Advertisement

Martin Movie: ನಾಳೆ ಮಾರ್ಟಿನ್‌ ಮೊದಲ ಹಾಡು ಬಿಡುಗಡೆ

08:10 AM Sep 02, 2024 | Team Udayavani |

ಧ್ರುವ ಸರ್ಜಾ ನಾಯಕರಾಗಿರುವ “ಮಾರ್ಟಿನ್‌’ ಸಿನಿಮಾ ಅಕ್ಟೋಬರ್‌ 11ಕ್ಕೆ ಬಿಡುಗಡೆಯಾಗುವುದಾಗಿ ಈಗಾಗಲೇ ಘೋಷಿಸಿಕೊಂಡಿದೆ.

Advertisement

ಇತ್ತೀಚೆಗಷ್ಟೇ ಮುಂಬೈನಲ್ಲಿ ಇಂಟರ್‌ನ್ಯಾಶನಲ್‌ ಪ್ರಸ್‌ ಮೀಟ್‌ ಮಾಡಿ ಚಿತ್ರದ ಟ್ರೇಲರ್‌-1 ಬಿಡುಗಡೆ ಮಾಡಿತ್ತು ತಂಡ. ಈಗ ಚಿತ್ರದ ಮೊದಲ ಹಾಡು ಬಿಡುಗಡೆಗೆ ಸಿದ್ಧವಾಗಿದೆ. ಸಂಗೀತ ನಿರ್ದೇಶಕ ಮಣಿ ಶರ್ಮಾ ಟ್ಯೂನ್‌ ಹಾಕಿರುವ ಹಾಡೊಂದು ಸೆ.3ಕ್ಕೆ ಬಿಡುಗಡೆಯಾಗುತ್ತಿದೆ. ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು, ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌-ಥ್ರಿಲ್ಲರ್‌ ಕಥಾಹಂದರ ಹೊಂದಿ ರುವ “ಮಾರ್ಟಿನ್‌’ ಸಿನಿಮಾವನ್ನು ಎ. ಪಿ ಅರ್ಜುನ್‌ ನಿರ್ದೇಶನ ಮಾಡಿ ದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ನಲ್ಲೂ “ಮಾರ್ಟಿನ್‌’ ಸಿನಿಮಾವನ್ನು ತೆರೆಗೆ ಬರಲಿದೆ.

“ಮಾರ್ಟಿನ್‌’ ಚಿತ್ರ ಆ್ಯಕ್ಷನ್‌ನಲ್ಲಿ ಈ ಹಿಂದಿನ ಸಿನಿಮಾಗಳನ್ನು ಮೀರಿಸಲಿದೆ ಎಂಬುದು ಈಗಾಗಲೇ ಸಿನಿಮಾದ ತುಣುಕುಗಳನ್ನು ನೋಡಿದವರ ಮಾತು. ಅಲ್ಲಿಗೆ “ಮಾರ್ಟಿನ್‌’ ಮಾಸ್‌ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ಮಾರ್ಟಿನ್‌ ಕ್ಟೋಬರ್‌ 11ಕ್ಕೆ ತೆರೆಕಂಡರೆ, ರಜನಿಕಾಂತ್‌ ನಟನೆಯ “ವೆಟ್ಟೈಯಾನ್‌’ ಸಿನಿಮಾ ಅಕ್ಟೋಬರ್‌ 10ಕ್ಕೆ ತೆರೆಕಾಣುತ್ತಿದೆ. ಈ ಮೂಲಕ ಪೈಪೋಟಿ ಜೋರಾಗಿರಲಿದೆ.

ತಮ್ಮ ಸಿನಿಮಾ ಬಿಡುಗಡೆ ಬಗ್ಗೆ ಈ ಹಿಂದೆ ನಿರ್ಮಾಪಕ ಉದಯ್‌ ಮೆಹ್ತಾ ಹೇಳಿದಂತೆ,”ಯಾವ ಸ್ಟಾರ್‌ ಸಿನಿಮಾ ಗಳು ಬೇಕಾದರೂ ಬಿಡುಗಡೆಯಾ ಗಲಿ, ನಮ್ಮ ನಿರ್ಧಾರ ಬದಲಾಗುವುದಿಲ್ಲ. ಏಕೆಂದರೆ ಕನ್ನಡದಿಂದ ತಯಾರಾಗಿರುವ ದೊಡ್ಡ ಮಟ್ಟದ ಬಿಗ್‌ಬಜೆಟ್‌ ಸಿನಿಮಾ “ಮಾರ್ಟಿನ್‌’. ಇಂತಹ ಸಿನಿಮಾ ಬಿಡುಗಡೆ ಹೊತ್ತಲ್ಲಿ ಬೇರೆ ಸಿನಿಮಾಗಳು ನಮ್ಮ ರಾಜ್ಯಕ್ಕೆ ಬರಲು ಯೋಚನೆ ಮಾಡಬೇಕೇ ಹೊರತು ನಾವಲ್ಲ. ಹಾಗಾಗಿ, ನಾವು ಬಿಡುಗಡೆಯ ತಯಾರಿ ಯಲ್ಲಿದ್ದೇವೆ. ಕನ್ನಡದಿಂದ ತಯಾರಾದ ಇಂಡಿಯನ್‌ ಸಿನಿಮಾವಾಗಿ “ಮಾರ್ಟಿನ್‌’ ಗಮನ ಸೆಳೆಯಲಿದೆ’ ಎನ್ನುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.