Advertisement
ಈ ತಂಡವು ಬೈಂದೂರು ತಾಲೂಕಿನ ಕೊಲ್ಲೂರು, ಶಿರೂರು, ಸೋಮೇಶ್ವರ, ಹಾಲಾಡಿ, ಹೆಬ್ರಿ ತಾಲೂಕಿನ ಕನ್ಯಾನ, ಕಾರ್ಕಳ ತಾಲೂಕಿನ ಮಾಳ ಪ್ರದೇಶಕ್ಕೆ ಭೇಟಿ ನೀಡಿದರು. ಹೆದ್ದಾರಿ ಅಭಿವೃದ್ಧಿಗಾಗಿ ಗುಡ್ಡವನ್ನು ಅಗೆದ ರೀತಿಯ ಬಗ್ಗೆ ಪರಿಶೀಲನೆ ನಡೆಸಿತು. ಮಾಳದಲ್ಲಿ ಮನೆಯ ಸಮೀಪ ಗುಡ್ಡ ಜರಿದಿರುವ ಬಗ್ಗೆ ಅಧ್ಯಯನ ನಡೆಸಿತು.
ಜಿಲ್ಲೆಯ ಭೂ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿದ ಜಿಎಸ್‌ಐ ವಿಜ್ಞಾನಿಗಳ ತಂಡ ಪರಿಶೀಲನೆ ನಡೆಸಿದೆ. ಭೂಕುಸಿತಕ್ಕೆ ಕಾರಣ ಮತ್ತು ಪರಿಹಾರ ಕ್ರಮಗಳ ಬಗ್ಗೆ ತಂಡವು ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.