Advertisement
ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಆಶ್ರಯಧಿದಲ್ಲಿ ನಗರದ ಕೇಂದ್ರ ಮೈದಾನದ ಗುಡ್ವಿನ್ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾಧಿರಂಭದಲ್ಲಿ ಅವರು ರವಿಧಿವಾರ ಮಾತನಾಡಿದರು. ವಿವೇಕಾನಂದರನ್ನು ಅರ್ಥೈಸಿಧಿಕೊಳ್ಳದೇ ಭಾರತವನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ದೇಶದ ಶ್ರೇಷ್ಠ ಪರಂಪರೆ, ಆಧ್ಯಾತ್ಮಿಕ ಸಂಸ್ಕೃತಿಯನ್ನು ಜಗತ್ತಿಗೇ ಬೋಧಿಸಿದ ಮಹಾನ್ ಪ್ರೇರಕ ಶಕ್ತಿ ಅವರು. ಯುವಕರ ಮೇಲೆ ಅವರು ಇಟ್ಟ ನಂಬಿಕೆ ಅಪಾರ. ಸ್ವಾಮೀಜಿಯವರ ಕನಸಿನಂತೆ ಸದೃಢ ಭಾರತ ಕಟ್ಟುವಲ್ಲಿ ಯುವ ಸಮೂಹ ಶ್ರಮಿಸಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಭಾರತವನ್ನು ಸಶಕ್ತವನ್ನಾಗಿಸಲು ಯುವಕರು ಮುಂದಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ತಿರುವಣ್ಣಾಮಲೈ ಶ್ರೀ ಶಾರದಾ ಆಶ್ರಮದ ಮಾತಾಜಿ ಯತೀಶ್ವರಿ ಕೃಷ್ಣಪ್ರಿಯ ಅಂಬಾಜಿ ಅವರು ಮಾತನಾಡಿ, ಸ್ವಾಮೀಜಿ ಮತ್ತು ನಿವೇದಿತಾರ ಸಂದೇಶ, ಸಾಹಿತ್ಯಗಳು ಸಾರ್ವಕಾಲಿಕ. ಅವರ ಸಾಹಿತ್ಯಗಳಂತೆ ಬದುಕಿದರೆ ಜೀವನ ಸಾರ್ಥಕ್ಯ ಪಡೆಯುತ್ತದೆ. ಇಡೀ ವಿಶ್ವಕ್ಕೇ ಭಾರತೀಯ ಸಂಸ್ಕೃತಿಯ ಸಿರಿವಂತಿಕೆಯನ್ನು ಬೋಧಿಸಿದ ಅವರು ನಮ್ಮೆಲ್ಲರ ಆದರ್ಶವಾಗಬೇಕು ಎಂದು ಅಭಿಪ್ರಾಯಪಟ್ಟರು. ವಿವೇಕಾನಂದ ಕೊಲಾಜ್ ವಿಶ್ವ ದಾಖಲೆಗೆ ಪ್ರವೇಶ
ಮೂಲ್ಕಿಯ ಪಂಜಿನಡ್ಕ ಕೆಪಿಎಸ್‌ಕೆ ಪ್ರೌಢಶಾಲೆಯ ಕಲಾ ಶಿಕ್ಷಕ ವೆಂಕಿ ಪಲಿಮಾರ್ ಮತ್ತು ವಿದ್ಯಾರ್ಥಿಗಳು ನಿರ್ಮಿಸಿದ 21×16 ಅಡಿ ಎತ್ತರದ ವಿವೇಕಾನಂದರ ಕೊಲಾಜ್ ಚಿತ್ರ ಮತ್ತು 10 ನಿಮಿಷದಲ್ಲಿ 108 ಸೂರ್ಯ ನಮಸ್ಕಾರ ಮಾಡಿದ ಯುವ ಬ್ರಿಗೇಡ್ ಕಾರ್ಯಕರ್ತ ನಿರಂಜನ್ ಶೆಟ್ಟಿ ಅವರ ಸಾಧನೆ ವಿಶ್ವ ದಾಖಲೆಗೆ ಪ್ರವೇಶ ಪಡೆದಿದೆ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಈ ವೇಳೆ ಪ್ರಕಟಿಸಿದರು.
