ರಾಮನಗರ: ಯುಗದ ಕವಿ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ಡಿ.24ರಂದು ನಗರದ ಆರ್ .ವಿ.ಸಿ.ಎಸ್ ಕನ್‌ವೆನ್ಷನ್ ಹಾಲ್ ನಲ್ಲಿ ವಿಶ್ವ ಮಾನವ ದಿನಾಚರಣೆ ಏರ್ಪಡಿಸಲಾಗಿದೆ ಎಂದು ಚುಂಚನಗಿರಿ ಅರ್ಚಕರಹಳ್ಳಿ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಕುವೆಂಪು ಜನ್ಮ ದಿನವನ್ನು ರಾಜ್ಯ ಸರ್ಕಾರ ವಿಶ್ವ ಮಾನವ ದಿನವನ್ನಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಚುಂಚನಗಿರಿ ಮಠ ವಿಚಾರ ಮಂಡನೆ ಆಯೋಜಿಸಿದೆ ಎಂದರು.
ಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಹಿತಿಗಳಾ್ ಮುಕುಂದರಾಜ್ ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ, ಭೈರಮಂಗಲರಾಮೇಗೌಡರವರು ಶ್ರೀ ರಾಮಾಯಣ ದರ್ಶನಂ ಹಾಗೂ ಪ್ರೊ.ಚಂದ್ರಶೇಖರ ನಂಗಲಿ ಅವರು ಕುವೆಂಪು ಕಾವ್ಯಗಳ ಶ್ರೀಮಂತಿಕೆ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆಂದರು.
ಕುವೆಂಪು ವೈಚಾರಿಕತೆ ನಾಡಿನ ಎಲ್ಲಾ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಬೇಕು ಎಂಬುದು ಶ್ರೀ ಮಠದ ಆಶಯ. ಹೀಗಾಗಿಯೇಜಿಲ್ಲಾ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು.
ಮನುಷ್ಯ ಶ್ರಮ ಸಂಸ್ಕೃತಿ ಜತೆಗೆ ವಿಶ್ವ ಮಾನವ ವಿಚಾರಧಾರೆ ಅಳವಡಿಸಿಕೊಂಡು ತಾರತಮ್ಯ ತೊರೆದು ವಿಶಾಲ ಮನೋಭಾವ ತಾಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಬಹುತೇಕರಿಗೆ ದಾರ್ಶನಿಕ ಕುವೆಂಪು ಅವರ ಬಗ್ಗೆ ಗೊತ್ತಿಲ್ಲ. ವಿಶ್ವ ಮಾನವ ದಿನಾಚರಣೆ ಜತೆಗೆ ಕುವೆಂಪು ರವರ ವಿಚಾರಧಾರೆಗಳು ಮನಮುಟ್ಟುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ರೈತಸಂಘ ಮುಖಂಡ ಸಿ.ಪುಟ್ಟಸ್ವಾಮಿ ಮಾತನಾಡಿ, ಶ್ರೀ ಮಠದೊಂದಿಗೆ ಚರ್ಚಿಸಿ ಕುವೆಂಪು ರವರವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾv ಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಹನುಮೇಲಿಂಗು ಇದ್ದರು.