Advertisement
ಜೀವನ ಒಂದು ನಾಟಕವಾಗಿದ್ದು, ಸೂತ್ರ ಧಾರನನ್ನು ಮರೆತಾಗ ಸೋಲು ಬರುತ್ತದೆ. ಜೀವನ ಕಲೆಯಾಗಬೇಕು,ಬಲೆಯಾಗಬಾರದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಕಲಾವಿದರಿಗೆ ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು. ದೈವತ್ವ ತುಂಬಬೇಕು. ರಾಕ್ಷಸೀ ಪ್ರವೃತ್ತಿಯನ್ನು ದೂರ ಮಾಡಬೇಕು. ಮಾನವೀಯ ಮೌಲ್ಯ ಬೆಳೆದು ಬರಬೇಕು. ಮಾತು ಮತ್ತು ನಡೆ ಒಂದೇ ಆಗಿದ್ದರೆ ಬದುಕು ಸಂದರವಾಗುತ್ತದೆ. ತಾಯಿ ಮೊದಲ ಗುರುವಾಗಿ, ಮನೆ ಮೊದಲ ಪಾಠ ಶಾಲೆಯಾಗಬೇಕು.
ಅದು ಸಮಾಜದ ಬದಲಾವಣೆಗೆ ಕಾರಣವಾಗುತ್ತದೆ. ಸನಾತನ ಧರ್ಮದ ಅನುಷ್ಠಾನದ ಮೂಲಕ ಧರ್ಮದ ಉಳಿವು ಸಾಧ್ಯ ಎಂದು ತಿಳಿಸಿದರು.
Related Articles
Advertisement
ಯಕ್ಷಗುರು ಸಬ್ಬಣಕೋಡಿ ರಾಮ ಭಟ್, ತುಳು ರಂಗಭೂಮಿ ಕಲಾವಿದ ರಮೇಶ್ ಮಾಸ್ತರ್ ಬಿ.ಸಿ.ರೋಡ್, ತಬಲಾ ವಾದಕಿ ಅನಿತಾ ಪ್ರಭು, ಅಣ್ಣದೈವ ಪಾತ್ರಿ ರಾಜ ಬೆಳ್ಚಪ್ಪಾಡ, ಬಂಟ್ವಾಳ ಛಾಯಾಚಿತ್ರಗ್ರಾಹಕ ಹರೀಶ್ ರಾವ್ ಅವರಿಗೆ ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದತ್ತ ಪ್ರಕಾಶ ಆಧ್ಯಾತ್ಮಿಕ ದ್ವೈಮಾಸಿಕ ಪತ್ರಿಕೆಯ 24ನೇ ಸಂಪುಟದ 4ನೇ ಸಂಚಿಕೆಯನ್ನು ಸ್ವಾಮೀಜಿ ಬಿಡುಗಡೆ ಗೊಳಿಸಿದರು. ಉದ್ಯಮಿ ವಾಮಯ್ಯ ಶೆಟ್ಟಿ ಮುಂಬಯಿ, ಮುಖ್ಯ ಶಿಕ್ಷಕಿ ರೇಣುಕಾ ಎಸ್. ರೈ ಉಪಸ್ಥಿತರಿದ್ದರು.
ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಯಶೋಧರ ಸಾಲ್ಯಾನ್, ಜಯಂತ ಆಜೇರು, ಅನಿತಾ, ಸುಬ್ರಹ್ಮಣ್ಯ ಟಿ., ಲೀಲಾ ಪಾದೆಕಲ್ಲು ಸಮ್ಮಾನಿತರನ್ನು ಪರಿಚಯಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಶ್ರೀ ಕ್ಷೇತ್ರದಲ್ಲಿ ಲಲಿತಾ ಪಂಚಮಿ ಮಹೋತ್ಸವದ ಸಂದರ್ಭ ಗಣಪತಿ ಹವನ, ನಾಗತಂಬಿಲ,ಶ್ರೀ ಚಂಡಿಕಾ ಯಾಗ, ಯಾಗದ ಪೂರ್ಣಾಹುತಿ, ಶ್ರೀಮಾತೇ ಭದ್ರಕಾಳಿ ಯಕ್ಷಗಾನ ಬಯಲಾಟ ನಡೆಯಿತು.