Advertisement

ರೈಲ್ವೆ ಪೊಲೀಸರಿಗೆ ವಿಸಿಟಿಂಗ್‌ ಕಾರ್ಡ್‌

04:30 PM Jul 22, 2021 | Team Udayavani |

ಬೆಂಗಳೂರು: ರಾಜ್ಯದ ರೈಲು ನಿಲ್ದಾಣ ಹಾಗೂ ರೈಲುಗಳಲ್ಲಿ ಅಪರಾಧ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಲ್ಲೇಮೊದಲ ಬಾರಿಗೆ ಕಾನ್‌ಸ್ಟೆàಬಲ್‌ಗ‌ಳಿಗೆ “ವಿಸಿಟಿಂಗ್‌ಕಾರ್ಡ್‌’ಕೊಡುವಮೂಲಕ ನಾಗರಿಕ ಪೊಲೀಸ್‌ಮಾದರಿಯಲ್ಲಿಯೇ ರೈಲ್ವೆ ಪೊಲೀಸರನ್ನು “ಜನಸ್ನೇಹಿ’ಯನ್ನಾಗಿಮಾಡಲು ರೈಲ್ವೆಪೊಲೀಸರುಮುಂದಾಗಿದ್ದಾರೆ.

Advertisement

ಪ್ರಾಯೋಗಿಕವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈ ಹೊಸ ಯೋಜನೆ ಜಾರಿಯಲ್ಲಿದ್ದು,ಸುಮಾರು 600ಕ್ಕೂ ಅಧಿಕ ಮಂದಿ ಕಾನ್‌ಸ್ಟೆàಬಲ್‌ಗ ‌ಳಿಗೆ ರೈಲ್ವೆ ಪೊಲೀಸ್‌ ಇಲಾಖ ೆಯಿಂದ ತಲಾ100 ವಿಸಿಟಿಂಗ್‌ ಕಾರ್ಡ್‌ಗ ‌ಳನ್ನು ಕೊಡಲಾಗಿದೆ.ಅವುಗ ‌ಳನ್ನು ಅವರು ರೈಲಿನಲ್ಲಿ ಪ್ರಯಾಣಿಸುವಾಗಪ್ರಯಾಣಿಕರಿಗೆ ವಿತರಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ತುರ್ತಾಗಿ ಸ್ಪಂದಿಸಲು ಅವಕಾಶನೀಡಲಾಗುವುದು ಎಂದು ರೈಲ್ವೆ ಮೂಲಗಳುತಿಳಿಸಿವೆ.

ರೈಲುಗಳಲ್ಲಿ ನಡೆಯುವ ಅಪರಾಧ ಪ್ರಕರಣಗಳಬಗ್ಗೆ ಗಮನ ಹರಿಸಲು ರೈಲ್ವೆ ಪೊಲೀಸ್‌ ಕಾನ್‌ಸ್ಟೆàಬಲ್‌ಗ‌ಳು ನಿರಂತರವಾಗಿ ರೈಲುಗಳಲ್ಲಿ ಪ್ರಯಾಣಿಸಬೇಕು. ಹೀಗಾಗಿ ಕೆಲವರು ಮಾನಸಿಕವಾಗಿಯೂ ಕುಗ್ಗಿದ್ದರು. ಈ ಹಿನ್ನೆಲೆಯಲ್ಲಿ ಕಾನ್‌ಸ್ಟೆàಬಲ್‌ಗ‌ಳನ್ನುಮುಖ್ಯವಾಹಿನಿಗೆ ಪರಿಚಯಿಸಲು ಈ ಹೊಸಯೋಜನೆ ಆರಂಭಿಸಲಾಗಿದೆ. ಜತೆಗೆ ರೈಲುಗಳುಮತ್ತು ರೈಲು ನಿಲ್ದಾಣಗಳಲ್ಲಿ ನಡೆಯುವ ಅಪರಾಧಪ್ರಕರಣಗಳ ನಿಯಂತ್ರಣಕ್ಕೂ ಅನುಕೂಲವಾಗಲಿದೆಎಂದು ರೈಲ್ವೆ ಪೊಲೀಸ್‌ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ರೈಲ್ವೆ ಪೊಲೀಸ್‌ ವಿಭಾಗ ‌ ಎಡಿಜಿಪಿ ಭಾಸ್ಕರ್‌ರಾವ್‌ ಮಾರ್ಗ¨ ‌ರ್ಶ® ‌¨ ‌ಲಿ É ಎಸ್ಪಿ ಸಿರಿಗೌರಿಅವರು ಪ್ರಾಯೋಗಿಕ ಹಂತವಾಗಿ ಬೆಂಗಳೂರಿನಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರಹಾಗೂ ಕಂಟೋನ್ಮೆಂಟ್‌, ಬೈಯಪ್ಪ® ‌ಹಳ್ಳಿ, ಕೆ.ಆರ್‌.ಪುರ ಸೇರಿ ನಗರ ವ್ಯಾಪ್ತಿಯಲ್ಲಿ ‌ ಎಲ್ಲ ರೈಲ್ವೆಪೊಲೀಸ್‌ ಠಾಣೆಗಳ ಸಿಬ್ಬಂದಿಗೆ ವಿಸಿಟಿಂಗ್‌ಕಾರ್ಡ್‌ ಹಂಚಲಾಗಿದೆ.ಒಂದೆರಡು ದಿನಗಳಲ್ಲಿ ಬಂಗಾರಪೇಟೆ, ಮಂಡ್ಯ,ಮೈಸೂರು, ಹಾಸನ ಹಾಗೂ ಅರಸಿಕೇರೆ ರೈಲ್ವೆಪೊಲೀಸ್‌ ಸಿಬ್ಬಂದಿಗೂ ವಿಸಿಟಿಂಗ್‌ ಕಾರ್ಡ್‌ ಮಾಡಿಸಲಾಗಿದ್ದು, ರಾಜ್ಯದ 18ಕ್ಕೂ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಅನುಮತಿನೀಡಲಾಗಿದೆ ರೈಲ್ವೆ ಅಧಿಕಾರಿ ವಿವರಿಸಿದರು.

