Advertisement

ಮಾರುಕಟ್ಟೆಗೆ ಶೀಘ್ರ ಲಗ್ಗೆ ಇಡಲಿದೆ Vivo Y52s ಸ್ಮಾರ್ಟ್ ಪೋನ್: ಏನೆಲ್ಲಾ ವಿಶೇಷತೆಗಳಿವೆ ?

08:48 PM Dec 04, 2020 | Adarsha |

ನವದೆಹಲಿ: ಪ್ರಸಿದ್ದ ಮೊಬೈಲ್ ಕಂಪನಿ ವಿವೋ  ಇದೀಗ Vivo Y52s ಹೆಸರಿನಲ್ಲಿ ಹೊಸ  ಸ್ಮಾರ್ಟ್ ಪೋನ್ ಬಿಡುಗಡೆಗೆ ಚಿಂತನೆ ನಡೆಸಿದ್ದು, ಇದೀಗ ಈ ನೂತನ ಮೊಬೈಲ್ ಫೀಚರ್ ಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿವೆ.

Advertisement

V2057A ಮೊಡೆಲ್ ನಂಬರ್ ನಲ್ಲಿ ಬಿಡುಗಡೆಗೊಳಿಸಲಾಗಿರುವ ಈ ಹೊಸ  ಆವೃತ್ತಿಯ ಮೊಬೈಲ್ ಪೋನ್, ಇತ್ತೀಚಿಗಷ್ಟೇ ಚೀನಾದ ಮೊಬೈಲ್ ಪೋನ್ ಗಳ ಪ್ರಮಾಣಿಕರಿಸುವ ವೇದಿಕೆಗಳಾದ 3C ಮತ್ತು TENAA ನಲ್ಲಿ  ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಉಸ್ತುವಾರಿ ಅರುಣ್ ಸಿಂಗ್ ಜೊತೆ ಚರ್ಚೆಯ ನಂತರ ಸಂಪುಟದ ಬಗ್ಗೆ ನಿರ್ಧಾರ: ಬಿಎಸ್ ವೈ

Vivo Y52s ವಿಷೇಶತೆಗಳು:

Vivo Y52s ಇತರೆ ಸ್ಮಾರ್ಟ್ ಪೋನ್ ಗಳಿಗೆ ಹೋಲಿಸಿದರೆ, ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಆಕರ್ಷಕ ವಿನ್ಯಾಸವನ್ನು ಒಳಗೊಂಡಿದೆ. ಒಟ್ಟು 6.58 ಇಂಚಿನ IPS LCD ಪ್ಯಾನಲ್ ಅನ್ನು ಈ ಮೊಬೈಲ್ ಒಳಗೊಂಡಿದ್ದು.1080x 2480 ಫುಲ್ ಹೆಚ್ ಡಿ ಡಿಸ್ ಪ್ಲೆ ಹೊಂದಿದೆ.

Advertisement

ಅಲ್ಲದೆ 8 ಮೆಗಾಫಿಕ್ಸಲ್ ಫ್ರಂಟ್ ಕ್ಯಾಮರಾ ಮತ್ತು ಹಿಂಭಾಗದಲ್ಲಿ 48 ಎಂಪಿ ಪ್ರಾಥಮಿಕ ಕ್ಯಾಮಾರಾ ಹಾಗೂ 2 ಎಂಪಿ ಸೆಕಂಡರಿ ಕ್ಯಾಮರಾವನ್ನು ಒಳಗೊಂಡಿದೆ, ಇದರ ಜೊತೆಗೆ LED ಫ್ಲ್ಯಾಶ್ ಅನ್ನು ಇದು ಹೊಂದಿದೆ.  ಆ್ಯಂಡ್ರಾಯ್ಡ್ 10 ಓಎಸ್ ಅನ್ನೂ ಒಳಗೊಂಡಿದೆ.

ಈ ಮೊಬೈಲ್ 8 ಜಿಬಿ ಮತ್ತು 128 ಜಿಬಿ ಸ್ಟೋರೇಜ್ ವ್ಯವಸ್ಥೆಯನ್ನು ಒಳಗೊಂಡಿದೆ. ಇನ್ನು 4,910 mAh ಬ್ಯಾಟರಿ ಸಾಮಥ್ಯವನ್ನು ಒಳಗೊಂಡಿದ್ದು. Vivo Y52s ಗೆ ಒಟ್ಟು 164.15 x 75.35 x 8.4 mm ವಿಸ್ತೀರ್ಣವನ್ನು ಒಳಗೊಂಡಿದ್ದು,185.5 ಗ್ರಾಮ್ ತೂಕವಿದೆ.

Advertisement

Udayavani is now on Telegram. Click here to join our channel and stay updated with the latest news.

Next