Advertisement
ನಗರದ ವಿಹಿಂಪ ನಿವೇಶನದಲ್ಲಿ ವಿಹಿಂಪನ ನೂತನ ಜಿಲ್ಲಾ ಕಾರ್ಯಾ ಲಯಕ್ಕೆ ಭೂಮಿ ಪೂಜಾ ಕಾರ್ಯಕ್ರಮದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಷದ್ 60 ವರ್ಷಗಳನ್ನು ಪೂರೈಸಿದ್ದು, ಈ ಅವಧಿಯಲ್ಲಿ ಸಾಮಾಜಿಕ ಪರಿವರ್ತನೆ ತರಲು ಶ್ರಮಿಸಿದೆ ಎಂದರು.
ಸುಬ್ರಹ್ಮಣ್ಯ ನರಸಿಂಹ ಸಂಪುಟದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಮಾತನಾಡಿ, ಸಂಸ್ಕೃತಿಯನ್ನು ಉಳಿಸುವ ಕಾರ್ಯ ಆಗಬೇಕು. ಅದರ ಭಾಗವಾಗಿ ವಿಎಚ್‌ಪಿ ಕಾರ್ಯಾಲಯ ಇದೆ. ನಮ್ಮ ಧರ್ಮ, ಭಾಷೆಯನ್ನು ಜೀವಂತವಾಗಿಡಲು ಇದ ರಲ್ಲಿ ಪೂರಕ ಕಾರ್ಯಕ್ರಮ ನಡೆಯಬೇಕು. ಹಿಂದೂ ಯುವಜನರಿಗೆ ಆತ್ಮರಕ್ಷಣೆಯ ವಿದ್ಯೆಗಳ ಅಗತ್ಯ ಇದೆ ಎಂದರು.
Related Articles
Advertisement
ವಿಎಚ್‌ಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಅಶೋಕ್ ರೈ!ಪುತ್ತೂರು: ವಿಹಿಂಪ ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮ ದಲ್ಲಿ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್‌ರೈ ಭಾಗವಹಿಸಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಅರುಣ್ ಪುತ್ತಿಲ ಅವರಿಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅಶೋಕ್ ಕುಮಾರ್ ರೈ ಆಗಮಿಸಿರುವ ವಿಷಯ ಸದ್ದು ಮಾಡಿದೆ. ಸಭಾ ವೇದಿಕೆಗೆ ಶಾಸಕರನ್ನು ಕರೆದು ಕೇಸರಿ ಶಾಲು ಹಾಕಿ ಸ್ವಾಗತಿಸಲಾಯಿತು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಕೂಡ ಪಾಲ್ಗೊಂಡಿದ್ದರು. ಜಾಗಕ್ಕಾಗಿ ಐವರ ಶ್ರಮ
ಕಟ್ಟಡ ಸಮಿತಿ ಅಧ್ಯಕ್ಷ ಯು. ಪೂವಪ್ಪ ಮಾತನಾಡಿ, 35 ವರ್ಷಗಳ ಹಿಂದೆ ಪೇಜಾವರ ಶ್ರೀಗಳ 50ನೇ ವರ್ಷದ ಕಾರ್ಯಕ್ರಮಕ್ಕೆ ಹೋಗಿದ್ದಾಗ ಈ ಜಾಗವನ್ನು ಭೀಮ್ ಭಟ್ ಅವರು 1.5 ಲಕ್ಷ ರೂ.ಗೆ ಸೀರತ್ ಕಮಿಟಿಗೆ ಮಾರುತ್ತಿರುವ ವಿಷಯ ತಿಳಿಯಿತು. ನಾನು, ರಾಮಭಟ್, ಜಿ.ಎಲ್ ಆಚಾರ್ಯ ಸಹಿತ ಐವರು ಭೀಮ್ ಭಟ್ ಮನೆಗೆ ಹೋಗಿ ಕೇಳಿದಾಗ,1.60 ಲಕ್ಷ ರೂ.ನೀಡಿದರೆ ನಿಮಗೆ ಕೊಡುವೆ ಎಂದರು. ಮನೆ ಮನೆಗೆ ತೆರಳಿ ಹಣ ಸಂಗ್ರಹಿಸಿ ಜಾಗ ಖರೀದಿಸಿ ಹಿಂದೂ ಕಲ್ಯಾಣ ಟ್ರಸ್ಟ್ ಹೆಸರಿನಲ್ಲಿ ನೋಂದಣಿ ಮಾಡಿದೆವು. ಕ್ರಮೇಣ ವಿಎಚ್‌ಪಿಗೆ ನೀಡಲಾಯಿತು. ಸಾಲ ಇದ್ದ ಕಾರಣ 50ರಲ್ಲಿ ಜಾಗದಲ್ಲಿ 10 ಸೆಂಟ್ಸ್ ಮಾರಿ, ಉಳಿಕೆ ಹಣದಲ್ಲಿ ಸಂಘಟನೆಗೋಸ್ಕರ ಬೇರೆಡೆ 3.5 ಎಕ್ರೆ ಜಾಗವನ್ನು ಖರೀದಿಸಿದೆವು ಎಂದರು. ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕರಾದ ಸಂಜೀವ ಮಠಂದೂರು ಸಹಿತ ಪ್ರಮುಖರು ಉಪಸ್ಥಿತರಿದ್ದರು. ನೋವು ವ್ಯಕ್ತಪಡಿಸಿದ ಪೂವಪ್ಪ
ಪ್ರತಿ ಹಿಂದೂ ಇಲ್ಲಿಗೆ ಬರಬೇಕು ಅನ್ನುವ ನನ್ನ ಅಪೇಕ್ಷೆಯಾಗಿತ್ತು. ಆದರೆ ಇಂದು ನಡೆದ ಘಟನೆ ನನಗೆ ನೋವು ತಂದಿದೆ. 1974ರಿಂದ ನಾನು ವಿಎಚ್‌ಪಿನಲ್ಲಿದ್ದೇನೆ. ಮೊದಲ ಬಾರಿಗೆ ಈ ಸ್ಥಳಕ್ಕೆ ಪೊಲೀಸರು ಬರುವಂತಾಯಿತು ಎಂದು ಭೂಮಿ ಪೂಜೆ ಸಂದರ್ಭದಲ್ಲಿ ಪುತ್ತಿಲ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರ ಮಧ್ಯೆ ನಡೆದ ಸಂಘರ್ಷದ ಬಗ್ಗೆ ಯು.ಪೂವಪ್ಪ ನೋವು ತೋಡಿಕೊಂಡರು.