Advertisement
ನಗರದ ಬೇಂದ್ರೆ ಭವನದಲ್ಲಿ ಮಂಗಳವಾರ ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ವರಕವಿ ಡಾ.ದ.ರಾ.ಬೇಂದ್ರೆ ಅವರ 127 ನೇ ಜನ್ಮದಿನಾಚರಣೆ ಪ್ರಯುಕ್ತ ಡಾ.ದ.ರಾ.ಬೇಂದ್ರೆ ರಾಷ್ಟೀಯ ಸ್ಮಾರಕ ಟ್ರಸ್ಟ ವತಿಯಿಂದ ಕೊಡ ಮಾಡುವ ಪ್ರಸಕ್ತ 2023 ನೇ ಸಾಲಿನ ಅಂಬಿಕಾತನಯದತ್ತ ರಾಷ್ಟೀಯ ಪ್ರಶಸ್ತಿಯನ್ನು ಸಾಹಿತಿಗಳಿಗೆ ಪ್ರದಾನಗೊಳಿಸಿ, ಅವರು ಮಾತನಾಡಿದರು.
Related Articles
Advertisement
ಇದೇ ಸಂದರ್ಭದಲ್ಲಿ1 ಲಕ್ಷ ನಗದು, ಸ್ಮರಣಿಕೆ ಫಲಕ ಒಳಗೊಂಡ ಈ ಪ್ರಶಸ್ತಿಯನ್ನು ಪ್ರತ್ಯೇಕ ತಲಾ 50 ಸಾವಿರದಂತೆ ಮೂಲತ: ಧಾರವಾಡದವರೇ ಆದ ವಿಮರ್ಶಕ, ಚಿಂತಕರಾದ ಡಾ.ರಾಜೇಂದ್ರ ಚೆನ್ನಿ ಹಾಗೂ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಕವಿ ಡಾ.ಜಿನದತ್ತ ದೇಸಾಯಿ ಅವರಿಗೆ ಪ್ರದಾನ ಮಾಡಲಾಯಿತು.
ಬೆಳಗಾವಿ ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿದರು. ಡಾ.ದ.ರಾ.ಬೇಂದ್ರೆ ರಾಷ್ಟೀಯ ಸ್ಮಾರಕ ಟ್ರಸ್ಟ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಪುರಸ್ಕೃತರಾದ ಡಾ.ಜಿನದತ್ತ ದೇಸಾಯಿ ಅವರ ಕುರಿತು ಡಾ.ಶಾಂತಾ ಇಮ್ರಾಪೂರ ಹಾಗೂ ಡಾ.ರಾಜೇಂದ್ರ ಚೆನ್ನಿ ಅವರ ಕುರಿತು ಕುಮಟಾದ ಡಾ.ಎಂ.ಜಿ.ಹೆಗಡೆ ಅಭಿನಂದನಾಪರ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಶಿರಸಿಯ ಪ್ರೊ.ಎಚ್.ಆರ್.ಅಮರನಾಥ ಸಂಪಾದಕತ್ವದ ಪ್ರೊ.ಬೇಂದ್ರೆ ಮಾಸ್ತರರ ಅಮರವಾಣಿ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಡಾ|ಎನ್.ವೈ.ಮಟ್ಟಿಹಾಳ, ಡಾ.ದ.ರಾ. ಬೇಂದ್ರೆ ಟ್ರಸ್ಟ್ ಸದಸ್ಯ ಕಾರ್ಯದರ್ಶಿಯಾದ ಕುಮಾರ ಬೆಕ್ಕೇರಿ, ಪ್ರಕಾಶ ಬಾಳಿಕಾಯಿ ಪಾಲ್ಗೊಂಡಿದ್ದರು.
ಜಗದ ಕವಿ, ಯುಗದ ಕವಿ ಎಂಬುದಾಗಿ ಬೇಂದ್ರೆ ಅವರನ್ನು ನಾವು ಬಣ್ಣಿಸಿ ಹಾಡಿ ಹೊಗಳಿದರೂ, ಅವರನ್ನು ಕರ್ನಾಟಕ ಅಷ್ಟು ಆತ್ಮೀಯವಾಗಿ ಒಪ್ಪಿಕೊಳ್ಳದ ಬೇಸರ ಅವರನ್ನು ಕಾಡಿತ್ತು. ಹೀಗಾಗಿ ಅವರು ಅತ್ಯಂತ ನೋವಿನಿಂದ ‘ಧಾರವಾಡದ ಬೆಣ್ಣೆಗೆ ಧಾರಣೆ ಆಗಲಿಲ್ಲ’ ಅಂದಿದ್ದರು. ಸರ್ಕಾರಕ್ಕೆ ಹೃದಯ ಹಾಗೂ ಸಾಂಸ್ಕೃತಿಕ ಲೋಕದ ಸ್ಪರ್ಶ ಇದ್ದರೆ, ವಿಶ್ವ ಕವಿ ದಿನವನ್ನು ಒಪ್ಪಿಕೊಂಡು ಆಚರಿಸಬೇಕು. ಬೇಂದ್ರೆ ಅವರ ಹೆಸರನ್ನು ನಾಡು ನೆನೆಯಬೇಕೆಂದ ಎಚ್.ವಿಶ್ವನಾಥ ಅವರು, ‘ಮೂಡಲ ಮನೆಯ ಮುತ್ತಿನ ನೀರಿನ…’ ಹಾಡನ್ನು ಹಾಡಿದರು.
ಇದನ್ನೂ ಓದಿ: ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಯಡಿಯೂರಪ್ಪ