Advertisement
ರಾಹುಲ್ ಗಾಂಧಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಪ್ರಥಮ ವಾಗಿ ಕರಾವಳಿ ಜಿಲ್ಲೆಗಳಿಗೆ ಆಗಮಿಸಲಿದ್ದು ಕಾಪು, ಪಡುಬಿದ್ರಿ, ಮೂಲ್ಕಿ, ಸುರತ್ಕಲ್ ರಸ್ತೆಯಾಗಿ ರೋಡ್ ಶೋದಲ್ಲಿ ಭಾಗವಹಿಸಿ ನೆಹರೂ ಮೈದಾನದಲ್ಲಿ ಜರಗುವ ಬೃಹತ್ ಸಮಾವೇಶದಲ್ಲಿ ಭಾಗವಹಿಸುವರು. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗ ವಹಿಸುವಂತೆ ಬ್ಲಾಕ್ ಅಧ್ಯಕ್ಷರು ಮುತುವರ್ಜಿ ವಹಿಸಲು ಆಸ್ಕರ್ ಸೂಚಿಸಿದರು. ಸಮಾವೇಶಕ್ಕೆ ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ನಿರೀಕ್ಷಿಸಲಾಗಿದೆ. ಕಾಪು ಭೇಟಿ ಸಮಯ ಎರ್ಮಾಳ್‌ನಲ್ಲಿರುವ ರಾಜೀವ್ ಗಾಂಧಿ ನ್ಯಾಶನಲ್ ಅಕಾಡೆಮಿ ಆಫ್ ಪೊಲಿಟಿಕಲ್ ಎಜುಕೇಶನ್ ಸಂಕೀರ್ಣದ ಉದ್ಘಾಟನೆಯನ್ನು ರಾಹುಲ್ ನೆರವೇರಿಸುವರು. ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರೊಡನೆ ಸಂವಾದ ನಡೆಸುವರು. ಅನಂತರ ಪಡುಬಿದ್ರಿಯಲ್ಲಿ ರೋಡ್ ಶೋದಲ್ಲಿ ಭಾಗವಹಿಸಿ, ಸಂಜೆ ಮಂಗಳೂರಿನ ಸಮಾವೇಶಕ್ಕೆ ತೆರಳಲಿದ್ದಾರೆ.ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ಕೆ. ಗೋಪಾಲ ಪೂಜಾರಿ, ವಿನಯ ಕುಮಾರ್ ಸೊರಕೆ, ಕೆ. ಪ್ರತಾಪ ಚಂದ್ರ ಶೆಟ್ಟಿ, ಮಾಜಿ ಶಾಸಕ ಯು.ಆರ್. ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ನಾಯಕರಾದ ಎಂ.ಎ. ಗಫೂರ್, ಅಶೋಕ್ ಕುಮಾರ್ ಕೊಡವೂರು, ದಿನೇಶ್ ಪುತ್ರನ್, ವಿಶ್ವಾಸ್ ಅಮೀನ್, ಭಾಸ್ಕರ್ ರಾವ್ ಕಿದಿಯೂರು, ಅಲೆವೂರು ಹರೀಶ್ ಕಿಣಿ, ಕೃಷ್ಣಮೂರ್ತಿ ಕಾರ್ಕಳ, ಮುನಿ ಯಾಲು ಉದಯಕುಮಾರ್ ಶೆಟ್ಟಿ, ಕಿರಣ ಕುಮಾರ್ ಉದ್ಯಾವರ, ಬ್ಲಾಕ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ, ಶಂಕರ್ ಕುಂದರ್, ನವೀನ್ ಚಂದ್ರ ಶೆಟ್ಟಿ, ಸುಧಾಕರ ಕೋಟ್ಯಾನ್, ಸುಧೀರ್ ಹೆಗ್ಡೆ, ಮಲ್ಯಾಡಿ ಶಿವರಾಮ್ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ ವಂದಿಸಿದರು.