ಕಾಪು : ಜಗದ್ಗುರು ಶ್ರೀ ಮಧ್ವಾಚಾರ್ಯರು ಗುರುದಕ್ಷಿಣೆ ರೂಪದಲ್ಲಿ ದಂಡವೂರಿ ಸೃಷ್ಠಿಸಿದ, ಉಡುಪಿ ಪರ್ಯಾಯ ಪೀಠಾರೋಹಣಗೈಯ್ಯಲಿರುವ ಯತಿವರೇಣ್ಯರು ಪರ್ಯಾಯ ಪೂರ್ವಭಾವಿ ತೀರ್ಥಸ್ನಾನಗೈಯ್ಯುವ ದಂಡತೀರ್ಥ ಮಠದ ಶ್ರೀ ರಾಮಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಽಯಲ್ಲಿ ನೂತನವಾಗಿ ನಿರ್ಮಿಸಲಾದ ಮಧ್ವ ಮಂಟಪದಲ್ಲಿ ಬುಧವಾರ ಶ್ರೀ ಮಧ್ವಾಚಾರ್ಯರ ಬಿಂಬ ಪ್ರತಿಪ್ಟಾಪನಾ ಕಾರ್ಯಕ್ರಮ ನೆರವೇರಿತು.
ಉಡುಪಿ ಶ್ರೀ ಕೃಷ್ಣ ಮಠದ ಭಾವೀ ಪರ್ಯಾಯ ಪೀಠಾಽಪತಿ ಕೃಷ್ಣಾಪುರ ಮಠಾಽಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮತ್ತು ಅದಮಾರು ಮಠಾಽಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಬಿಂಬ ಪ್ರತಿಷ್ಠಾಪನಾ ಪೂರ್ವಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಶ್ರೀ ಮಧ್ವಾಚಾರ್ಯರ ಬಿಂಬ ಪ್ರತಿಷ್ಠಾಪನಾ ವಿಽ ವಿಧಾನದ ಬಳಿಕ ಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ ಮತ್ತು ಮಹಾ ಅನ್ನಸಂತರ್ಪಣೆ ಸಂಪನ್ನಗೊಂಡಿತು.
ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯ ಜೊತೆಗೆ ಪ್ರವಾಸಿ ತಾಣವಾಗಿಯೂ ಗುರುತಿಸ್ಪಡಲಿ : ಅದಮಾರು ಮಠಾಽಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ದಂಡತೀರ್ಥ ಕ್ಷೇತ್ರಕ್ಕೆ ಎಲ್ಲರೂ ನಿರಂತರವಾಗಿ ಬರುತ್ತಿರಬೇಕು, ಇಲ್ಲಿಗೆ ಸ್ವತಃ ಬರಲಿಕ್ಕಾಗದವರು ಕ್ಷೇತ್ರವನ್ನು ಸದಾ ಸ್ಮರಿಸಿಕೊಳ್ಳುತ್ತಿರಬೇಕು. ಆಗ ದೇಶದಲ್ಲಿ ಸುಭಿಕ್ಷೆ ಮತ್ತು ಸಮೃದ್ಧಿ ನೆಲೆಸುತ್ತದೆ. ಆಚಾರ್ಯ ಮಧ್ವರು ದಂಡದ ಮೂಲಕ ಸೃಷ್ಟಿಸಿದ ದಂಡತೀರ್ಥ ಕೆರೆಯನ್ನು ಸ್ಮರಿಸಿಕೊಂಡರೆ ದೇಶವನ್ನು ಕಾಡುವ ಜಲ ಮೂಲದ ಕೊರತೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಆಚಾರ್ಯ ಮಧ್ವರ ಬಿಂಬ ಪ್ರತಿಷ್ಟಾಪನೆಯ ಮೂಲಕ ದಂಡತೀರ್ಥ ಮಠವು ಧಾರ್ಮಿಕ ಮತ್ತು ಆಧ್ಯಾತ್ಮಿಕತೆ ಪಸರಿರುವ ತಾಣವಾಗಿ, ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿದೆ. ಮಧ್ವರ ಜೀವನಾದರ್ಶ ಮತ್ತು ತತ್ವ ಸಂದೇಶಗಳ ಪ್ರಚಾರಕ್ಕೆ ಸೂಕ್ತ ಕ್ಷೇತ್ರವಾಗಿ ಇದು ಮಾರ್ಪಾಡಗುವಂತಾಗಲಿ ಎಂದು ಆಶೀರ್ವಚಿಸಿದರು.
ದಂಡತೀರ್ಥ ಪ್ರತಿಷ್ಟಾನದ ಅಧ್ಯಕ್ಷ ಸೀತಾರಾಮ ಭಟ್ ದಂಡತೀರ್ಥ, ಮಂಗಳೂರು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಮನೋಹರ್ ಶೆಟ್ಟಿ ಕಾಪು, ರತ್ನಾಕರ ಶೆಟ್ಟಿ ನಡಿಕೆರೆ ಮೊದಲಾದವರು ಉಪಸ್ಥಿತರಿದ್ದರು.