Advertisement

ಪ್ರತಿಭೆಗಳಿಗೆ ಸಮ್ಮೇಳನ ವೇದಿಕೆ ಒದಗಿಸಿದೆ: ವೀಕ್ಷಿತಾ

08:04 AM Jan 14, 2019 | Team Udayavani |

ವಿಟ್ಲ: ಪೆರುವಾಯಿ ಅನು ದಾನಿತ ಹಿ.ಪಾ. ಶಾಲೆಯಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌, ಮಕ್ಕಳ ಲೋಕ ಆಶ್ರಯದಲ್ಲಿ ನಡೆದ 14ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಿತು.

Advertisement

ಸಮ್ಮೇಳನದ ಅಧ್ಯಕ್ಷೆ ಪೆರುವಾಯಿ ಅನುದಾನಿತ ಶಾಲೆಯ ವೀಕ್ಷಿತಾ ಮಾತನಾಡಿ, ಸಮ್ಮೇಳನ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಮಕ್ಕಳಲ್ಲಿರುವ ಸೃಜನಾತ್ಮಕ ಕಲೆ, ಸಾಹಿತ್ಯ ಇನ್ನಿತರ ಪ್ರತಿಭೆಗಳಿಗೆ ಸಮ್ಮೇಳನ ವೇದಿಕೆ ಒದಗಿ ಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ವಿ.ಮ. ಭಟ್ ಅಡ್ಯನಡ್ಕ, ಸವಿತಾ ಎಸ್‌. ಭಟ್ ಅಡ್ವಾಯಿ, ಬಂಟ್ವಾಳ ಮಕ್ಕಳ ಲೋಕದ ಅಧ್ಯಕ್ಷ ಮಹಾಬಲ ಭಟ್ ನೆಗಳಗುಳಿ, ಶಾಲಾ ಸಂಚಾಲಕ ಸಚಿನ್‌ ಎ. ಅಡ್ವಾಯಿ ಭಾಗವಹಿಸಿದ್ದರು. ಮಕ್ಕಳ ಸಾಹಿತಿ ಶ್ರೀನಿವಾಸ ಭಟ್ ಸೇರಾಜೆ ಅವರನ್ನು ಸಮ್ಮಾನಿಸಲಾಯಿತು.

ವಿಟ್ಠಲ ಪ್ರೌಢಶಾಲೆಯ ನಂದಿತಾ ಕೆ. ಅಭಿನಂದನ ಭಾಷಣ ಮಾಡಿದರು. ಅಳಿಕೆ ಶ್ರೀ ಸತ್ಯಸಾಯಿ ಪ್ರೌಢಶಾಲೆಯ ಅಭಿರಾಮ ಸಮಾರೋಪ ಭಾಷಣ ಮಾಡಿದರು. ಪಕಳಕುಂಜ ವೇಣುಗೋಪಾಲ ಅ. ಹಿ.ಪ್ರಾ. ಶಾಲೆಯ ಮೋಕ್ಷ ಮತ್ತು ಬಳಗ ದಿಂದ ನುಡಿಗೀತೆ ಪ್ರಸ್ತುತಗೊಂಡಿತು.

ವಿಟ್ಲ ಸರಕಾರಿ ಮಾದರಿ ಶಾಲೆಯ ಶ್ರಾವ್ಯಾ ಸ್ವಾಗತಿಸಿದರು. ಕಾನತ್ತಡ್ಕ ಶ್ರೀಕೃಷ್ಣ ವಿದ್ಯೋದಯ ಅನುದಾನಿತ ಹಿ.ಪ್ರಾ. ಶಾಲೆಯ ಮೊಹಮ್ಮದ್‌ ರಾಝಿಕ್‌ ವಂದಿಸಿದರು. ಮುಚ್ಚಿರಪದವು ಅನುದಾನಿತ ಹಿ.ಪ್ರಾ. ಶಾಲೆಯ ಮುಫಿದಾ ನಿರೂಪಿಸಿದರು.

Advertisement

ಇದೇ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಸಾಹಿತ್ಯ ಚಟುವಟಿಕೆಯಲ್ಲಿ ಆಯ್ಕೆಯಾದ ಕಡೇಶಿವಾಲಯ ಸರಕಾರಿ ಹಿ.ಪ್ರಾ. ಶಾಲೆಗೆ ಸಾಹಿತ್ಯ ತಾರೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರೋಪಕ್ಕಿಂತ ಮುಂಚೆ ಸಮ್ಮೇಳನದಲ್ಲಿ ಚಿತ್ತ ಚಿತ್ತಾರ, ಮಕ್ಕಳ ಕವಿಗೋಷ್ಠಿ ಪ್ರಸ್ತುತಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next