ಪನ್ವೇಲ್: ನಗರದ ಹರಿಗ್ರಾಮದಲ್ಲಿರುವ ಶಾಂತಿಕುಂಜ ಸೇವಾಶ್ರಮದಲ್ಲಿ ವಿಶ್ವಶಾಂತಿ ಮಹಾಯಜ್ಞದ ದಶಮಾನೋತ್ಸವ ಸಂಭ್ರಮವು ಫೆ. 9 ಮತ್ತು 10 ರಂದು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
2008ರಲ್ಲಿ ಜರಗಿದ ವಿಶ್ವಶಾಂತಿ ಮಹಾಯಜ್ಞ ಸವಿನೆನಪಿಗಾಗಿ ಈ ಕಾರ್ಯಕ್ರಮವನ್ನು ಆಯೋ ಜಿಸಲಾಗಿತ್ತು. ಸಂಸ್ಥಾಪಕ ಅಧ್ಯಕ್ಷ ಡಿ. ಎಂ. ಸುಕಂತಕರ್ ಅವರ ನೇತೃತ್ವದಲ್ಲಿ ಕಾರ್ಯಾಧ್ಯಕ್ಷ ರಾಜನ್ ಭಟ್ ಮತ್ತು ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಪರಮಪೂಜ್ಯ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧಿಪತಿಗಳು ಹಾಗೂ ಶಿಷ್ಯ ಸ್ವಾಮೀಜಿಯವರ ಅನುಮತಿ ಹಾಗೂ ಆಶೀರ್ವಾದಗಳೊಂದಿಗೆ ಕಾರ್ಯಕ್ರಮವು ನೆರವೇರಿತು.
ಪರ್ತಗಾಳಿ ಶ್ರೀಮದ್ ವಿದ್ಯಾಧೀರಾಜ ತೀರ್ಥ ವಡೇರ್ ಸ್ವಾಮೀಜಿ ಮತ್ತು ಶಿಷ್ಯ ಸ್ವಾಮೀಜಿಗಳಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಯವರು ಫೆ. 5ರಂದು ಸ್ವಮಠ ವಡಾಲದ ಶ್ರೀ ರಾಮಮಂದಿರಕ್ಕೆ ಆಗಮಿಸಿದ್ದು, ಫೆ. 8ರಂದು ಸಂಜೆ ಜಿಎಸ್‌ಬಿ ಸಭಾ ಬಾಲಾಜಿ ಮಂದಿರದ ವಾಶಿಯಲ್ಲಿ ವಾಸ್ತವ್ಯ ಹೂಡಿ, ಪೂಜಾರಾಧನೆಯ ಬಳಿಕ ಪನ್ವೇಲ್ ಹರಿಗ್ರಾಮಕ್ಕೆ ತೆರಳಲಿ ಫೆ. 9ರಂದು ಬೆಳಗ್ಗೆ 8ರಿಂದ ಶ್ರೀ ರಾಮನಾಮ ಜಪಹವನ, ಸುದರ್ಶನ ಹವನ, ಧನ್ವಂತರಿ ಹವನವನ್ನು ನಡೆಸಿಕೊಟ್ಟರು.
ಫೆ. 10ರಂದು ಶಾಂತಿಕುಂಜ ಸೇವಾಶ್ರಮದ ಆವರಣದಲ್ಲಿರುವ ಅಶ್ವತ್ಥ ಕಟ್ಟೆಗೆ ಉಪನಯನ ಸಂಭ್ರಮ ಜರಗಿ, ಬಳಿಕ ಶ್ರೀ ರಾಮದೇವರು, ವೀರ ವಿಟuಲ, ದೇವರಿಗೆ ಶತ ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ 1ರಿಂದ ಆರತಿ, ಅಪರಾಹ್ನ 4.30 ರಿಂದ ವಿಶೇಷವಾಗಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪರಮ ಪೂಜ್ಯರು ಆಶೀರ್ವಚನ ನೀಡಿ ಶುಭಹಾರೈಸಿದರು. ಫೆ. 9ರಂದು ಸಂಜೆ 5.30ರಿಂದ ಉತ್ತರ ಕನ್ನಡದ ಶಿರಾಲಿಯ ವತಿಯಿಂದ ರಥಯಾತ್ರೆ ಮತ್ತು ದೀಪಾರಾಧನೆ ಜರಗಿತು. ಸಮಾಜ ಬಾಂಧವರು, ಭಕ್ತಾದಿಗಳು ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.