ಪರಿತ್ರಾಣಾಯ ಸಾಧೂನಾಂ
ವಿನಾಶಾಯ ಚದುತಂ
ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇಯುಗೇ |
ಶಿಷ್ಟರಕ್ಷಣಾ, ದುಷ್ಟಶಿಕ್ಷಣೆ, ಸಾಧುಜನರನ್ನು ರಕ್ಷಿಸುವುದಕ್ಕೆ ದುರ್ಜನರ ವಿನಾಶ ಮಾಡುವ ಉದ್ದೇಶ ಹಾಗೂ ಧರ್ಮದ ಪುನರುತ್ಥಾನಕ್ಕಾಗಿ ವಿಷ್ಣು ದ್ವಾಪರ ಯುಗದಲ್ಲಿ ಕೃಷ್ಣಾವತಾರ ತಾಳುತ್ತಾನೆ.
Advertisement
ಜನನದ ಹಿನ್ನೆಲೆ ಉಗ್ರಸೇನನ ಮಗ ಕಂಸ ತಂದೆಯನ್ನೇ ಸೆರೆಯಲ್ಲಿಟ್ಟು ಮಥುರ ನಗರ ವನ್ನಾಳುತ್ತಿರುತ್ತಾನೆ. ಪ್ರಜೆಗಳು ಅವನ ಕಿರುಕುಳ ತಾಳಲಾರದೆ ಅಶಾಂತಿ ಇಂದಿರುತ್ತಾರೆ. ಕಂಸ ತನ್ನ ಸಹೋದರಿ ತಂಗಿ ದೇವಕಿಯ ವಿವಾಹವನ್ನು ವಿಜೃಂಭಣೆಯಿಂದ ನೆರವೇರಿಸುತ್ತಿದ್ದಾಗ, ಮೆರವಣಿಗೆ ಹೊರಟಿರುತ್ತದೆ .
Related Articles
Advertisement
“ಅಮ್ಮ ನಾನೇಕೆ ಕಪ್ಪು ರಾಧೇ ಏಕೆ ಬಿಳಿ’ ಎಂದು ಮುದ್ದುಗರೆಯುತ್ತ ಯಶೋಧೆಗೆ ಪ್ರಶ್ನಿಸಿದ.
“ನೀನು ಹುಟ್ಟಿದ್ದು ರಾತ್ರಿ ಅದಕ್ಕೆ ನೀನು ಕಪ್ಪು ,ರಾಧೆ ಹಗಲಿನಲ್ಲಿ ಜನಿಸಿದಳು ಅದಕ್ಕೆ ಬಿಳಿ ‘ ಎಷ್ಟು ಸರಳವಾದ ಉತ್ತರ, ಸಮಾಧಾನಗೊಂಡ ಕನ್ನಯ್ಯ!
“ಮಣ್ಣು ತಿನ್ನಬೇಡ ‘ ಕಾತುರದಿ ಯಶೋಧೆ ಬಾಯಿ ತೆಗೆ ಅಂದಾಗ, ಮಾತೆಗೆ ತೋರಿದ ಜಗವತನ್ನ ಬಾಯಲ್ಲಿ.’
ಕಾಳಿಂಗ ಸರ್ಪವ ಕೊಂದು ಮಕ್ಕಳ ಕಾಪಾಡಿದ. ನವನೀತ ಚೋರ ಅಂತ ಕೃಷ್ಣನಿಗೆ ಮತ್ತೊಂದು ಹೆಸರು. ಬೆಣ್ಣೆಯ ಪ್ರೇಮಿ ಕೃಷ್ಣ ಎಲ್ಲರ ಮನೆಯಲ್ಲೂ ಬೆಣ್ಣೆ ತಿನ್ನುತ್ತಿದ್ದನಂತೆ. ಕಳವಳದಿ ಗೋಪಿಯರು ಯಶೋಧೆಗೆ ಅರುಹಿದಾಗ ಯಶೋಧೆ “ಕೃಷ್ಣಾ, ಬೇರೆಯವರ ಮನೆಯಲ್ಲಿ ಬೆಣ್ಣೆ ಏಕೆ ಕದಿಯುತ್ತೀಯ ? ಎಂದು ಮುನಿಸಿದಾಗ ಕೃಷ್ಣಾ ಮುಗುಳ್ನಕ್ಕು’ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ, ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆ ಮೆತ್ತಿದರಮ್ಮ’ ಅಂತ ಬೆಣ್ಣೆ ಮೆತ್ತಿದ ಕೈಗಳನ್ನು ಬೆನ್ನ ಹಿಂದೆ ಮುಚ್ಚಿಟ್ಟಾಗ ಮಾತೃಹೃದಯ ಕರಗಿ ಅವನ ಮುದ್ದಾಡಿದಳಂತೆ.
