Advertisement
ಕರ್ನಾಟಕದ “ನಾಟಕ ರತ್ನ’ ಗುಬ್ಬಿ ವೀರಣ್ಣನವರಂತೆ, ರಂಗಭೂಮಿಯಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡವರು ಬ್ರೂಕ್. ಶೇಕ್ಸ್‌ಪಿ ಯರ್‌ನ ಕಾವ್ಯಗಳಲ್ಲಿನ ಕಾಲ್ಪನಿಕ ಲೋಕವನ್ನು ರಂಗವೇದಿಕೆಗಳಲ್ಲಿ ಅಕ್ಷರಶಃ ಸೃಷ್ಟಿಸಿ ನೋಡುಗರನ್ನು ಮಂತ್ರಮುಗ್ಧಗೊಳಿಸಿದ್ದು ಇವರ ಕ್ರಿಯಾಶೀಲತೆಗೆ ಸಾಕ್ಷಿಯೆನಿಸಿತ್ತು.ಅದರಲ್ಲೂ ವಿಶೇಷವಾಗಿ, ಶೇಕ್ಸ್‌ಪಿಯರ್‌ನ “ಎ ಮಿಡ್ ಸಮ್ಮರ್ಸ್ ನೈಟ್ ಡ್ರೀಮ್ಸ್’ ಎಂಬ ನಾಟಕ ಕ್ಕಾಗಿ ವೇದಿಕೆಯ ಮೇಲೆ ಹೂವುಗಳ ಲೋಕವನ್ನೇ ಸೃಷ್ಟಿಸಿ, ಎಲ್ಲ ಪಾತ್ರಧಾರಿಗಳನ್ನೂ ಶ್ವೇತವರ್ಣದ ವಸ್ತ್ರಗಳಲ್ಲೇ ನಟಿಸುವಂತೆ ಮಾಡಿ ಶೇಕ್ಸ್‌ಪಿಯರ್‌ರವರ ಕಲ್ಪನೆಯನ್ನು ಸಾಕಾರಗೊಳಿಸಿದ್ದು ಇವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು. ಅವರ ಪ್ರಯೋಗಶೀಲತೆಗೆ ಇಡೀ ವಿಶ್ವವೇ ರಂಗಭೂಮಿ ಯಾಗಿತ್ತೆಂದು ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿರುವ ಬ್ರಿಟನ್‌ನ ವಿದ್ವಾಂಸರು ತಿಳಿಸಿದ್ದಾರೆ.