Advertisement

PM ವಿಶ್ವಕರ್ಮ ಯೋಜನೆ: ಪ್ರಾಥಮಿಕ ಹಂತದಲ್ಲೇ ಅರ್ಜಿ ವಿಲೇವಾರಿ ವಿಳಂಬ

12:52 AM Feb 04, 2024 | Team Udayavani |

ಉಡುಪಿ: ಕೇಂದ್ರ ಸರಕಾರದ ಪಿಎಂ ವಿಶ್ವಕರ್ಮ ಯೋಜನೆಗೆ ರಾಜ್ಯಾದ್ಯಂತ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಬಹುಪಾಲು ಗ್ರಾ.ಪಂ. ಅಧ್ಯಕ್ಷರ/ ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿಗಳ ಲಾಗಿನ್‌ನಲ್ಲೇ ಉಳಿದು ಕೊಂಡಿವೆ. ಅವಿಭಜಿತ ದ.ಕ. ಜಿಲ್ಲೆಯಲ್ಲೂ ಇದೇ ಸಮಸ್ಯೆ.

Advertisement

ಫ‌ಲಾನುಭವಿಗಳು ಆನ್‌ಲೈನ್‌ ಮೂಲಕ ಸಲ್ಲಿಸಿ ರುವ ಅರ್ಜಿಗಳನ್ನು ಗ್ರಾ.ಪಂ. ಅಧ್ಯಕ್ಷರು/ ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿಗಳು ತಮ್ಮ ಲಾಗಿನ್‌ ಮೂಲಕ ಪರಿಶೀಲಿಸಿ ಪ್ರೊಸೆಸ್‌ ಮಾಡ ಬೇಕು ಅಥವಾ ತಿರಸ್ಕೃರಿಸಬೇಕು. ಈ ಪ್ರಕ್ರಿಯೆ ನಿರೀಕ್ಷಿತ ವೇಗದಲ್ಲಿ ನಡೆಯು ತ್ತಿಲ್ಲ. ಪ್ರಾಥಮಿಕ ಹಂತದಲ್ಲೇ ವಿಳಂಬ ವಾಗುತ್ತಿರುವುದು ಜಿಲ್ಲೆ ಮತ್ತು ರಾಜ್ಯ ಹಂತದ ಮೇಲೂ ಪರಿಣಾಮ ಬೀರುತ್ತಿದೆ.

ಈವರೆಗೆ ರಾಜ್ಯಾದ್ಯಂತ 22,04,474 ಅರ್ಜಿ ಸಲ್ಲಿಕೆಯಾಗಿವೆ.

7,83,338 ಅರ್ಜಿಗಳನ್ನು ಗ್ರಾ.ಪಂ. ಅಧ್ಯಕ್ಷರು/ ನಗರ ಸ್ಥಳೀಯ ಸಂಸ್ಥೆಯ ಆಡಳಿತಾಧಿಕಾರಿಗಳು ಶಿಫಾರಸು ಮಾಡಿದ್ದು, 3,507 ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. 14,17,629 ಅರ್ಜಿ ಈ ಹಂತದಲ್ಲೇ ವಿಲೇವಾರಿಗೆ ಬಾಕಿಯಿದೆ.

ಗ್ರಾ.ಪಂ./ನಗರಸ್ಥಳೀಯ ಸಂಸ್ಥೆಗಳಿಂದ ಶಿಫಾರಸುಗೊಂಡು ಜಿಲ್ಲಾ ಹಂತಕ್ಕೆ ಬಂದಿರುವ 7.83 ಲಕ್ಷ ಅರ್ಜಿಗಳಲ್ಲಿ 4,40,347 ಅರ್ಜಿಗಳನ್ನು ವಿಲೇ ಮಾಡಿ ರಾಜ್ಯಕ್ಕೆ ಕಳುಹಿಸಲಾಗಿದೆ. ಈ ಹಂತದಲ್ಲಿ 532 ಅರ್ಜಿ ತಿರಸ್ಕರಿಸಲಾಗಿದೆ. 3,42,459 ಅರ್ಜಿ ವಿಲೇವಾರಿಗೆ ಬಾಕಿದೆ. ಒಟ್ಟು ಸಲ್ಲಿಕೆಯಾಗಿರುವ 22.04 ಲಕ್ಷ ಅರ್ಜಿಗಳಲ್ಲಿ 14.17 ಲಕ್ಷ ಗ್ರಾ.ಪಂ./ನಗರ ಸ್ಥಳೀಯ ಸಂಸ್ಥೆಗಳಲ್ಲಿಯೇ ಉಳಿದಿವೆ. ಶೇ. 60ಕ್ಕೂ ಅಧಿಕ ಅರ್ಜಿಗಳು ಪ್ರಾಥಮಿಕ ಹಂತದಲ್ಲಿ ವಿಲೇವಾರಿಗೆ ಬಾಕಿಯಿದ್ದರೆ, ಶೇ. 40ರಷ್ಟು ಜಿಲ್ಲೆಯಲ್ಲೇ ಬಾಕಿಯಿವೆ.

