Advertisement

Bengaluru: ಲಂಗೋಟಿ ಮ್ಯಾನ್‌ ಚಿತ್ರಕ್ಕೆ ಸೆನ್ಸಾರ್‌ ಬೇಡ: ಹಿಂದೂ ಸಮಿತಿ

11:06 AM Aug 31, 2024 | Team Udayavani |

ಬೆಂಗಳೂರು: ಕನ್ನಡದ “ಲಂಗೋಟಿ ಮ್ಯಾನ್‌’ ಚಿತ್ರದ ಟ್ರೈಲರ್‌ ನಲ್ಲಿ ಬ್ರಾಹ್ಮಣ ಸಮುದಾಯವನ್ನು ಹಾಸ್ಯಾಸ್ಪದ ರೀತಿಯಲ್ಲಿ ತೋರಿಸಲಾಗಿದ್ದು, ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಆದ್ದರಿಂದ ಈ ಸಿನಿಮಾ ಪ್ರದರ್ಶನಕ್ಕೆ ಸೆನ್ಸಾರ್‌ ಮಂಡಳಿ ಒಪ್ಪಿಗೆ ಸೂಚಿಸಬಾರದು ಎಂದು ಹಿಂದೂ ಜನ ಜಾಗೃತ ಸಮಿತಿ ಆಗ್ರ ಹಿಸಿದೆ.

Advertisement

ಚಿತ್ರದಲ್ಲಿ ಒಬ್ಬ ಜನಿವಾರಧಾರಿ ಮತ್ತು ಲಂಗೋಟಿ ಹಾಕಿರುವ ವ್ಯಕ್ತಿಯನ್ನು ಹಾಸ್ಯದ ರೀತಿಯಲ್ಲಿ ತೋರಿಸಿದ್ದಾರೆ. ಹಾಗಾಗಿ ಸೆನ್ಸಾರ್‌ ಮಂಡಳಿ ಈ ಚಿತ್ರಕ್ಕೆ ಅನುಮತಿ ನೀಡಬಾರದು. ಅನುಮತಿ ನೀಡಿದ್ದಲ್ಲಿ ತಕ್ಷಣವೇ ಹಿಂಪಡೆಯಬೇಕು. ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಉದ್ದೇಶಪೂರ್ವಕ ವಾಗಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಚಿತ್ರಗಳು ಬರುತ್ತಿದೆ. ಸೆನ್ಸಾರ್‌ ಮಂಡಳಿ ತಕ್ಷಣವೇ ಇದನ್ನು ನಿಯಂತ್ರಿಸಬೇಕು ಎಂದು ಸಮಿತಿಯ ಜಿಲ್ಲಾ ಸಮನ್ವಯಕ ಶರತ್‌ ಕುಮಾರ್‌ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

content-img

Advertisement

Udayavani is now on Telegram. Click here to join our channel and stay updated with the latest news.