ಕನಕಗಿರಿ: ಪಟ್ಟಣದ ಐತಿಹಾಸಿಕ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ದತ್ತಿ ಮತ್ತು ಧಾರ್ಮಿಕ ಇಲಾಖೆಯ ಕೇಂದ್ರ ಕಚೇರಿಯ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ದೇವಸ್ಥಾನದ ಆಡಳಿತಾಧಿಕಾರಿ ಸಿ.ಎಚ್. ಚಂದ್ರಮೌಳಿ ಮಾತನಾಡಿ, ದತ್ತಿ ಮತ್ತು ಧಾರ್ಮಿಕ ಇಲಾಖೆಯ ಆಯುಕ್ತರ ಕಚೇರಿಯಿಂದ ಅಧಿಕಾರಿಗಳು ಬಂದ ದೇವಸ್ಥಾನದ ಅಭಿವೃದ್ಧಿಗೆ ಬೇಕಾಗುವುದು ಕ್ರಿಯಾ ಯೋಜನೆಯನ್ನು ಮಾಡುತ್ತಿದ್ದಾರೆ ಎಂದರು.
ಆಗಮ ಪಂಡಿತರಾದ ಸಿ.ಎಸ್. ಶಿವುಕುಮಾರ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ, ಕಾರ್ಯದರ್ಶಿ ಸಿದ್ಧಲಿಂಗಯ್ಯಸ್ವಾಮಿ, ಪ್ರಮುಖರಾದ ಸುದರ್ಶನರೆಡ್ಡಿ, ಕನಕರೆಡ್ಡಿ, ಅಯ್ಯನಗೌಡರರೆಡ್ಡಿ ಅರಳಹಳ್ಳಿ, ಹನುಮಂತರೆಡ್ಡಿ ಎಂ., ದುರ್ಗಾದಾಸ ಯಾದವ, ರಾಮಣ್ಣ ನಾಯಕ, ನಾಗೇಶ ಮಲ್ಲಾಪುರ ಸೇರಿದಂತೆ ಭಕ್ತರು ಇದ್ದರು.
Advertisement
ದತ್ತಿ ಮತ್ತು ಧಾರ್ಮಿಕ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್. ಕೃಷ್ಣಕುಮಾರ ಮಾತನಾಡಿ, ದೇವಸ್ಥಾನವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಭೇಟಿ ನೀಡಲಾಗಿದೆ. ದೇವಸ್ಥಾನಕ್ಕೆ ಮತ್ತು ಚಿದಾನಂದ ಅವಧೂತ ಮಠವನ್ನು ಅಭಿವೃದ್ಧಿ ಪಡಿಸಲು ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ಕೇಂದ್ರ ಕಚೇರಿಗೆ ತಲುಪಿಸಲಾಗುವುದು. ನಂತರ ದತ್ತಿ ಮತ್ತು ಧಾರ್ಮಿಕ ಇಲಾಖೆಯಿಂದ ಅನುದಾನವನ್ನು ಬಿಡುಗಡೆಗೊಳಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.