Advertisement

“ಕಿರಾತಕ’ನ ಸೆಟ್‍ಗೆ ಅಮರ್ ಭೇಟಿ

05:04 PM Oct 07, 2018 | |

ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ “ಮೈ ನೇಮ್​ ಈಸ್​ ಕಿರಾತಕ’ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಈ ಮಧ್ಯೆ ಶೂಟಿಂಗ್​ ಸೆಟ್​ಗೆ ಯಂಗ್​ ರೆಬೆಲ್​ ಸ್ಟಾರ್​​ ಅಭಿಷೇಕ್​ ಅಂಬರೀಶ್​ ಭೇಟಿ ಕೊಟ್ಟಿದ್ದಾರೆ.

Advertisement

ಹೌದು! ಅಭಿಷೇಕ್​ ಅಂಬರೀಶ್​ ಶನಿವಾರ ಮಧ್ಯಾಹ್ನ ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿ ಸುಮಾರು ಹೊತ್ತು ಶೂಟಿಂಗ್ ವೀಕ್ಷಿಸಿ, ಅನಂತರ ಯಶ್​ ಜೊತೆ ಕೆಲ ಸಮಯ ಮಾತನಾಡಿ ಕಾಲ ಕಳೆದರು. ಅಲ್ಲದೇ ಯಶ್​ ಜೊತೆಗೆ ಕಳೆದ ಸಂತಸದ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಯಶ್​ ಇತ್ತೀಚೆಗಷ್ಟೇ ಅಭಿ ಹುಟ್ಟುಹಬ್ಬದ ಪಾರ್ಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿದಲ್ಲದೇ ತಮ್ಮ ಸೆಟ್​ಗೆ ಬರುವಂತೆ ಅಭಿಗೆ ಆಮಂತ್ರಣವನ್ನು ನೀಡಿದ್ದರಿಂದ, ಸೆಟ್​ಗೆ ಎಂಟ್ರಿ​ ಕೊಟ್ಟಿದ್ದಾರೆ ಅಭಿಷೇಕ್​ ಅಂಬರೀಶ್. ಇನ್ನು ಮುಖ್ಯವಾಗಿ ಅಭಿಷೇಕ್​, ಯಶ್​ ತೊಟ್ಟಿದ್ದ ಬಣ್ಣ ಬಣ್ಣದ ಶರ್ಟ್​​​ನ ಈ ಬಾರಿಯ ಕ್ರಿಸ್​ಮಸ್​ ಹಬ್ಬಕ್ಕೆ ಉಡುಗೊರೆ ಆಗಿ ನೀಡುವಂತೆ ಯಶ್​ ಪತ್ನಿ ರಾಧಿಕಾ ಪಂಡಿತ್‍ ಅವರನ್ನು ಕೇಳಿದ್ದಾರೆ.

“ಮೈ ನೇಮ್​ ಈಸ್​ ಕಿರಾತಕ’ ಚಿತ್ರ “ಕಿರಾತಕ’ ಸಿನಿಮಾದ ಸೀಕ್ವೆಲ್​ ಆಗಿದ್ದು, ಚಿತ್ರವನ್ನು ಅನಿಲ್‌ ಕುಮಾರ್‌ ನಿರ್ದೇಶನ ಮಾಡುತ್ತಿದ್ದು, ಜಯಣ್ಣ ನಿರ್ಮಿಸುತ್ತಿದ್ದಾರೆ. ಯಶ್‍ಗೆ ನಾಯಕಿಯಾಗಿ “ನಂದ ಲವ್ಸ್‌ ನಂದಿತಾ’ ಖ್ಯಾತಿಯ ಶ್ವೇತ ಅಲಿಯಾಸ್‌ ನಂದಿತಾ ನಟಿಸುತ್ತಿದ್ದು, ಮತ್ತೊಬ್ಬ ನಾಯಕಿಯ ಆಯ್ಕೆ ನಡೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next