Advertisement
ಅಂತಿಮ ಸೆಮಿಸ್ಟರ್ಗೆಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆ. 1ರಿಂದ 14ರ ವರೆಗೆ ತರಗತಿಗಳು ನಡೆಯಲಿವೆ. ಆದರೆ ಇದು ಕಡ್ಡಾಯವಲ್ಲ. ಅಂತಿಮ ಸೆಮಿಸ್ಟರ್‌ನ ಯಾವ ವಿದ್ಯಾರ್ಥಿಯೂ ಭಾಗವಹಿಸಬಹುದು. ಆ. 17ರಿಂದ 21ರವರೆಗೆ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ವೈವಾ ಹಾಗೂ 24ರಿಂದ 30ರವರೆಗೆ ಪರೀಕ್ಷೆಯನ್ನು ಆಫ್ಲೈನ್ ನಲ್ಲೇ (ಸಾಂಪ್ರದಾಯಿಕ ಪದ್ಧತಿ) ನಡೆಸಲಾಗುವುದು. ಸೆ. 15ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ. ಸೆ. 1ರಿಂದ 2020-21ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಲಿವೆ ಎಂದು ವಿಟಿಯು ತಿಳಿಸಿದೆ.
ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಸೆಮಿಸ್ಟರ್‌ಗಳ ವಿದ್ಯಾರ್ಥಿಗಳನ್ನು ಯುಜಿಸಿ ಸೂಚಿಸಿರುವಂತೆ ಹಿಂದಿನ ಸೆಮಿಸ್ಟರ್ ಮತ್ತು ಆಂತರಿಕ ಪರೀಕ್ಷೆ ಅಂಕದ ಆಧಾರದಲ್ಲಿ ತೇರ್ಗಡೆ ಮಾಡಲಾಗುತ್ತದೆ. ಇವರಿಗೆ ವೈವಾ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ನಡೆಸಬಹುದು. ಕ್ಯಾರಿ ಫಾರ್ವರ್ಡ್ ವ್ಯವಸ್ಥೆ ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ಇಂಟರ್ನ್ ಶಿಪ್‌ಗೆ ಅವಕಾಶ ನೀಡಲಾಗಿದೆ.