Advertisement
ಲಕ್ಷಾಂತರ ಹೂವುಗಳನ್ನು ಬಳಿಸಿ ವಿವೇಕಾನಂದರ 16 ಅಡಿ ಎತ್ತರದ ಪ್ರತಿಮೆ, ಚಿಕಾಗೋ ವಿವೇಕಾ ನಂದ ಸ್ಮಾರಕ, ಬೇಲೂರು ವಿವೇಕಾನಂದರ ಮಠ, ಕನ್ಯಾಕುಮಾರಿ ವಿವೇಕಾನಂದ ಸ್ಮಾರಕ ಸೇರಿ ದಂತೆ ವಿವಿಧ ಪ್ರತಿಕೃತಿಗಳನ್ನು ನಿರ್ಮಿಸ ಲಾಗುತ್ತಿದ್ದು, ಇವುಗಳ ಜತೆಗೆ ವಿವೇಕಾನಂದ ಸಂದೇಶ , ಸಾಧನೆಗಳ ಕಾರ್ಯಕ್ರಮ ನಡೆಯಲಿದೆ.
Related Articles
Advertisement
ಕನ್ಯಾಕುಮಾರಿ ಸ್ವಾಮಿ ವಿವೇಕಾನಂದ ಸ್ಮಾರಕ: ಗಾಜಿನ ಮನೆಯ ಹೃದಯ ಭಾಗದಲ್ಲಿ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಗೆ ಭೇಟಿ ಕೊಟ್ಟ ದೇವಸ್ಥಾನ, ಕಡಲ ತುದಿಯಲ್ಲಿ ನಿಂತು ಭವ್ಯ ಭಾರತವನ್ನು ಕಂಡ ಪರಿ, ಸದ್ಯ ಅಲ್ಲಿರುವ ವಿವೇಕಾನಂದ ಶಿಲೆಯ ಮಾದರಿಯನ್ನು 1.6 ಲಕ್ಷ ಹೂವುಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ. ಈ ಮಾದರಿಯು 80×40ಅಡಿ ಅಳತೆ ಇದ್ದು,
16ಅಡಿಯ ಪ್ರತಿಮೆ ಹಾಗೂ 21ಅಡಿ ಉದ್ದ, 17ಅಡಿ ಎತ್ತರ, 8ಅಡಿ ಅಗಲದ ದೇವಸ್ಥಾನ ಮಾದರಿ ಇಲ್ಲಿರಲಿದೆ. 75 ಸಾವಿರ ಕೆಂಪು, ಬಿಳಿ, ಹಳದಿ ಗುಲಾಬಿ ಹೂವುಗಳು, 75 ಸಾವಿರ ಸೇವಂತಿಗೆ, 3 ಸಾವಿರ ವಿವಿಧ ಜಾತಿಯ ಎಲೆ ಗಳು, 2 ಸಾವಿರ ವಿಶೇಷ ಹೂವುಗಳನ್ನು ಬಳಸಿ ಐವರು ಕಲಾವಿದರು 40 ಮಂದಿ ಸಹಾಯಕರ ತಂಡವು ಈ ಮಾದರಿಯನ್ನು ನಿರ್ಮಿಸುತ್ತಿದೆ.
ಬೇಲೂರು ಮಠ ದೇಗುಲ- ಚಿಕಾಗೊ ಸ್ಮಾರಕ: ಪಶ್ಚಿಮ ಬಂಗಾಳದಲ್ಲಿರುವ ಬೇಲೂರು ಮಠದ ವಿವೇಕಾನಂದ ದೇವಸ್ಥಾನ ಮಾದರಿಯನ್ನು 6 ಅಡಿ ಉದ್ದ, 3 ಅಡಿ ಅಗಲದಲ್ಲಿ ನಿರ್ಮಿಸ ಲಾಗುತ್ತಿದೆ. ಈ ದೇವಾಲಯದ ಮಾದರಿ ಮೇಲೆ ಓಂ ಅಕ್ಷರವು ಅರಳಲಿದೆ. ಜತೆಗೆ ವಿವೇಕಾ ನಂದರನ್ನು ವಿಶ್ವಕ್ಕೆ ಪರಿಚಯಿಸಿದ ಚಿಕಾಗೊ ನಗರದಲ್ಲಿರುವ ಚಿಕಾಗೋ ಉದ್ಯಾ ನದ ಸ್ಮಾರಕ ಮಾದರಿಯಲ್ಲಿಯೇ ಹೂವಿನ ಮಂಟಪ ನಿರ್ಮಿಸಲಾಗುತ್ತಿದೆ. ಸ್ಮಾರಕ ಮಾ¨ ರಿಗೆ 1.5 ಲಕ್ಷ ಹೂವುಗಳನ್ನು ಬಳಸಲಾಗುತ್ತಿದೆ.
