಗಾಗಿ  ಸಂದ ಗೌರವವಾಗಿದೆ ಎಂದು ನೆರೂಲ್‌ ಶ್ರೀ ಶನೀಶ್ವರ ಮಂದಿರದ ಗೌರವಾಧ್ಯಕ್ಷ ಸಂತೋಷ್‌ ಡಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ಅ.22 ರಂದು ವಾಶಿಯ ವಿಷ್ಣುದಾಸ್‌ ಬಾವೆ ಸಭಾಗೃಹದಲ್ಲಿ ವಿ. ಕೆ. ಸುವರ್ಣ ಅಭಿಮಾನಿ ಬಳಗ ಆಯೋಜಿಸಿದ ಸುವರ್ಣ ಸಂಭ್ರಮ ಮತ್ತು ರಂಗಮಾಣಿಕ್ಯ ಬಿರುದು ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಸಮಾರಂಭವು ನಿಜವಾಗಿಯೂ ಅದ್ಭುತವಾಗಿ ಮೂಡಿಬಂದಿದೆ. ಸಮಾರಂಭವನ್ನು ಆಯೋಜಿಸಿದ ಪ್ರಭಾಕರ ಹೆಗ್ಡೆ ಮತ್ತು ಅವರ ತಂಡದವರು ಅಭಿನಂದನಾರ್ಹರು. ಇದೊಂದು ಅರ್ಥಪೂರ್ಣ ಸಮಾರಂಭವಾಗಿದ್ದು,  ಸುವರ್ಣರು ಕಲಾರಂಗದಲ್ಲಿ ಇನ್ನಷ್ಟು ಬೆಳೆಯಬೇಕು. ಇದಕ್ಕಿಂತ ದೊಡ್ಡ ಪ್ರಮಾಣದ ಸಮ್ಮಾನ, ಪುರಸ್ಕಾರಗಳು ಅವರನ್ನು ಅರಸಿ ಬರಲಿ ಎಂದರು.

ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪೆರ್ಣಂಕಿಲ ಹರಿದಾಸ್‌ ಭಟ್‌ ಅವರು ಮಾತನಾಡಿ, ಸರಳ, ಸಜ್ಜನಿಕೆ ಸ್ವಭಾವದ ವಿ. ಕೆ. ಸುವರ್ಣರು ಕಲೆಗಾಗಿ ತನ್ನ ಜೀವನದ 50 ವರ್ಷಗಳನ್ನು ಮುಡುಪಾಗಿಟ್ಟವರು. ಅವರು ಕಲಾರಂಗದಲ್ಲಿ ಅನೇಕ ಸಾಧನೆಗಳನ್ನು ಮಾಡಿದವರು. ಕಲಾಮಾತೆ ಸರಸ್ವತಿಗೆ ಅವರ ಇನ್ನಷ್ಟು ಸೇವೆ ದೊರೆಯುವಂತಾಗಲಿ. ಅವರ ಮುಂದಿನ ಜೀವನವು ಯಶಸ್ವಿಯಾಗಿ ಸಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾ ರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು, ಎಲ್ಲರಿಗೂ ಕಲಾವಿದರಾಗಲು ಸಾಧ್ಯವಿಲ್ಲ, ಕಲಾವಿದನಿಗೆ ಕಲೆಯ ಮೇಲೆ ಶ್ರದ್ಧೆ, ಗೌರವ ಇರಬೇಕು. ವಿ. ಕೆ. ಸುವರ್ಣರು ಹಣ ಮಾಡಲಿಲ್ಲ ನಿಜ. ಆದರೆ ಉತ್ತಮ ಕಲಾವಿದನಾಗಿ ಅಭಿ ಮಾನಿಗಳ ಹೃದಯವನ್ನು ಗೆದ್ದಿದ್ದಾರೆ ಎನ್ನುವುದಕ್ಕೆ ಇಂದಿನ ಸಮಾರಂಭವು ಸಾಕ್ಷಿಯಾಗಿದೆ ಎಂದರು.

ವಿಶೇಷ ಅತಿಥಿಗಳಾಗಿ ನೆರೂಲ್‌ ನಗರ ಸೇವಕಿ ಮೀರಾ ಎಸ್‌. ಪಾಟೀಲ್‌, ತುಳುಕೂಟ ಬೆಂಗಳೂರು ಗೌರವ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಅತಿಥಿಗಳಾಗಿ ಬಿಎಸ್‌ಕೆಬಿ ಅಸೋಸಿಯೇಶನ್‌ ಮುಂಬಯಿ ಉಪಾಧ್ಯಕ್ಷ ವಾಮನ್‌ ಹೊಳ್ಳ,  ಕನ್ನಡ ಕಲಾಕೇಂದ್ರ ಮುಂಬಯಿ ಅಧ್ಯಕ್ಷ ಬೈಲೂರು ಬಾಲಚಂದ್ರ ರಾವ್‌, ನೆರೂಲ್‌ ಶ್ರೀ ಶನೀಶ್ವರ ಮಂದಿರದ ಉಪಾಧ್ಯಕ್ಷ ಗೋಪಾಲ್‌ ವೈ. ಶೆಟ್ಟಿ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ಶ್ಯಾಮ್‌ ಎನ್‌. ಶೆಟ್ಟಿ, ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಜಯ ಬಿ. ಹೆಗ್ಡೆ, ಭಾರತ್‌ ಬ್ಯಾಂಕಿನ ಮಾಜಿ ನಿರ್ದೇಶಕ ಅಶೋಕ್‌ ಕೋಟ್ಯಾನ್‌,  ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾಣ ಸುರೇಂದ್ರ ಕುಮಾರ್‌ ಹೆಗ್ಡೆ, ಬಿಲ್ಲವರ ಅಸೋಸಿಯೇಶನ ನವಿಮುಂಬಯಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ವಿಶ್ವನಾಥ ಕೆ. ಪೂಜಾರಿ, ತುಳುಕೂಟ ಐರೋಲಿ ಅಧ್ಯಕ್ಷ ಕೆ. ಕೆ. ಹೆಬ್ಟಾರ್‌, ಕಾಮೋಟೆ ತುಳು ಕನ್ನಡ ವೆಲ್ಫೆàರ್‌ ಅಸೋಸಿಯೇಶನ್‌ನ ಅಧ್ಯಕ್ಷ ರವಿ ಪೂಜಾರಿ ಬೋಳ, ನಾರ್ಡಿಕ್‌ ಲಾಜಿಸ್ಟಿಕ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಪ್ರಮೋದ್‌ ಕರ್ಕೇರ   ಮಾತನಾಡಿ ಶುಭ ಹಾರೈಸಿದರು.