Related Articles
Advertisement
ವಿವೇಕಾನಂದ, ನಿವೇದಿತಾರ ಸಾಹಿತ್ಯ ಪುಸ್ತಕಗಳನ್ನು ಪುತ್ತೂರು ವಿವೇಕಾನಂದ ತಾಂತ್ರಿಕ ಕಾಲೇಜಿನಲ್ಲಿರುವ ವಿವೇಕ, ನಿವೇದಿತಾರ ಸಾಹಿತ್ಯ ರ್ಯಾಕ್‌ಗೆ ನೀಡುವ ಸಲುವಾಗಿ ಸಾಂಕೇತಿಕವಾಗಿ ಯುವ ಬ್ರಿಗೇಡ್ ಮಂಗಳೂರು ವಿಭಾಗ ಸಂಚಾಲಕ ಮಂಜಯ್ಯ ನೇರಂಕಿ ಅವರಿಗೆ ಹಸ್ತಾಂತರಿಸಲಾಯಿತು. ವಿವೇಕಾನಂದರ ಲೋಗೋ ಹೊಂದಿರುವ ಟೀಶರ್ಟ್‌ಗಳನ್ನು ಈ ವೇಳೆ ಬಿಡುಗಡೆಗೊಳಿಸಲಾಯಿತು.
ಸಮ್ಮೇಳನದ ಸಂಚಾಲಕ ಗಿರಿಧರ ಶೆಟ್ಟಿ ಉಪಸ್ಥಿತರಿದ್ದರು. ಯುವ ಬ್ರಿಗೇಡ್ ರಾಜ್ಯ ಸಂಚಾಲಕ ನಿತ್ಯಾನಂದ ವಿವೇಕವಂಶಿ ಸ್ವಾಗತಿಸಿಧಿದರು. ಸೋದರಿ ನಿವೇದಿತಾ ಪ್ರತಿಧಿಷ್ಠಾನದ ಸ್ವಾತಿ ಮಂಗಳೂರು ನಿರೂಪಿಸಿದರು.
ಯುವ ಬ್ರಿಗೇಡ್ ನಿರ್ಣಯಗಳುಸೋದರಿ ನಿವೇದಿತಾ ಅವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ರಾಜ್ಯಾದ್ಯಂತ 150 ಸಮ್ಮೇಳನಗಳ ಆಯೋಜನೆ ಮತ್ತು ಇದರ ಸಮಾರೋಪದ ಅಂಗವಾಗಿ ಸೆ. 11, 12ರಂದು ಬೆಳಗಾವಿಯಲ್ಲಿ ಸಾಹಿತ್ಯ ಸಮ್ಮೇಳನ ಏರ್ಪಡಿಸುವುದು, ಫೆ. 14ರಂದು ಪೌರ ಕಾರ್ಮಿಕರ ಕಾಲನಿಗಳಿಗೆ ಅಥವಾ ವೃದ್ಧಾಶ್ರಮಗಳಿಗೆ ಭೇಟಿ ನೀಡುವ ನಿರ್ಣಯಗಳನ್ನು ಯುವ ಬ್ರಿಗೇಡ್ ಕೈಗೊಂಡಿದೆ. ನಿರ್ಣಯ ಪ್ರಕಟಿಸಿದ ಯುವಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ನಿವೇದಿತಾ 150ನೇ ವರ್ಷಾಚರಣೆ ಪ್ರಯುಕ್ತ ವಿವೇಕಾನಂದರ ಚಿಂತನೆಗಳನ್ನು ಮತ್ತು ನಿವೇದಿತಾ ಅವರ ಕಲ್ಪನೆಗಳನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯಕ್ಕಾಗಿ ಸಮ್ಮೇಳನಗಳು ಮಹತ್ವ ಪಡೆಯಲಿವೆ ಎಂದರು.