Advertisement

ರೆಡ್‌ಕ್ರಾಸ್‌ ತಂಡದಿಂದ ರಾಷಪತಿ ಭೇಟಿ

04:32 PM Oct 15, 2021 | Team Udayavani |

ಮಂಗಳೂರು: ಮಂಗಳೂರಿಗೆ ಆಗಮಿಸಿದ್ದ ರಾಷ್ಟ್ರಪತಿ ಹಾಗೂ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ರಾಷ್ಟ್ರಾಧ್ಯಕ್ಷರೂ ಆಗಿರುವ ರಾಮನಾಥ ಕೋವಿಂದ ಅವರನ್ನು ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ತಂಡ ಭೇಟಿ ಮಾಡಿ ರೆಡ್‌ಕ್ರಾಸ್‌ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿ ನೀಡಿತು.

Advertisement

ರೆಡ್‌ಕ್ರಾಸ್‌ ದಕ್ಷಿಣ ಕನ್ನಡ ಜಿಲ್ಲಾ ಘಟಕ ಕೈಗೊಂಡ ನಾನಾ ಮಾನವೀಯ ಸೇವಾ ಚಟುವಟಿಕೆಗಳು, ಕೋವಿಡ್‌-19 ಸಂದರ್ಭ ಮನೆ ಮನೆಗೆ ತೆರಳಿ ನೀಡಿದ ವ್ಯಾಕ್ಸಿನೇಶನ್‌, ಎನ್‌ಆರ್‌ಐಗಳಿಗೆ ಅಗತ್ಯವಿರುವ ಕೋವಿಡ್‌ ಲಸಿಕೆ ವಿತರಣೆ ಮುಂತಾದ ವಿಷಯಗಳನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲಾಯಿತು.

ಜಿಲ್ಲಾ ರೆಡ್‌ಕ್ರಾಸ್‌ ಸಂಸ್ಥೆ ಅತ್ಯಂತ ಮೌಲ್ಯಯುತವಾಗಿ, ಹೆಚ್ಚು ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್‌ ಘಟಕ ಕೈಗೊಂಡ ವಿವಿಧ ಜನಪರ ಹಾಗೂ ಮಾನವೀಯ ಸೇವೆಗಳ ಬಗ್ಗೆ ರಾಷ್ಟ್ರಪತಿ ಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ರೆಡ್‌ಕ್ರಾಸ್‌ ಚೇರ್ಮನ್‌ ಸಿಎ ಶಾಂತಾರಾಮ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ ಶರ್ಮಾ, ರೆಡ್‌ಕ್ರಾಸ್‌ ರಾಜ್ಯ ಘಟಕದ ಸದಸ್ಯ ಯತೀಶ್‌ ಬೈಕಂಪಾಡಿ ಉಪಸ್ಥಿತರಿದ್ದರು. ಇದೇ ಸಂದರ್ಭ ಕಲಾವಿದ ಗಣೇಶ ಸೋಮಯಾಜಿ ರಚಿಸಿದ ಯಕ್ಷಗಾನ ಕಲಾಕೃತಿಯನ್ನು ರಾಷ್ಟ್ರಪತಿ ಅವರಿಗೆ ಸ್ಮರಣಿಕೆಯಾಗಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next