Advertisement

ರೋಗನಿರೋಧಕ ಶಕ್ತಿ ಹೆಚ್ಚಿಸುವ ಬಗ್ಗೆ ಜಾಗೃತಿ ಮೂಡಿಸಲು ಪತ್ರ ಬರೆದಿದ್ದೇನೆ : ಕಾಗೇರಿ

06:04 PM Jun 30, 2021 | Team Udayavani |

ಶಿರಸಿ: ರಾಜ್ಯದ ಎಲ್ಲಡೆ ಸಾಂಕ್ರಾಮಿಕ ರೋಗಗಳ ವಿರುದ್ದ ಹೋರಾಡಲು‌ ಅನುಕೂಲ ಆಗುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜಾಗೃತಿ ಅಭಿಯಾನ ನಡೆಸಬೇಕು. ಈ ಕುರಿತು ಎಲ್ಲ ಶಾಸಕರಿಗೂ ಪತ್ರ ಬರೆದಿರುವದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಅವರು ನಗರದಲ್ಲಿ ಹಮ್ಮಿಕೊಂಡ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಜನ ಜಾಗೃತಿ‌ ಮೂಡಿಸುವ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡು ಮಾತನಾಡಿದರು.

ಸಮಾಜದ ಸ್ವಾಸ್ಥ್ಯ ಹೆಚ್ಚಬೇಕು. ಕೊರೋನಾ ಅಲೆಗಳಿಗೆ ಮಾತ್ರವಲ್ಲ, ಯಾವುದೇ ಸಾಂಕ್ರಾಮಿಕ ರೋಗಕ್ಕೂ ನಮ್ಮೊಳಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ಸರಕಾರದ ಜೊತೆಗೆ ಸಮಾಜದ ಎಲ್ಲ ಸ್ಥರದ ಜನರ ಸಹಕಾರ ಬೇಕಿದೆ ಎಂದರು.
ಇದೇ ವೇಳೆ ಪ್ರಸಿದ್ದ ವೈದ್ಯರಾದ ಡಾ. ಜಗದೀಶ ಯಾಜಿ, ಡಾ. ಜ್ಞಾನ ಪ್ರಕಾಶ ಕಾರಂತ, ಡಾ. ವೆಂಕಟ್ರಮಣ ಹೆಗಡೆ‌ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಎಸಿ ಆಕೃತಿ ಬನ್ಸಾಲ್, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಡಿವೈಎಸ್ಪಿ ರವಿ ನಾಯಕ, ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ‌ ಕಣ್ಣಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ನಗರಸಭೆ ಉಪಾಧ್ಯಕ್ಷೆ‌ ವೀಣಾ ಶೆಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next