Advertisement
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಆಶೀರ್ವಚನ ನೀಡಿದರು.ವಿದ್ಯಾವಿನಯ ಸಂಪನ್ನರಾದ ವಿದ್ವಾಂಸರು ಇಲ್ಲಿ ತಯಾರಾಗುತ್ತಿರುವುದು ಸಂತೋಷದ ವಿಷಯ. ನಾವು ಹಿಂದೆ ಅಯೋಧ್ಯೆ ಮಂದಿರಕ್ಕೆ ಸಂಬಂಧಿಸಿ ಪೇಜಾವರ ಶ್ರೀಗಳವರನ್ನು ಭೇಟಿ ಮಾಡಿದ್ದೆವು. ನಮ್ಮ ಸಮಾಜದಿಂದ ಮಂದಿರಕ್ಕೆ ಸಹ ಕಾರವನ್ನು ಕೊಡುತ್ತೇವೆ ಎಂದು ಹೇಳಿದ್ದೆವು. ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಅಯೋಧ್ಯೆ ಮಂದಿರಕ್ಕಾಗಿ ವಿಶೇಷ ಸೇವೆ ಸಲ್ಲಿಸಿರುವುದು ನಮಗೆ ಹೆಮ್ಮೆ. ನಮ್ಮ ಸಂಬಂಧ ಇದೇ ರೀತಿ ಮುಂದುವರಿಯಲಿ ಎಂದು ಶ್ರೀಸಂಯ ಮೀಂದ್ರತೀರ್ಥ ಶ್ರೀಪಾದರು ಹಾರೈಸಿದರು. ವಿದ್ಯಾಪೀಠದ ವಿದ್ವಾಂಸರಾದ ಕೇಶವ ಬಾಯರಿ, ಮಾಳಗಿ ರಾಮಾಚಾರ್ಯ, ಸತ್ಯನಾರಾಯ ಣಾಚಾರ್ಯರಲ್ಲಿ ಶಾಸ್ತ್ರ ಚಿಂತನೆಗಳನ್ನು ನಡೆಸಿದ ದಿನಗಳನ್ನು ಸ್ವಾಮೀಜಿಯವರು ಉಲ್ಲೇಖಿಸಿದರು.
ಕಾಶೀ ಮಠಾಧೀಶರು ಪೇಜಾವರ ಮಠಾಧೀಶರನ್ನು, ಪೇಜಾವರ ಮಠಾಧೀಶರು ಕಾಶೀ ಮಠಾಧೀಶರನ್ನು ಗೌರವಿಸಿದರು. ಪೂರ್ಣಪ್ರಜ್ಞ ಮಂದಿರದಿಂದ ಪ್ರಕಟಗೊಂಡ ಗ್ರಂಥಗಳನ್ನು ಕಾಶೀ ಮಠಾಧೀಶರಿಗೆ ಸಮರ್ಪಿಸಲಾಯಿತು. ಇದನ್ನೂ ಓದಿ:ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಕೃಷ್ಣಾಪುರ ಮಠಾಧೀಶರ ಭೇಟಿ
Related Articles
Advertisement
ಮೂರು ಯೋಜನೆಗೆ ಅನುವು ಕಾಶೀ ಮಠದಲ್ಲಿರುವ ಅಪೂರ್ವ ಪ್ರಾಚೀನ ಕೃತಿಗಳನ್ನು ನಮ್ಮ ಸಂಸ್ಥೆಗೆ ನೀಡಿ ಸ್ವಾಮೀಜಿಯವರು ಮೂರು ಸಂಶೋಧನ ಯೋಜನೆಗಳಿಗೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಪೂರ್ಣಪ್ರಜ್ಞ ಸಂಶೋ ಧನ ಕೇಂದ್ರದ ನಿರ್ದೇಶಕ ಡಾ| ಆನಂದತೀರ್ಥ ನಾಗಸಂಪಿಗೆ ಪ್ರಸ್ತಾವನೆಯಲ್ಲಿ ತಿಳಿಸಿದರು. ಸಜೀವವೃಂದಾವನ, ನಿತ್ಯ ಗಂಗಾಸ್ನಾನ
ಶ್ರೀವಾದಿರಾಜರು, ಶ್ರೀರಾಘವೇಂದ್ರಸ್ವಾಮಿಗಳಂತೆ ಕಾಶೀ ಮಠ ಪರಂಪರೆಯ ಶ್ರೀಮಾಧವೇಂದ್ರತೀರ್ಥರ ಸಜೀವ ವೃಂದಾವನವು ಮುಂಬಯಿಯಲ್ಲಿದೆ. ಕಾಶೀ ಮಠಾಧೀಶರು ಗಂಗೆಯ ಜಲವನ್ನು ತರಿಸಿಟ್ಟುಕೊಂಡು ಪ್ರತಿನಿತ್ಯ ಗಂಗಾಸ್ನಾನ ಮಾಡುವುದು ಪರಂಪರೆಯ ವಿಶೇಷ ಎಂದು ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಧ್ಯಾಪಕ ಮಾಳಗಿ ರಾಮಾಚಾರ್ಯ ಅಭಿನಂದನ ಭಾಷಣದಲ್ಲಿ ತಿಳಿಸಿದರು.