Advertisement

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

08:42 PM Nov 25, 2024 | Team Udayavani |

ಉಡುಪಿ: ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ದಿಂದ 48 ದಿನಗಳ ಕಾಲ ನಡೆಯಲಿರುವ ಬೃಹತ್‌ ಗೀತೋತ್ಸವ ಕಾರ್ಯಕ್ರಮಗಳಲ್ಲಿ ಅನೇಕ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀ ಹಂಡೆದಾಸ ಪ್ರತಿಷ್ಠಾನದ ಸಹಯೋಗದೊಂದಿಗೆ ರುಕ್ಮಿಣಿ ಹಂಡೆಯವರ ಸಹಕಾರದೊಂದಿಗೆ 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮ ಸೋಮವಾರ ಪ್ರಾರಂಭಗೊಂಡಿತು.

Advertisement

ಉದ್ಘಾಟನೆ ನೆರವೇರಿಸಿದ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ನಶಿಸುತ್ತಿರುವ ಹರಿಕಥಾ ಅಪೂರ್ವ ಕಲೆಯನ್ನು ಉಳಿಸುವಲ್ಲಿ ರುಕ್ಮಿಣಿ ಹಂಡೆಯವರ ಪ್ರಯತ್ನ ಅನುಕರಣೀಯವಾಗಿದೆ. ಅಲ್ಲದೆ ಭಗವದ್ಗೀತೆಯ ಮೇಲಿನ ಹರಿಕಥೆಯ ಪ್ರಥಮ ಪ್ರಯೋಗ ನಮ್ಮ ವಿಶ್ವಗೀತಾ ಪರ್ಯಾಯದಲ್ಲಿ ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಈ ಮೂಲಕವೂ ಗೀತೆಯ ಪ್ರಚಾರ ನಡೆಯುವಂತಾಗಲಿ ಎಂದು ಆಶೀರ್ವಚನ ನೀಡಿದರು.

ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಮಧೂರು ಬಾಲಸುಬ್ರಹ್ಮಣ್ಯಂ, ಪ್ರಸನ್ನಾಚಾರ್ಯ, ರಮೇಶ್‌ ಭಟ್‌, ಉಪ್ಪೂರು ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು.

ಪ್ರತಿಷ್ಠಾನದ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು. ಸಗ್ರಿ ವೇದವ್ಯಾಸ ಐತಾಳ್‌ ವಂದಿಸಿದರು. ಹರಿಕಥಾ ಕಾರ್ಯಕ್ರಮವು ಡಿ. 12ರ ವರೆಗೆ ಸಂಜೆ 4ರಿಂದ 6ರ ವರೆಗೆ ಶ್ರೀಮಧ್ವಮಂಟಪದಲ್ಲಿ ನಡೆಯಲಿದೆ ಎಂದು ಶ್ರೀ ಮಠದ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next