Advertisement

ಸಮ್ಮಾನ
ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೆ. ಕೆ. ಶೆಟ್ಟಿ, ರಂಗಕರ್ಮಿ ನಾರಾಯಣ ಶೆಟ್ಟಿ ನಂದಳಿಕೆ, ರಂಗಕಲಾವಿದ ಕರುಣಾಕರ ಕಾಪು ಅವರನ್ನು ಸಮ್ಮಾನಿಸಲಾಯಿತು. 

ಬಾಲಕೃಷ್ಣ ಶೆಟ್ಟಿ ಆದ್ಯಪಾಡಿ, ಸತೀಶ್‌ ಎರ್ಮಾಳ್‌, ಹರೀಶ್‌ ಪಡುಬಿದ್ರಿ, ಜಗದೀಶ್‌ ಶೆಟ್ಟಿ ಪನ್ವೇಲ್‌ ಅವರು ಸಮ್ಮಾನ ಪತ್ರ ವಾಚಿಸಿದರು. ಬಳಗದ ಪದಾಧಿಕಾರಿಗಳು, ಸದಸ್ಯರು ಯಶಸ್ಸಿಗೆ ಸಹಕರಿಸಿದರು. ಅತಿಥಿ  ಗಣ್ಯರನ್ನು ಬಳಗದ ಅಧ್ಯಕ್ಷ ಪ್ರಭಾಕರ ಎಸ್‌. ಹೆಗ್ಡೆ, ಕಾರ್ಯದರ್ಶಿ ಜಗದೀಶ್‌ ಶೆಟ್ಟಿ ಹಾಗೂ ಸದಸ್ಯರು ಗೌರವಿಸಿದರು.  ರಂಗ ಕಲಾವಿದ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿ ದರು. ಬಳಗದ ಕಾರ್ಯದರ್ಶಿ ಜಗದೀಶ್‌ ಶೆಟ್ಟಿ ಪನ್ವೇಲ್‌ ಅವರು ವಂದಿಸಿದರು.

ವಿ. ಕೆ. ಸುವರ್ಣ ಹಾಗೂ ನನ್ನ ಸಂಬಂಧ ಹಲವು ವರ್ಷಗಳಿಂದ ಇದೆ. ಶ್ರೀ ಶನೀಶ್ವರ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಧಾರ್ಮಿಕ ಕಾರ್ಯದಲ್ಲೂ ಅವರು ಯಶಸ್ವಿಯಾಗಿದ್ದಾರೆ. ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುವುದು ಅವರ ಚಾತುರ್ಯವಾಗಿದೆ. ನಿರಂತರವಾಗಿ ಅವರು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರಿಗೆ ಶ್ರೀ ದೇವರು ಯಶಸ್ಸನ್ನು ಕರುಣಿಸಲಿ.
-ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ, 
ಅಧ್ಯಕ್ಷರು, ಶ್ರೀ ಶನೀಶ್ವರ ಮಂದಿರ ನೆರೂಲ್‌

ವಿ. ಕೆ. ಸುವರ್ಣರ ಸಾಧನೆಗಳು ಅಪಾರವಾಗಿವೆ. ನವಿಮುಂಬಯಿಯಲ್ಲಿ ಅವರಷ್ಟು  ಪ್ರಸಿದ್ಧಿ ಪಡೆದ ಕಲಾವಿದರು ಇನ್ನೊಬ್ಬರಿಲ್ಲ. ಧಾರ್ಮಿಕ ಚಿಂತನೆಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲೂ ನಿರತರಾಗಿರುವ ಅವರು ಸದಾ ಕ್ರಿಯಾಶೀಲರು. ಸ್ನೇಹಪರತೆಯಿಂದ ವ್ಯವಹರಿಸುವ ಅವರಿಗೆ ಇಂದು ಅರ್ಥಪೂರ್ಣ ಸಮ್ಮಾನ ಸಂದಿದೆ. ಅವರಿಗೆ ಘನ್ಸೋಲಿ ಶ್ರೀ ಮೂಕಾಂಬಿಕೆಯ ಅನುಗ್ರಹ ಸದಾಯಿರಲಿ .
-ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ , 
ಅಧ್ಯಕ್ಷರು, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ

 ಚಿತ್ರ ವರದಿ:ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next