ವಿಸಿಟಿಂಗ್‌ಕಾರ್ಡ್‌ನಲ್ಲಿ ಏನಿರುತ್ತೆ?

Advertisement

ರಾಜ್ಯ ಪೊಲೀಸ್‌ ಮತ್ತು ರೈಲ್ವೆ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಈ ನೂತನ ಯೋಜನೆಜಾರಿಗೆ ತರಲಾಗಿದ್ದು,ಕಾನ್‌ಸ್ಟೆàಬಲ್‌ಗ‌ಳ ಹೆಸರಿನಲ್ಲಿ ವಿಸಿಟಿಂಗ್‌ಕಾರ್ಡ್‌ ಮಾಡಿಸಲಾಗಿದೆ. ರೈಲ್ವೆ ನಿಲ್ದಾಣಹಾಗೂ ರೈಲುಗಳಲ್ಲಿ ಅಪರಾಧ ಚಟುವಟಿಕೆಗಳುಕಂಡು ಬಂದರೆ ಕೂಡಲೇ ಮಾಹಿತಿ ನೀಡುವಉದ್ದೇಶದಿಂದ ಈ ಯೋಜನೆ ಜಾರಿ ತರಲಾಗಿದೆ.ಪೊಲೀಸ್‌ ಸಿಬ್ಬಂದಿಯ ಹೆಸರು, ಠಾಣೆಯಹೆಸರು, ಠಾಣೆಯ ಸಂಪರ್ಕ ಸಂಖ್ಯೆ,ಠಾಣಾಧಿಕಾರಿಯ ಮೊಬೈಲ್‌ ನಂಬರ್‌, ಇಲಾಖೆಇಮೇಲ್‌ ಐಡಿ ಸಮೇತ ವಿಸಿಟಿಂಗ್‌ ಕಾರ್ಡ್‌ಮಾಡಿಸಲು ಅನುಮತಿ ನೀಡಿದ್ದಾರೆ. ಇದಕ್ಕೆ ಟ್ಯಾಗ್‌ ಲೈನ್‌ವೊಂದನ್ನು ಕೊಟ್ಟಿದ್ದು, “ಸದಾ ನಿಮ್ಮಸೇವೆಯಲ್ಲಿ’, ಇಂಗ್ಲಿಷ್‌ನಲ್ಲಿ “ಹ್ಯಾಪಿ ಟು ಹೆಲ್ಪ್’ ಶೀರ್ಷಿಕೆ ಜತೆಗೆ ವಿಸಿಟಿಂಗ್‌ ಕಾರ್ಡ್‌ಗಳನ್ನುಪ್ರಯಾಣಿಕರಿಗೆ ವಿತರಣೆ ಮಾಡಲಾಗಿದೆ. ಪ್ರಾಯೋಗಿಕವಾಗಿ 100 ವಿಸಿಟಿಂಗ್‌ ಕಾರ್ಡ್‌ಗಳನ್ನು ಕೊಡಲಾಗಿದೆ.

ಅವುಗಳು ಖಾಲಿಯಾದ ಬಳಿಕ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯೇ ಮಾಡಿಸಿಕೊÙಬ‌Ûಹುದು. ಅವುಗಳನ್ನು ರೈಲುಗಳಲ್ಲಿ ಪ್ರಯಾಣಿಸುವಾಗ ಸಿಬ್ಬಂದಿ ಆಯ್ದ ಪ್ರಯಾಣಿಕರಿಗೆ ವಿತರಿಸಬಹುದು. ಪ್ರಯಾಣದ ವೇಳೆ ವಸ್ತುಗಳ ಕಳವು, ಲೈಂಗಿಕ ಕಿರಿಕುಳ, ಅವ್ಯವÓ, ಸ್ಥೆ ‌ಹ ಪ್ರಯಾಣಿಕರಿಂದದೌರ್ಜನ್ಯ, ರೈಲು ಬೋಗಿಗಳ ಬಾಗಿಲುಗಳ ಬಳಿ ಅನುಮಾನಾಸ್ಪದ ವ್ಯಕ್ತಿಗಳು ನಿಂತಿದ್ದರೆ ಹಾಗೂ ಇತರೆಸಮಸ್ಯೆಗಳು ಉದ್ಭವಿಸಿದ ಸಂದರ್ಭದಲ್ಲಿ ಪ್ರಯಾಣಿರಲ್ಲಿ ಮಾನಸಿಕ ಧೈರ್ಯ ತುಂಬುವ ಜತೆಗೆ ಹೆಚ್ಚಿನಬಾಂಧವ್ಯ ಮೂಡಿಸಲು ಸಹಕಾರಿಯಾಗಲಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದರು.

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next