Advertisement

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

07:33 PM Apr 26, 2024 | Team Udayavani |

ವಿಜಯಪುರ : ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿಜಯಪುರ ನಗರದಲ್ಲಿ ಕಾಂಗ್ರೆಸ್ ಚುನಾವಣಾ ಭಾಷಣ ಮುಗಿಸಿ ವೇದಿಕೆ ಬಲ ಭಾಗದಿಂದ ಇಳಿಯುವ ಸಮಯಕ್ಕೆ ಸರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಡ ಭಾಗದಿಂದ ವೇದಿಕೆ ಏರಿಬಂದ ಘಟನೆ ನಡೆಯಿತು.

Advertisement

ತಮ್ಮ ಭಾಷಣ ಮುಗಿಸಿ ಜನತೆಯತ್ತ ಕೈಬೀಸಿದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮನ ಅರಿಯದೇ ರಾಹುಲ್ ಗಾಂಧಿ ವೇದಿಕೆಯಿಂದ ಇಳಿದು ಹೋದರು. ಇದರಿಂದಾಗಿ ಇನ್ನೊಂದು ಬದಿಯಿಂದ ವೇದಿಕೆ ಏರಿ ಬಂದ ಸಿದ್ಧರಾಮಯ್ಯ, ರಾಹುಲ್ ಹಿಂದೆಯೇ ದೌಡಾಯಿಸಿದರು. ಆದರೆ ಅಷ್ಟರಲ್ಲಾಗಲೇ ರಾಹುಲ್ ಗಾಂಧಿ ವೇದಿಕೆಯಿಂದ ಕೆಳಗೆ ಇಳಿದಾಗಿತ್ತು.

ರಾಹುಲ್ ಗಾಂಧಿ ಅವರನ್ನು ಹಿಂಬಾಲಿಸಿದ ಕೆಲವೇ ಸಮಯದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೈಹಿಡಿದುಕೊಂಡೇ ಮತ್ತೆ ವೇದಿಕೆಗೆ ಆಗಮಿಸಿದ ರಾಹುಲ್ ಗಾಂಧಿ, ಸಿದ್ಧರಾಮಯ್ಯ ಕೈ ಹಿಡಿದು ಪರಸ್ಪರ ಕೈ ಮೇಲೆ ಎತ್ತಿ, ಜನರತ್ತ ಕೈಬೀಸಿದರು.

ವೇದಿಕೆ ಮೇಲೆ ಬಂದ ಬಳಿಕ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರ ಕೈ ಕುಲುಕಿ, ಹೆಗಲ ಮೇಲೆ ಕೈಹಾಕಿ, ಆಲಂಗಿಸಿಕೊಂಡರು. ಕಾರ್ಯಕ್ರಮ ಮುಂದುವರೆಸುವಂತೆ ಹೇಳಿ ರಾಹುಲ್ ಗಾಂಧಿ ವೇದಿಕೆಯಿಂದ ನಿರ್ಗಮಿಸಿದರು.

ರಾಹುಲ್ ಗಾಂಧಿ ಅವರನ್ನು ಬೀಳ್ಕೊಟ್ಟ ಬಳಿಕ ಸಿದ್ದರಾಮಯ್ಯ ಪಕ್ಷದ ಬಹಿರಂಗ ಪ್ರಚಾರ ಭಾಷಣ ಆರಂಭಿಸಿದ ಸಿದ್ಧರಾಮಯ್ಯ, ತಮ್ಮ ಭಾಗದಲ್ಲಿ ಇಂದು ಚುನಾವಣೆಯ ಮತದಾನ ಇದ್ದ ಕಾರಣ ಮತದಾನಕ್ಕಾಗಿ ಹುಟ್ಟೂರಿಗೆ ಹೋಗಿದ್ದೆ. ಹೀಗಾಗಿ ವಿಜಯಪುರ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಬರಲಾಗದೇ ತಡವಾಯಿತು ಎಂದು ಜನೆತೆಗೆ ಸಮಜಾಯಿಸಿ ನೀಡಿದರು.

