Advertisement

Vaccine War: ಸಿನಿಮಾ ಪ್ರಚಾರ ಮಾಡಿಸಲು ಯೋಗಿ ಆದಿತ್ಯನಾಥ್‌ ಭೇಟಿಯಾದ ವಿವೇಕ್‌ ಅಗ್ನಿಹೋತ್ರಿ

04:09 PM Oct 09, 2023 | Team Udayavani |

ಲಕ್ನೋ: ʼಕಾಶ್ಮೀರ್‌ ಫೈಲ್ಸ್‌ʼ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ ʼದಿ ವ್ಯಾಕ್ಸಿನ್‌ ವಾರ್‌ʼ ಸಿನಿಮಾ ಇತ್ತೀಚೆಗೆ ರಿಲೀಸ್‌ ಆಗಿದೆ. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ.

Advertisement

ಈ ನಡುವೆ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿಯಾದ ಫೋಟೋವನ್ನು ಹಂಚಿಕೊಂಡಿದ್ದಾರೆ.

‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಪ್ರಚಾರದ ವಿಚಾರವಾಗಿ ಅವರನ್ನು ಭೇಟಿಯಾಗಿದ್ದೇನೆ. ವಿಜ್ಞಾನವೇ ಭವಿಷ್ಯ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ವಿದ್ಯಾರ್ಥಿಗಳಿಗಾಗಿ ಚಲನಚಿತ್ರವನ್ನು ಪ್ರದರ್ಶಿಸಲು ನಾವು ಅವರಿಗೆ ಮನವಿ ಮಾಡಿದ್ದೇವೆ” ಎಂದು ಅಗ್ನಿಹೋತ್ರಿ ಎಎನ್‌ಐಗೆ ತಿಳಿಸಿದ್ದಾರೆ.

“ಧನ್ಯವಾದಗಳು ಸನ್ಮಾನ್ಯ ಯೋಗಿ ಆದಿತ್ಯನಾಥ್ ಅವರೇ ನಿಮ್ಮ ಸ್ಪೂರ್ತಿದಾಯಕ ಮಾತುಗಳಿಗಾಗಿ ಮತ್ತು ʼದಿ ವ್ಯಾಕ್ಸಿನ್‌ ವಾರ್‌ʼ ಮೆಚ್ಚುಗೆಗಾಗಿ. ಯುಪಿಯ ಅಭೂತಪೂರ್ವ ಬೆಳವಣಿಗೆಯಲ್ಲಿ ವಿಜ್ಞಾನದ ಮೇಲೆ ನಿಮ್ಮ ದೃಷ್ಟಿಕೋನ ತಿಳಿದುಕೊಳ್ಳಲು ನನಗೆ ಸಂತೋಷವಾಗಿದೆ” ವಿವೇಕ್‌ ಅಗ್ನಿಹೋತ್ರಿ ಭೇಟಿ ವೇಳೆಗಿನ ಫೋಟೋವನ್ನು ಹಂಚಿಕೊಂಡು ಬರೆದುಕೊಂಡಿದ್ದಾರೆ.

ಸದ್ಯ ವಿವೇಕ್‌ ಅಗ್ನಿಹೋತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿ ಆಗಿರುವ ಫೋಟೋ ವೈರಲ್‌ ಆಗಿದೆ.

Advertisement

ನಾನಾ ಪಾಟೇಕರ್, ಅನುಪಮ್ ಖೇರ್ ,ಪಲ್ಲವಿ ಜೋಶಿ, ಸಪ್ತಮಿ ಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next