Advertisement

Bihar: ಸಂಗೀತ ಕಾರ್ಯಕ್ರಮದ ವೇಳೆ ಶೀಟ್‌ ಕುಸಿದು 100 ಮಂದಿಗೆ ಗಾಯ

09:05 PM Sep 04, 2024 | Team Udayavani |

ಪಾಟ್ನಾ: ಸಂಗೀತ ಕಾರ್ಯಕ್ರಮದ ಪ್ರಯುಕ್ತ ಹಾಕಿಸಲಾಗಿದ್ದ ತಗಡಿನ ಛಾವಣಿ ಕುಸಿದು ಕನಿಷ್ಠ 100 ಮಂದಿ ಗಾಯಗೊಂಡಿದ್ದಾರೆ. ಬಿಹಾರದ ಛಪ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

Advertisement

ಸಂಗೀತ ಕಾರ್ಯಕ್ರಮ ವೀಕ್ಷಿಸಲು ಹಲವರು ತಾತ್ಕಾಲಿಕ ತಗಡಿನ ಛಾವಣಿಗಳನ್ನು ಏರಿದ್ದರು. ಜನರ ಭಾರ ತಾಳಲಾರದೆ ತಗಡಿನ ಶೀಟ್‌ ಕೆಳಕ್ಕೆ ಬಿದ್ದಿದೆ. ಹೀಗಾಗಿ, ಅದರ ಕೆಳಗೆ ಇದ್ದ 100ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 10 ಮಂದಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸ್ಥಳದಲ್ಲಿ ಕಾಲ್ತುಳಿತ ಘಟನೆಯ ಮಾದರಿ ಸ್ಥಿತಿ ಉಂಟಾಗಿತ್ತು.

ಇದನ್ನೂ ಓದಿ: Election: ಜಮ್ಮು- ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ: ರಾಮ್‌ ಮಾಧವ್‌

 

Advertisement

Udayavani is now on Telegram. Click here to join our channel and stay updated with the latest news.

Next