Advertisement

ರಾಹುಲ್ ಗಾಂಧಿ ಅವರಿಗೆ ವಿಜಯಪುರ ದ್ರಾಕ್ಷಿ ಬೆಳೆಯವಲ್ಲಿ ಮುಂಚೂಣಿ ಜಿಲ್ಲೆಯಾಗಿದ್ದು, ಆಸ್ಮಿತೆಗಾಗಿ ಒಣದ್ರಾಕ್ಷಿ ಹಾರ ಹಾಕಿ ವಿಶೇಷವಾಗಿ ಸ್ವಾಗತಿಸಲಾಯಿತು.

ಜಿಲ್ಲಾ ಉಸ್ತುವಾರಿ ಹೊಂದಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ರಾಹುಲ್ ಗಾಂಧಿ ಅವರಿಗೆ ಒಣದ್ರಾಕ್ಷಿ ಹಾರ ಹಾಕಿದರೆ, ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ ಸುರ್ಜೇವಾಲಾ ಅವರಿಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಒಣದ್ರಾಕ್ಷಿ ಹಾರ ಹಾಕಿ ಸ್ವಾಗತಿಸಿದರು.
ಬಳಿಕ ವೇದಿಕೆ ಆಗಮಿಸಿದ ಸಿದ್ಧರಾಮಯ್ಯ ಅವರಿಗೂ ಸಚಿವ ಎಂ.ಬಿ.ಪಾಟೀಲ ಒಣದ್ರಾಕ್ಷಿ ಹಾರ ಹಾಕಿಯೇ ಸ್ವಾಗತಿಸಿದರು.

ಅಭ್ಯರ್ಥಿಯೇ ನಾಪತ್ತೆ
ಮತ್ತೊಂದೆಡೆ ವಿಜಯಪುರ ನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರ ಸಭೆಯ ವೇದಿಕೆಯಲ್ಲಿ ವಿಜಯಪುರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಪ್ರಚಾರದ ಬಹಿರಂಗ ಸಮಾವೇಶದ ವೇದಿಕೆಗೆ ಕಟ್ಟಿದ್ದ ಬ್ಯಾನರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಭಾವಚಿತ್ರ, ಹೆಸರೂ ಕೂಡ ಎಲ್ಲಿಯೂ ಬಳಸಿರಲಿಲ್ಲ.

ಅಷ್ಟೇ ಏಕೆ ವೇದಿಕೆ ಮೇಲಿದ್ದ ನಾಯಕರು ಮಾತನಾಡುವಾಗ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಮನವಿ ಮಾಡಿದರೆ ಹೊರತು, ಎಲ್ಲಿಯೂ ಅಭ್ಯರ್ಥಿ ರಾಜು ಆಗಲೂರ ಅವರನ್ನು ಗೆಲ್ಲಿಸಿ ಎಂದು ಹೆಸರು ಪ್ರಸ್ತಾಪಿಸಿ ಮತಯಾಚನೆ ಮಾಡಲಿಲ್ಲ.

ಅಭ್ಯರ್ಥಿಯ ಭಾವಚಿತ್ರ, ಹೆಸರು ಹಾಗೂ ಅಭ್ಯರ್ಥಿ ವೇದಿಕೆಗೆ ಬಂದಲ್ಲಿ ಪ್ರಚಾರ ಸಭೆಯ ವೆಚ್ಚವೆಲ್ಲ ಅವರ ಚುನಾವಣಾ ಖರ್ಚಿನ ವೆಚ್ಚದ ಲೆಕ್ಕಕ್ಕೆ ಸೇರುತ್ತದೆ ಎಂಬ ಕಾರಣಕ್ಕೆ ಈ ರೀತಿ ಚುನಾವಣಾ ಪ್ರಚಾರ ತಂತ್ರ ಅನುಸರಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾರ್ಯಕ್ರಮದ ವೆಚ್ಚದ ಕುರಿತು “ಉದಯವಾಣಿ”ಗೆ ಮಾಹಿತಿ ನೀಡಿದ ವಿಜಯಪುರ ನಗರದಲ್ಲಿ ಕಾಂಗ್ರೆಸ್ ನಡೆಸಿದ ಚುನಾವಣಾ ಪ್ರಚಾರ ಸಭೆಯ ವೆಚ್ಚದ ಕುರಿತು ಚುನಾವಣಾ ವೆಚ್ಚ ಸಮಿತಿ ನೀಡುವ ವರದಿ ಆಧರಿಸಿ, ಈ ಬಗ್ಗೆ ನಿಖರ ಮಾಹಿತಿ ನೀಡುವುದಾಗಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next