Advertisement

Mangaluru: ತಿಂಗಳೊಳಗೆ ಗೋಹತ್ಯೆ ತಡೆಯದಿದ್ದರೆ ಪ್ರತಿಭಟನೆ

11:33 AM Jul 26, 2024 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಕಾನೂನು ಮೀರಿ ನಡೆಯುತ್ತಿರುವ ಗೋವುಗಳ ಅಕ್ರಮ ಸಾಗಾಟ, ಗೋಹತ್ಯೆಯನ್ನು ಒಂದು ತಿಂಗಳೊಳಗೆ ತಡೆಯದಿದ್ದರೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ವಿಶ್ವ ಹಿಂದೂ ಪರಿಷತ್‌ ಹಾಗೂ ಹಿಂದೂ ಜಾಗರಣ ವೇದಿಕೆ ಮುಖಂಡರು ತಿಳಿಸಿದ್ದಾರೆ.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ಸುರತ್ಕಲ್‌ ಪ್ರಖಂಡ ಅಧ್ಯಕ್ಷ ಭಾಸ್ಕರ್‌ ರಾವ್‌ ಬಾಳ ಅವರು, ದೊಡ್ಡ ಗೋಮಾಂಸ ಮಾಫಿಯಾ ಕಾರ್ಯಾಚರಿಸುತ್ತಿದ್ದು, ಅದನ್ನು ಮಟ್ಟ ಹಾಕುವಂತೆ ಜಿಲ್ಲಾಡಳಿ ತವನ್ನು ಆಗ್ರಹಿಸಿದರು.

ಕೆಲವು ದಿನಗಳ ಹಿಂದೆ ಕೃಷ್ಣಾಪುರ 8ನೇ ಬ್ಲಾಕ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿ ಖಾನೆ ಕುರಿತು ಬಜರಂಗದಳ ಕಾರ್ಯಕರ್ತರು ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದಾಗ ನೂರಾರು ಕೆಜಿ ಗೋಮಾಂಸ, 19 ಗೋವುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಅಪ ರಾಧಿಗಳನ್ನು ಬಂಧಿಸದಿರುವ ಕಾರಣ ಕಸಾಯಿಖಾನೆಯವರಿಗೆ ಯಾವುದೇ ಭಯವೂ ಇಲ್ಲ. ಅದಕ್ಕಾಗಿ ಗುರುವಾರ ಸುರತ್ಕಲ್‌ನಲ್ಲಿ ಪ್ರತಿಭಟನೆ ಹಮ್ಮಿ ಕೊಂಡಾಗ ಪೊಲೀಸರು ಶೀಘ್ರ ಕಸಾಯಿಖಾನೆಗಳನ್ನು ಮುಚ್ಚಿಸುವ ಭರವಸೆ ನೀಡಿದ್ದರು ಎಂದರು.

ಅಕ್ರಮ ಕಸಾಯಿಖಾನೆ
ಸುರತ್ಕಲ್‌, ಜೋಕಟ್ಟೆ, ತಣ್ಣೀರು ಬಾವಿ ಸಹಿತ ಹಲವು ಕಡೆ ಅಕ್ರಮ ಕಸಾಯಿಖಾನೆಗಳಿದ್ದು, ಅಲ್ಲಿಗೆ ಗೋವುಗಳನ್ನು ತರುವ ಹಾಗೂ ಮಾಂಸಕೊಂಡು ಹೋಗುವ ಜಾಲವನ್ನು ಭೇದಿಸಬೇಕು ಎಂದರು.

ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಹಲವೆಡೆ ಮಾಂಸದ ಅಂಗಡಿಯ ಪರವಾನಿಗೆ ಪಡೆದು ದನದ ಮಾಂಸ ಮಾರಲಾಗುತ್ತಿದೆ. ಇದರ ಮೇಲೆ ನಿಗಾ ಇರಿಸಬೇಕು ಎಂದು ಒತ್ತಾಯಿಸಿದರು.

Advertisement

ವಿಹಿಂಪ ಸುರತ್ಕಲ್‌ ಪ್ರಖಂಡ ಕಾರ್ಯದರ್ಶಿ ಜಯರಾಮ ಆಚಾರ್ಯ, ಬಜರಂಗದಳ ಜಿಲ್ಲಾ ಸಹಸಂಯೋಜಕ್‌ ಪ್ರೀತಮ್‌ ಕಾಟಿ ಪಳ್ಳ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬಾಲಕೃಷ್ಣ ಮುಂಚೂರು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next