Advertisement

ಕೊಡಿಯಾಲ್‌ ಬೈಲ್‌: ವಿವೇಕಾನಂದ ಜಯಂತಿ 

09:17 AM Jan 13, 2018 | Team Udayavani |

ಮಹಾನಗರ: ವಿವೇಕಾನಂದರ ತತ್ತ್ವ ಆದರ್ಶದಂತೆ ಸೌಹಾರ್ದಯುತವಾದ ಜೀವನವನ್ನು ನಡೆಸುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಗತ್ಯ. ಆ ನಿಟ್ಟಿನಲ್ಲಿ ವಿವೇಕಾನಂದರ ಆದರ್ಶಗಳನ್ನು ಪಾಲಿಸೋಣ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

Advertisement

ನಗರದ ಕೊಡಿಯಾಲಬೈಲ್‌ನಲ್ಲಿರುವ ವಿವೇಕ ಉದ್ಯಾನವನದಲ್ಲಿ ಶುಕ್ರವಾರ ಆಯೋಜಿಸಿದ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕ ಜೆ.ಆರ್‌. ಲೋಬೋ ಮಾತನಾಡಿ, ಈ ಪಾರ್ಕ್‌ನ ಅಭಿವೃದ್ಧಿಗೆ ಮಾತ್ರವಲ್ಲದೇ ಕೋಡಿಯಾಲ್‌ ಬೈಲ್‌ ವಾರ್ಡನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಕಾರ್ಪೊರೇಟರ್‌ ಪ್ರಕಾಶ್‌ ಬಿ. ಸಾಲ್ಯಾನ್‌ ಅವರ ಕಾರ್ಯವನ್ನು ಶ್ಲಾಘಿಸಿದರು. 

ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಾಜಿ, ಬಿಜೈ ಚರ್ಚ್‌ ಧರ್ಮಗುರು ವಿಲ್ಸನ್‌ ಡಿ’ಸೋಜಾ, ಮುಡಾ ಅಧ್ಯಕ್ಷ ಸುರೇಶ್‌ ಬಳ್ಳಾಲ್‌, ದ.ಕ. ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾದ ಹರೀಶ್‌ ಕುಮಾರ್‌, ಪಾಲಿಕೆಯ ಮುಖ್ಯ ಸಚೇತಕ ಶಶಿಧರ್‌ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಪೊರೇಟರ್‌ಗಳಾದ ಭಾಸ್ಕರ್‌ ಮೊಯಿಲಿ, ಅಬ್ದುಲ್‌ ಲತೀಫ್, ಕೇಶವ್‌ ಮರೋಳಿ, ವಿಶ್ವಾಸ್‌ ಕುಮಾರ್‌ದಾಸ್‌,
ಕದ್ರಿ ದೇವಸ್ಥಾನದ ಟ್ರಸ್ಟಿ ಸುರೇಶ್‌ ಕದ್ರಿ, ಅರುಣ್‌ ಕುವೆಲ್ಲೊ, ರಮಾನಂದ ಭಂಡಾರಿ, ಮುಖ್ಯೋಪಾಧ್ಯಾಯಿನಿ ಲತೀಶ್ಯಾ, ಗ್ರೆಟ್ಟಾ , ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ಕೃಷ್ಣ ಎಲ್ಲೂರು, ದೇವಿಪ್ರಸಾದ್‌ ಕದ್ರಿ, ಅರುಣ್‌ ಕದ್ರಿ, ಕಿಶನ್‌, ಪೃಥ್ವಿರಾಜ್‌, ಜಯರಾಮ್‌, ಮಮತಾ ಶೆಟ್ಟಿ, ಭರತ್‌, ಹರೀಶ್‌, ದೇವದಾಸ್‌, ಹರೀಶ್‌ ಉಳ್ಳಾಲ್‌ ಉಪಸ್ಥಿತರಿದ್ದರು. ಕಾರ್ಪೊರೇಟರ್‌ ಪ್ರಕಾಶ್‌ ಬಿ. ಸಾಲ್ಯಾನ್‌ ಸ್ವಾಗತಿಸಿದರು. ಪ್ರತಾಪ್‌ ಸಾಲ್ಯಾನ್‌ ವಂದಿಸಿದರು. ರಘುರಾಜ್‌ ಕದ್ರಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next