ಯಾದಗಿರಿ: ದೈವಜ್ಞ ಬ್ರಾಹ್ಮಣರನ್ನು ವಿಶ್ವಕರ್ಮ ಸಮುದಾಯಗಳ ಉಪ ಪಂಗಡಗಳಿಂದ ಕೈಬಿಡುವಂತೆ ಆಗ್ರಹಿಸಿ ಅಖೀಲ ಕರ್ನಾಟಕ ವಿರ್ಶವಕರ್ಮ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಆನಂದ ಲಕ್ಷ್ಮೀಪುರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮಹಾಸಭಾ ಸದಸ್ಯರು, ದೈವಜ್ಞ ಬ್ರಾಹ್ಮಣರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷ್ಮೀಪುರ ಮಾತನಾಡಿ, ಕೇವಲ ಪಂಚವೃತ್ತಿಗಳಲ್ಲೊಂದಾದ ಚಿನ್ನ, ಬೆಳ್ಳೆ ಕೆಲಸಗಳನ್ನು ಮಾಡುತ್ತಾರೆ ವಿನಃ ವಿಶ್ವಕರ್ಮರಿಗೂ ದೈವಜ್ಞ ಬ್ರಾಹ್ಮಣರಿಗೂ ಯಾವುದೇ ಸಂಬಂಧ ಇರುವುದಿಲ್ಲ. ವಿಶ್ವಕರ್ಮರು ತಮ್ಮ ಕುಲದೇವರು. ವಿಶ್ವಕರ್ಮನ ಪೂಜೆ ಸಲ್ಲಿಸುವುದು ವಿಶ್ವಕರ್ಮ ಪಂಚ ಕಸುಬುಗಳನ್ನು ಮಾಡುವುದು ಸೃಷ್ಟಿ ನಿರ್ಮಿಸಿದ ವಿಶ್ವಕರ್ಮ ವಂಶಸ್ಥರಾದ ವೀರ ಬ್ರಹ್ಮೆಂದ್ರ ಸ್ವಾಮಿಗಳು ತಿಂಥಣಿಯ ಮೌನೇಶ್ವರರು ಸೇರಿ ಹಲವು ಪವಾಡ ಪುರುಷರನ್ನು ಹೊಂದಿದ ಸಮಾಜಕ್ಕೂ ದೈವಜ್ಞ ಬ್ರಾಹ್ಮಣರಿಗೂ ಯಾವುದೇ ಸಂಬಂಧವಿಲ್ಲ ಎಂದರು.
ಆದರೂ ನಮ್ಮ ವಿಶ್ವಕರ್ಮ ಸಮಾಜಕ್ಕೆ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದ್ಯಾವ ನ್ಯಾಯ ಅವರನ್ನು ಕೂಡಲೇ ಪಂಗಡದಿಂದ ಹೊರಹಾಕಬೇಕು ಎಂದು ಆಗ್ರಹಿಸಿದರು.
ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ವಿಶ್ವಕರ್ಮ ಇವರ ಬಗ್ಗೆ ಅವಹೇಳನಕಾರಿಯಾಗಿ ಮಾತುಗಳನ್ನಾಡಿ ಅವರ ಪ್ರತಿಕೃತಿ ದಹನ ಮಾಡಿರುತ್ತಾರೆ. ಅವರಿಗೆ ಅಷ್ಟೇ ಅಲ್ಲದೇ ಇಡಿ ನಮ್ಮ ವಿಶ್ವಕರ್ಮ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕ ದೇವೇಂದ್ರಪ್ಪ ಎಲ್. ವಡಗೇರಿ ಮಹೇಶ ವಿಶ್ವಕರ್ಮ ತಡಿಬಿಡಿ, ಶಿವಣ್ಣ ಹೂನೂರು, ಬಸವರಾಜ ಸೈದಾಪೂರ, ಶಂಕರ ಕರಣಿಗಿ, ಬನ್ನಪ್ಪ ಕಾಳೆಬೆಳಗುಂದಿ, ರಮೇಶ ಹತ್ತಿಕುಣಿ, ಶೇಖರ ತಾತಾ ಮುಷ್ಟೂರು, ಮಂಜುನಾಥ ಕಂಚಗಾರ, ರಾಜಶೇಖರ, ಜನಾರ್ದನ ಯಡ್ಡಳ್ಳಿ, ರಾಮಾಚಾರಿ, ಸಂಗಮೇಶ ವಿಶ್ವಕರ್ಮ, ಅಯ್ಯಣ್ಣ ಗಾಜರಕೋಟ, ಡಾ| ಸಂತೋಷ ಶಹಾಪೂರ ಇನ್ನಿತರರು ಇದ್ದರು.