Advertisement

ಮಹಿಳಾ ನಿಲಯಕ್ಕೆ ಹುನಗುಂದ ಭೇಟಿ

01:29 PM Jun 02, 2017 | |

ದಾವಣಗೆರೆ: ನಿರಾಶ್ರಿತ ಯುವತಿಯರ ಮದುವೆಮಾಡುವ ಬದಲು, ಅವರಿಗೆ ಸ್ವಂತ ಉದ್ಯೋಗ ಕೊಡಿಸಿ, ಸ್ವಾವಲಂಬಿ ಮಾಡುವತ್ತ ಗಮನ ಹರಿಸಿ ಎಂದು ರಾಜ್ಯ ಮಾನವ ಹಕ್ಕು ಆಯೋಗ ಸದಸ್ಯ ಸಿ.ಜಿ. ಹುನಗುಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

Advertisement

ಗುರುವಾರ ಶ್ರೀರಾಮ ಬಡಾವಣೆಯ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿನೀಡಿದ್ದ ಅವರು, ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿರುವ ಯುವತಿಯರನ್ನು ಮದುವೆ ಮಾಡುವುದೊಂದೇ ಜವಬ್ದಾರಿ ಅಂದುಕೊಳ್ಳಬೇಡಿ. ಯುವತಿಯರು ವಯಸ್ಕರಾದ ನಂತರ ಅವರಿಗೆ ಸ್ವಂತ ಉದ್ಯೋಗ ಹೊಂದಿ, ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ನೆರವಾಗಿ.

ಆ ಮೂಲಕ ಇತರೆಯವರಿಗೆ ನಿಲಯಕ್ಕೆ ಬರಲು ಅವಕಾಶ ಕಲ್ಪಿಸಿಕೊಡಿ ಎಂದರು. ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವುದು ದೊಡ್ಡ ಕೆಲಸವಲ್ಲ. ಅದರೊಟ್ಟಿಗೆ ಸ್ವಂತ ಕಾಲ ಮೇಲೆ ನಿಲ್ಲುವಂತಹ ಉದ್ಯೋಗ, ಕುಶಲ ಕಲೆಗಳ ತರಭೇತಿ ನೀಡಬೇಕು ಅದು ನಿಜವಾದ ಪುನರ್ವಸತಿಯಾಗುತ್ತದೆ.

ಇಲ್ಲಿಯವರೆಗೆ ಮಾಡಿದ್ದನ್ನ ಬಿಡಿ. ಮುಂದೆ ಅವರನ್ನು ಸ್ವಾವಲಂಬಿ ಮಾಡಲು ಶ್ರಮ ವಹಿಸಿ ಎಂದು ಸೂಚಿಸಿದರು. ನಂತರ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ ಅಲ್ಲಿನ 6 ರಿಂದ 18 ವರ್ಷ  ವಯೋಮಾನದವರ ಯೋಗಕ್ಷೇಮ ವಿಚಾರಿಸಿದರು. ಅಡುಗೆ ಮನೆ, ಮಲಗುವ ಕೊಠಡಿ,ಆಡಳಿತ ಕಚೇರಿ, ಓದುವ ಕೊಠಡಿ ಇತರೆಡೆ ವೀಕ್ಷಿಸಿದರು. ನಿಲಯದ ವಾಸಿಗಳಿಂದ ಮಾಹಿತಿ ಪಡೆದರು.

ಈ ಹಿಂದೆ ನಾನು ಬಂದಾಗ ಇಲ್ಲಿ ಕೆಲ ಸಮಸ್ಯೆ ಇದ್ದವು. ಇದೀಗ ಸುಧಾರಣೆ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ಸರ್ಕಾರಿ ಬಾಲಕಿಯರ ಬಾಲಮಂದಿರದ ಅ ಧೀಕ್ಷಕಿ ವೀಣಾ, ವಿಶೇಷ ದತ್ತು ಸಂಸ್ಥೆಯ ಅ ಧೀಕ್ಷಕಿ  ಪ್ರಫುಲ್ಲರಾವ್‌, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬೇಬಿ ಸುನಿತಾ ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next