Advertisement

ಜಿಲ್ಲಾ ಹಂತದಲ್ಲಿ ನಿತ್ಯ ವಿಲೇವಾರಿ ನಡೆಯುತ್ತಿದೆ. ಗ್ರಾ.ಪಂ./ನಗರ ಸ್ಥಳೀಯ ಸಂಸ್ಥೆಗಳಲ್ಲಿಯೇ ಪರಿಶೀಲನೆ ಸರಿಯಾದ ಕ್ರಮದಲ್ಲಿ ಆಗಬೇಕಿರುವುದರಿಂದ ನಿತ್ಯವೂ ವಿಲೇವಾರಿ ಪ್ರಕ್ರಿಯೆ ನಡೆಯಬೇಕು. ಅನೇಕ ಗ್ರಾ.ಪಂ.ಗಳಲ್ಲಿ ಅಧ್ಯಕ್ಷರು ಆನ್‌ಬೋರ್ಡ್‌ ಆಗುವುದೇ ವಿಳಂಬವಾಗಿದೆ. ಅರ್ಜಿ ಸಲ್ಲಿಕೆಗೆ ಕಾಲಮಿತಿ ವಿಧಿಸದೆ ಇರುವುದರಿಂದ ನಿರಂತರ ಸಲ್ಲಿಕೆಯಾಗುತ್ತಿದೆ. ಹೀಗಾಗಿ ಗ್ರಾ.ಪಂ. ಅಧ್ಯಕ್ಷರು/ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿಗಳು ಆಯಾ ದಿನದ ಅರ್ಜಿಗಳನ್ನು ಅಂದೇ ಪರಿಶೀಲಿಸಿ ವಿಲೇವಾರಿ ಮಾಡಿದಷ್ಟು ಫ‌ಲಾನುಭವಿಗಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ವಿಶ್ವಕರ್ಮ ಯೋಜನೆ ಯಾರಿಗೆ ಅನ್ವಯ?
ಬಡಗಿ, ದೋಣಿ ತಯಾರಿಕೆ, ನೇಕಾರ, ಕುಂಬಾರಿಕೆ, ಪಾದರಕ್ಷೆ ತಯಾರಿ, ಬೀಗ ತಯಾರಕ, ಚಮ್ಮಾರ, ಕಮ್ಮಾರ, ಅಕ್ಕಸಾಲಿಗ, ದರ್ಜಿ, ಶಿಲ್ಪಿ, ಮೇಸ್ತ್ರಿ, ಆಟಿಕೆ ತಯಾರಕ (ಸಾಂಪ್ರದಾಯಿಕ), ಬುಟ್ಟಿ ಹೆಣೆಯುವವ, ದೋಬಿ, ಕ್ಷೌರಿಕ, ಮೀನುಗಾರಿಕೆ ಬಲೆ ಹೆಣೆಯುವವರು, ಹೂವಿನ ಮಾಲೆ ತಯಾರಕರಿಗೆ ವಿಶೇಷ ಕೌಶಲ ಒದಗಿಸಲು ಯೋಜನೆ ರೂಪಿಸಲಾಗಿದೆ. ಕೇಂದ್ರ ಸರಕಾರದಿಂದ ಗೌರವಧನದೊಂದಿಗೆ ತರಬೇತಿ ಹಾಗೂ ಅನಂತರ ಸಾಲಸೌಲಭ್ಯ ಒದಗಿಸಲಾಗುತ್ತದೆ ಎಂದು ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next