ವರ್ಟಿಕಲ್ ಗಾರ್ಡ್‌ನ್: ಗಾಜಿನ ಮನೆ ಬಲಭಾಗದಲ್ಲಿ ವರ್ಟಿಕಲ್ ಗಾರ್ಡ್‌ನ್ ಮೂಲಕ ವಿವೇಕಾನಂದರು ಬೆಂಗಳೂರಿಗೆ ಭೇಟಿ ನೀಡಿದ್ದ ನೆನಪನ್ನು ಕಟ್ಟಿಕೊಡಲಾಗುತ್ತಿದೆ. 13×13 ಅಡಿ ಸುತ್ತಳತೆ, 11 ಅಡಿ ಎತ್ತರದ ಈ ಗಾರ್ಡ್‌ನ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಇನ್ನು ಗಾಜಿನ ಮನೆ ಸುತ್ತ ಹೂವಿನ ಪಿರಮಿಡ್ಡುಗಳು ಹಾಗೂ ಕಲಾವಿದರ ಕೈಚಳಕದಲ್ಲಿ ಮೂಡಿ ಬಂದಿರುವ ಸ್ವಾಮಿ ವಿವೇಕಾನಂದರ ಉಬ್ಬು ಶಿಲ್ಪಗಳು ಇರಲಿವೆ. ಇವುಗಳ ಜತೆಗೆ ವಿವಿಧ ವಿನ್ಯಾಸದ ಪರಿಸರ ಸ್ನೇಹಿ, ವರ್ಟಿಕಲ್ ಮಾದರಿ ಪ್ರದರ್ಶನ, ಎಚ್‌ಎಎಲ್, ಬಿಡಿಎ, ಬಿಬಿಎಂಪಿ ಸೇರಿದಂತೆ ವಿವಿಧ ಸಂಸ್ಥೆಗಳು ಬೆಳೆಸಿರುವ ಹೂವುಗಳ ಪ್ರದರ್ಶನ ಇರಲಿದೆ.
1.6 ಕೋಟಿ ರೂ. ವೆಚ್ಚ, 6 ಲಕ್ಷ ಹೂ ಬಳಕೆ: ಜ.17ರಿಂದ 26ರವೆರೆಗೆ 10 ದಿನಗಳ ಕಾಲ ಪ್ರದರ್ಶನ ನಡೆಯಲಿದ್ದು, ತಾಜಾತನ ಹಾಗೂ ಆಕರ್ಷಣೆ ಕಾಯ್ದುಕೊಳ್ಳಲು ಎರಡು ಬಾರಿ ಹೂಗಳನ್ನು ಬದಲಿಸಬೇಕಾಗುತ್ತದೆ. ಪ್ರದರ್ಶ ನಕ್ಕೆ ಆರು ಲಕ್ಷ ಹೂವುಗಳನ್ನು ಬಳಸುತ್ತಿದ್ದು, ಒಟ್ಟಾರೆ 1.6 ಕೋಟಿ ರೂ. ವೆಚ್ಚದಲ್ಲಿ ಸ್ವಾತಂತ್ರೊತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ಲಾಲ್‌ಬಾಗ್ ಸಸ್ಯತೋಟ ಉಪ ನಿರ್ದೇಶಕ ಎಂ.ಆರ್.ಚಂದ್ರಶೇಖರ್ ತಿಳಿಸಿದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ಮಾತನಾಡಿ, ಈ ಬಾರಿ ಪ್ರದರ್ಶನಕ್ಕೆಆರು ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ. ಒಂದು ಅಗ್ನಿ ಶಾಮಕ ದಳ, ಪ್ಯಾರಾ ಮೆಡಿಕಲ್‌ಫೋರ್ಸ್ ಒಳಗೊಂಡು 5 ಆ್ಯಂಬುಲೆನ್ಸ್, 37 ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕ್ಲೋಕ್ ರೂಂ ಸೌಲಭ್ಯವಿದೆ, ಲಾಲ್‌ಬಾಗ್‌ನಲ್ಲಿಯೇ ಪೊಲೀಸ್ ಔಟ್‌ಪೋಸ್ಟ್ ತೆರೆಯಲಾಗುತ್ತಿದೆ. 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಭದ್ರತೆಯಿರಲಿದೆ ಎಂದರು.
