Advertisement

ಬ್ರಾಹ್ಮಣ ವರ್ಗಕ್ಕೆ ಅವಮಾನ: ಪ್ರತಿಭಟನೆ

06:45 AM Aug 12, 2017 | Team Udayavani |

ಉಡುಪಿ:  ಜಾತಿ, ವರ್ಗ, ಪಂಥಗಳ ನಡುವೆ ಸಾಮರಸ್ಯ ಇರಬೇಕು. ಹೀಗಿದ್ದರೆ ಮಾತ್ರ ಸಮಾಜದಲ್ಲಿ  ನೆಮ್ಮದಿ ಸಾಧ್ಯ. ಮನೋರಂಜನೆಯ ಹೆಸರಿನಲ್ಲಿ ಮಕ್ಕಳಲ್ಲಿ ಕೆಟ್ಟ ಸಂದೇಶ ಬಿತ್ತುವ ಸಾಹಸಕ್ಕೆ  ಕೈ ಹಾಕಿ ತಪ್ಪು ಸಂದೇಶ ನೀಡಬಾರದೆಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

Advertisement

ಕನ್ನಡ ವಾಹಿನಿಯೊಂದು ಡ್ರಾಮಾ ಜೂನಿಯರ್‌ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಜಾತಿ ಹಾಗೂ ವೃತ್ತಿಯನ್ನು ಕೀಳರಿಮೆಯಿಂದ ಬಿತ್ತರಿಸಿದ್ದನ್ನು  ಖಂಡಿಸಿ ಬುಧವಾರ ಪೇಜಾವರ ಮಠದಲ್ಲಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಿಳಿದೋ, ತಿಳಿಯದೆಯೋ ಬ್ರಾಹ್ಮಣರನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸಿದ ವಾಹಿನಿ ಕ್ಷಮೆಯಾಚಿಸಿ ಪ್ರಕರಣವನ್ನು ಇಲ್ಲಿಗೆ ಮುಗಿಸಲಿ ಎಂದರು. 

ಯಾವುದೇ ಜಾತಿ, ಧರ್ಮದವರನ್ನು ಕೆಟ್ಟದಾಗಿ ಬಿಂಬಿಸುವ ಅಧಿಕಾರ ಯಾರಿಗೂ ಇಲ್ಲ. ಅವರವರ ಕುಲಕಸುಬುಗಳಿಗೆ ಅದರದ್ದೇ ಆದ ಗೌರವ ಇದೆ. ಇನ್ನೊಬ್ಬರನ್ನು ಮನೋರಂಜನೆಗೆ ಬಳಸಿಕೊಳ್ಳುವುದು ಕೂಡಾ ಅಘಾತಕಾರಿ ಎಂದು ಮಾಜಿ ಶಾಸಕ ಕೆ.ರಘಪತಿ ಭಟ್‌ ನುಡಿದರು.

ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ನ ವಿಷ್ಣುಪ್ರಸಾದ್‌ ಪಾಡಿಗಾರು ಸ್ವಾಗತಿಸಿದರು. ಪುರೋಹಿತರ ಸಂಘದ ಅಧ್ಯಕ್ಷ  ವೇದವ್ಯಾಸ ಐತಾಳ್‌, ಪರಿಷತ್‌ ಪದಾಧಿಕಾರಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next