Advertisement

Vitla: ಸ್ವರ ಸಿಂಚನ ವಿಟ್ಲ ಪಡಿಬಾಗಿಲಿನಲ್ಲಿ ಸ್ವರ ಮಾಧುರ್ಯ…

02:02 AM Aug 25, 2024 | Team Udayavani |

ಮ್ಯೂಸಿಕ್‌ ಸಂಗೀತಮಯ Mu ತೆಗೆದರೆ sick ಕಾಯಿಲೆ. ಆದ್ದರಿಂದ ನಮ್ಮೆಲ್ಲ ನೋವು, ರುಜಿನ, ಕಾಯಿಲೆ, ಕಸಾಲೆ ದೂರವಾಗಬೇಕಾದರೆ ಸಂಗೀತ, ಹಾಡು ಕೇಳಬೇಕು. ಸಂಗೀತವೆಂದರೆ ಹಾಡುವವರು ಮತ್ತು ಕೇಳುವವರು ಸಮಾನವಾಗಿ ಸುಖೀಸುವ ಸ್ವರ ಪ್ರಪಂಚವು ವಿಟ್ಲ ಪಡಿಬಾಗಿಲು ಮುವಾಜೆ ಸಭಾಂಗಣದಲ್ಲಿ ವರಮಹಾಲಕ್ಷ್ಮೀ ಪೂಜೆಯ ಸಂಭ್ರಮದಲ್ಲಿ “ಸ್ವರಮಾಧುರ್ಯ’ ಗಾಯನ ಕಾರ್ಯಕ್ರಮ ನಡೆಯಿತು.

Advertisement

ಮೊದಲಿಗೆ ಶ್ರೀ ಗಣನಾಥ ಸಿಂಧೂರ ವರ್ಣ ಹಾಡಿನೊಂದಿಗೆ ಶ್ರೀ ವರಲಕ್ಷ್ಮೀ ಶ್ರೀ ರಾಗ ಹಾಡಿನೊಂದಿಗೆ ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಕಾಮಾಕ್ಷಿ ವರಲಕ್ಷ್ಮೀ ರಾಗ ವಸಂತ,ಪಾಹಿಸುವೆ ಶಿವರಂಜಿನಿ ರಾಗ, ಎಂದರೋ ಮಹಾನುಭಾವುಲು ಶ್ರೀರಾಗ, ಪಂಚರತ್ನ ತ್ಯಾಗರಾಜರ ಕೃತಿ, ಸಾದರ ಮವ ನಿರುಪಮ ಸರಸ್ವತಿ ರಾಗ, ತಿಲ್ಲಾನ ಬೃಂದಾವನಿ ಸಾರಂಗ ಹಾಡಿನೊಂದಿಗೆ ಸಮಾಪ್ತಿಯಾಯಿತು.

ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್‌ ನಿರ್ದೇಶನದಲ್ಲಿ ಸಿಂಚನಲಕ್ಷ್ಮೀ ಕೋಡಂದೂರ್‌, ಭಾಗ್ಯಶ್ರೀ ಪಡಿಬಾಗಿಲು, ವಾಣಿ, ಪ್ರತಿಭಾ, ಆದರ್ಶಿನಿ, ಸಾತ್ವಿಕ ಮತ್ತಿತರರು ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ, ದಾಸರ ಗೀತೆಗಳನ್ನು ಸ್ವರ ಸಿಂಚನ ಸಂಗೀತ ಶಾಲಾ ವಿದ್ಯಾರ್ಥಿಗಳು ಜತೆಯಲ್ಲಿ ಹಾಡಿ ಎಲ್ಲರ ಮನ ಸೆಳೆದು ರಂಜಿಸಿದರು.

ಕುಮಾರ್‌ ಪೆರ್ನಾಜೆ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next