ಬೆಂಗಳೂರು: ವಿಶ್ವಕರ್ಮ ಸಮುದಾಯದ ಪಂಚ ಕಸುಬುಗಳ ಉಳಿವು ಹಾಗೂ ಅಭಿವೃದ್ಧಿಗೆ ಶೀಘ್ರವೇ “ವಿಶ್ವಕರ್ಮ ವಿಶ್ವವಿದ್ಯಾಲಯ’ ಸ್ಥಾಪಿ ಸುವಂತೆ ಅಖೀಲ ಭಾರತ ವಿಶ್ವ ಕರ್ಮ ಸಾಧು-ಸಂತರ ಸಮಾವೇಶ ಆಗ್ರಹಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಂದಿ ಜ್ಞಾನಾನಂದ ಆಶ್ರಮದ ಶ್ರೀ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ, “ಮ ಹಾ ರಾಷ್ಟ್ರ ಸರ್ಕಾರ ಈಗಾ ಗಲೇ ಪುಣೆಯಲ್ಲಿ ವಿಶ್ವ ಕರ್ಮ ವಿಶ್ವವಿದ್ಯಾಲಯ ಸ್ಥಾಪನೆ ನಿರ್ಧಾರ ವನ್ನು ಪ್ರಕಟಿಸಿ, ಅಧಿಸೂಚನೆಯನ್ನೂ ಹೊರಡಿಸಿದೆ. ಅದೇ ಮಾದರಿಯಲ್ಲಿ ಕರ್ನಾ ಟಕ ಸರ್ಕಾರ ಕೂಡ ವಿಶ್ವ ಕರ್ಮ ವಿಶ್ವವಿದ್ಯಾಲಯ ಸ್ಥಾಪಿಸಬೇಕು,’ ಎಂದು ಆಗ್ರಹಿಸಿದರು.
ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಜೂ.5ರಿಂದ 7ರವರೆಗೆ ನಡೆದ ಅಖೀಲ ಭಾ ರತ ವಿಶ್ವ ಕರ್ಮ ಸಾಧು-ಸಂತರ ಸಮಾವೇಶದಲ್ಲಿ ಒಟ್ಟು 12 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ. ಪ್ರತಿ ವರ್ಷ ವಿಶ್ವಕರ್ಮ ಜಯಂತಿಯನ್ನು ರಾಜ್ಯ ಸರ್ಕಾರದಿಂದಲೇ ಆಚರಿಸುತ್ತಿರುವುದು ಸ್ವಾಗತಾರ್ಹ. ಆದರೆ, ವಿಶ್ವಕರ್ಮ ಸಮುದಾಯಪರಬ್ರಹ್ಮ ವಿಶ್ವಕರ್ಮ, ಭೌವನ ವಿಶ್ವ ಕರ್ಮ ಹಾಗೂ ದೇವ ಶಿಲ್ಪಿ ವಿಶ್ವಕರ್ಮ ಎಂಬ ಮೂವರನ್ನು ಆರಾಧಿಸುತ್ತಾ ಬಂದಿದೆ. ಆದ್ದರಿಂದ ವಿಶ್ವಕರ್ಮ ಜಯಂತಿ ಯನ್ನು “ದೇವಶಿಲ್ಪಿ ವಿಶ್ವಕರ್ಮ ಜಯಂತಿ’ ಎಂದು ಘೋಷಿಸಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಪತ್ರಿ ಕಾಗೋಷ್ಠಿ ಯಲ್ಲಿ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಶ್ರೀ ಅಭಿ ನವ ದೇವ ಣಾ ಚಾರ್ಯ ಸ್ವಾಮೀಜಿ, ರಾಜ್ಯ ಸಭಾ ಮಾಜಿ ಸದಸ್ಯೆ ಬಿಂಬಾ ರಾಯ್ಕರ್, ಸಮಾಜದ ಮುಖಂಡ ರಾದ ಎಸ್.ವಿ. ವೇಣು ಗೋಪಾಲಾಚಾರ್, ಭಾವು ಪ ತ್ತಾರ್ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವಕರ್ಮ ಸಮಾಜದ ಮುಖಂಡರ ಸಭೆ ನಡೆಸಿ ಅಹವಾಲು ಸ್ವೀಕರಿಸಲು ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದರು. ಕೆ.ಪಿ.ನಂಜುಂಡಿ ಅವ ರಿಗೂ ಸಭೆಗೆ ಆಹ್ವಾನ ನೀಡಲಾಗಿತ್ತು. ಆದರೆ, ಅವರು ಬಂದಿಲ್ಲ. ಯಾರು ಕೂಡ ಸಮಾಜವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ತಪ್ಪು ಸಂದೇಶ ರವಾನೆಯಾಗಬಾರದು.
-ರಘು ಆಚಾರ್, ವಿಧಾನ ಪರಿಷತ್ ಸದಸ್ಯ