ವಾಹನ ನಿಲುಗಡೆ: ಪ್ರದರ್ಶನದ ವೇಳೆ ಲಾಲ್‌ಬಾಗ್‌ನಲ್ಲಿ ವಾಹನ ಪ್ರವೇಶ, ನಿಲುಗಡೆ ನಿಷೇಧಿಸಲಾಗಿದೆ. ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಮತ್ತು ಪ್ರವಾಸಿಗರು ವಾಹನಗಳನ್ನು ಶಾಂತಿನಗರ ಬಸ್‌ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲ್ದಾಣ, ಜೆ.ಸಿ.ರಸ್ತೆ ಮಯೂರ ಹೋಟೆಲ್ ಬಳಿಯ ನಿಲುಗಡೆ ಮಾಡಬಹು ದಾಗಿದೆ. ಜತೆಗೆ ಅಲ್-ಅಮೀನ್ ಕಾಲೇಜು ಮೈದಾನದಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಶಾಲಾ ಮಕ್ಕಳಿಗೆ ಉಚಿತ ಪ್ರವೇಶ: ಶಾಲಾ ಮಕ್ಕಳಿಗೆ ಫಲ ಪುಷ್ಪ ಪ್ರದರ್ಶನವನ್ನು ಉಚಿತವಾಗಿ ವೀಕ್ಷಿಸಲು ತೋಟಗಾರಿಕೆ ಇಲಾಖೆ ಅನುಕೂಲ ಕಲ್ಪಿಸಿ ಕೊಟ್ಟಿದೆ. ಜ,18, 20, 21, 22, 23, 24 ರಂದು ಖಾಸಗಿ ಮತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಆಯಾ ಶಾಲೆಯ ಗುರುತಿನ ಚೀಟಿಯೊಂದಿಗೆ ಆಗಮಿಸಿ ವೀಕ್ಷಣೆ ಮಾಡಬಹುದಾಗಿದೆ.
ಟಿಕೆಟ್ ದರ ಎಷ್ಟು?: ವಯಸ್ಕರಿಗೆ 70 ರೂ. ಹಾಗೂ ಮಕ್ಕಳಿಗೆ 20 ರೂ. ಉದ್ಯಾನದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಟಿಕೆಟ್ ಲಭ್ಯ.
ಸಮಯ: ಬೆಳಗ್ಗೆ 9 ರಿಂದ 6.30.
ಇತರೆ ವಿಶೇಷತೆಗಳು-10 ದೇಶಗಳ ಹೂವುಗಳ ಸೇರಿದಂತೆ 2 ಸಾವಿರ ವಿಶೇಷ ಹೂವುಗಳ ಬಳಕೆ -ವಾರ್ತಾ ಇಲಾಖೆಯಿಂದ ವಿವೇಕಾ ನಂದ ಕುರಿತ ಐತಿಹಾಸಿಕ ಛಾಯಾ ಚಿತ್ರ ಹಾಗೂ ಸಾಕ್ಯಾಚಿತ್ರ ಪ್ರದರ್ಶನ -ಬ್ಯಾಂಡ್ ಸ್ಟಾಂಡ್ ಬಳಿ ವಿವೇಕಾ ನಂದರ ನೀತಿ ಕಥೆ ದೃಶ್ಯ ಪ್ರಾತ್ಯಕ್ಷಿಕೆ. -ಉದ್ಘಾಟನೆ ದಿನ 1008 ಮಕ್ಕಳಿಂದ ವಿವೇಕಾನಂದ ವೇಷಭೂಷಣೆ