Advertisement

ವಿಶ್ವಕರ್ಮ ಜಾತಿಯಲ್ಲ ಸಂಸ್ಕೃತಿ

09:52 PM Sep 17, 2019 | Lakshmi GovindaRaju |

ದೇವನಹಳ್ಳಿ: ವಿಶ್ವಕರ್ಮ ಸಮಾಜ ತನ್ನದೇ ಆದ ಇತಿಹಾಸ ಹೊಂದಿದ್ದು, ರಾಜ್ಯ ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಶಾಸಕ ಎಲ್‌ ಎನ್‌ ನಾರಾಯಣಸ್ವಾಮಿ ತಿಳಿಸಿದರು. ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ಮತ್ತು ವಿಶ್ವಕರ್ಮ ಸಮಾಜ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ವಿಶ್ವಕರ್ಮ ಸಮಾಜದ ಜನರು ಶತಮಾನಗಳಿಂದ ಪಂಚ ಕಸುಬುಗಳ ಮೂಲಕ ದೇಶದ ಸಂಸ್ಕೃತಿ ಬಿಂಬಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದ್ಭುತ ಕೆತ್ತೆನೆಯ ಮೂಲಕ ಐತಿಹಾಸಿಕ ಸ್ಮಾರಕ, ದೇವಸ್ಥಾನಗಳನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮದ ಶಿಲ್ಪಿಗಳಿಗೆ ಸಲ್ಲುತ್ತದೆ. ವಿಶ್ವಕರ್ಮ ಸಮಾಜವು ಒಂದು ಜಾತಿಯಲ್ಲ, ಅದೊಂದು ಸಂಸ್ಕೃತಿ ಎಂದು ಅಭಿಪ್ರಾಯಪಟ್ಟರು.

ಸಂಘದ ಅಧ್ಯಕ್ಷ ಸತ್ಯ ನಾರಾಯಣಾಚಾರ್‌ ಮಾತನಾಡಿ ಬಂಡೆಕಲ್ಲಿಗೆ ಅದ್ಭುತ ರೂಪ ಕೊಡುವ ಸಮಾಜ ನಮ್ಮದು.ನಮ್ಮ ಸಮಾಜದ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕ ಹಾಗೂ ಸಮಾಜಿಕವಾಗಿ ಅಭಿವೃದ್ಧಿಯಾಗಬೇಕು ಎಂದು ಸಲಹೆ ನೀಡಿದರು. ರಾಜ್ಯ ವಿಶ್ವಕರ್ಮ ಪ್ರಧಾನ ಕಾರ್ಯದರ್ಶಿ ಶ್ರೀಧರ್‌ ಮಾತನಾಡಿ, ವಿಶ್ವಕರ್ಮ ಸಮಾಜಕ್ಕೆ ಸ್ಮಶಾನ ಜಾಗ ಗುರುತಿಸಬೇಕು. ಮಿನಿ ವಿಧಾನಸೌಧದಲ್ಲಿ ಅಮರ ಶಿಲ್ಪಿ ಜಕಣಚಾರ್ಯರ ಪ್ರತಿಮೆ ಪ್ರತಿಷ್ಟಾಪಿಸಬೇಕು ಎಂದು ತಾಲೂಕಾಡಳಿತಕ್ಕೆ ಮನವಿ ಮಾಡಿದರು.

ಅಪರ ಜಿಲ್ಲಾಧಿಕಕಾರಿ ಜಗದೀಶ್‌ ಕೆ.ನಾಯಕ್‌ ಮಾತನಾಡಿ, ಎಲ್ಲಾ ಸಮುದಾಯದ ಜನರನ್ನು ಸಮಾಜದ ಮುಖ್ಯವಾನಿಗೆ ತರುವುದು ಸರ್ಕಾರದ ಮುಖ್ಯ ಉದ್ದೇಶ.ಈ ನಿಟ್ಟಿನಲ್ಲಿ ಸರ್ಕಾರ ವಿಶ್ವಕರ್ಮ ಸಮಾಜದ ಜನರಿಗಾಗಿ ಹಲವು ಕಾರ್ಯಕ್ರಮಗಳು, ಯೋಜನೆಗಳನ್ನು ಜಾರಿಗೆ ತಂದಿದೆ.ವಿಶ್ವಕರ್ಮ ಸಮಾಜ ಭಾರತ ದೇಶದಲ್ಲಿ ವಿಗ್ರಹ ಮತ್ತು ಶಿಲ್ಪಕಲೆಯಿಂದ ಗುರುತಿಸಿಕೊಂಡಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಹೊಸಹುಡ್ಯ ನಾರಾಯಣಾಚಾರ್‌ ಮಾತನಾಡಿದರು. ತಹಶೀಲ್ದಾರ್‌ ಅಜಿತ್‌ ರೈ, ವಿಶ್ವಕರ್ಮ ತಾಲೂಕು ಅಧ್ಯಕ್ಷ ಸತ್ಯ ನಾರಾಯಣಾಚಾರ್‌, ತಾಪಂ ಮಾಜಿ ಅಧ್ಯಕ್ಷ ನಾರಾಯಣಚಾರ್‌, ಸುರೇಶಾಚಾರ್‌, ನಾರಾಯಣಾಚಾರಿ, ರಾಜ್ಯ ವಿಶ್ವ ಕರ್ಮ ಯುವ ಕಾರ್ಯದರ್ಶಿ ಶ್ರೀಧರ್‌, ಪುಟ್ಟರಾಜಚಾರಿ, ಬಸವಚಾರಿ, ನಾಗರಾಜ ಚಾರಿ, ನಲ್ಲೂರು ಮಂಜುನಾಥಚಾರಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next