Advertisement

Vittalpadanur: 36 ಗ್ರಾಂ ಚಿನ್ನಾಭರಣ ಕಳವು; ಪ್ರಕರಣ ದಾಖಲು

08:08 PM Sep 18, 2024 | Team Udayavani |

ವಿಟ್ಲ: ವಿಟ್ಲಪಟ್ನೂರಿನ ಕುಂಟುಕುಡೆಲು ನಿವಾಸಿ ಲೀಲಾ ಕೆ. ಅವರ ಮನೆಗೆ ಮಂಗಳವಾರ ಹಾಡಹಗಲೇ ಹಿಂಬಾಗಿಲ ಮೂಲಕ ನುಗ್ಗಿದ ಕಳ್ಳರು 36 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ.

Advertisement

ಲೀಲಾ ಬೆಳಗ್ಗೆ ಮನೆಗೆ ಬೀಗ ಹಾಕಿ ಮಗಳೊಂದಿಗೆ ಕೊಡಂಗಾಯಿಗೆ ತೆರಳಿದ್ದರು. ಮಧ್ಯಾಹ್ನ ಮರಳಿದಾಗ ಹಿಂಭಾಗದ ಬಾಗಿಲನ್ನು ಕಳ್ಳರು ಮುರಿದು ಒಳಪ್ರವೇಶಿಸಿ ಕಪಾಟಿನಲ್ಲಿದ್ದ 1.46 ಲಕ್ಷ ರೂ. ಮೌಲ್ಯದ ಒಟ್ಟು 36 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next