ಯೋಚನೆಗಳೇ ಜೀವನದ ಸಮಸ್ಯೆ ಪಾರ್ಥ ಜ್ಞಾನ ಸಂಪಾದನೆ ಅದರ ಪರಿಹಾರ ಪಾರ್ಥ ಜೀವಿಸು ಮತ್ತೊಬ್ಬರಿಗಾಗಿ, ಜೀವನದ ಅರ್ಥ ಅದೇ ಸನ್ಮಾರ್ಗ ನಿನ್ನ ಅಭಿವೃದ್ಧಿಗೆ ಅರ್ಪಿಸು ಕರ್ಮ, ಫಲ ಬಯಸದೆ ಎನಗೆ ಬಿಡು ಅಹಂ, ಆನಂದಿಸು ಅನಂತನ ನಿನ್ನೊಳಗೆ ಕಲಿತ ವಿದ್ಯೆಯಲಿ ಜೀವನ ಸಾಗಲಿ ದುರ್ಮಾರ್ಗ ದೂರವಿರಲಿ ಗಮನವಿರಲಿ ದೇವನಲ್ಲಿ ಕಾಣು ಅವನ ಎಲ್ಲ ವಸ್ತು, ಜೀವಿಗಳಲಿ ಬ್ರಹ್ಮ ಸತ್ಯ ಒಪ್ಪು ಜೀವನದಲ್ಲಿ ಮನಸ್ಸು ಸೇರಲಿ ಅವನಲ್ಲಿ ಮಾಯಾ ಜಾಲ ದೂರವಿರಲಿ ನಾಮಸ್ಮರಣೆ, ಭಕ್ತಿ ನಿರಂತರ ವಾಗಲಿ ಬಾಳಿನ ಗುರಿ ಅದಾಗಲಿ ಆಗ ನೀಡುವೆ ಬಹುಮಾನ “ಸತ್ವಗುಣ’ ಆಕಾಂಕ್ಷೆ ಗಳಲ್ಲಿ ಅದು ಉತ್ತಮ ಗುಣ
ದೊರಕುವುದು ಮುಕ್ತಿ, ಅನುಮಾನ ಬೇಡ ಕಣ’ : ಇದೇ ಗೀತೆಯ ಸಾರ. ಭಗವದ್ಗೀತೆ ಅನೇಕ ಪಾಶ್ಚಾತ್ಯ ಭಾಷೆಗಳಲ್ಲಿ ಅನುವಾದ ಮಾಡಲ್ಪಟ್ಟಿದೆ . ಇಟಾಲಿಯನ್ ಭಾಷೆಯಲ್ಲಿ ಇದರ ಶೀರ್ಷಿಕೆ Il canto del beat , ಭಗವಂತನ ಹಾಡು, ಇದು ಎಲ್ಲರಿಗೂ ಅಚ್ಚುಮೆಚ್ಚಿನ ಗ್ರಂಥ.
ಈ ಪವಿತ್ರ ದಿನ ಜನ್ಮಾಷ್ಟಮಿ ಹೇಗೆ ಆಚರಿಸಲ್ಪಡುತ್ತದೆ ಅಂತ ನೋಡೋಣ. ಭಾರತ ಒಂದು ಮೊಸಾಯಿಕ್ ತರಹ ವೈವಿಧ್ಯತೆಯಲ್ಲಿ ಏಕತೆ ನೋಡುವುದೇ ನಮ್ಮ ವಿಶೇಷತೆ. ಒಂದೊಂದು ಪ್ರಾಂತದಲ್ಲಿ ಒಂದೊಂದು ತರಹ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ದೇಗುಲಗಳಲ್ಲಿ 108 ತರಹ ಸಿಹಿತಿಂಡಿಗಳನ್ನು ನೈವೇದ್ಯ ಮಾಡಿ, ನವವಸ್ತ್ರಗಳನ್ನು ಧರಿಸಿ, ಕೆಲವರು ಉಪವಾಸ ವ್ರತ ಆಚರಿಸಿ, ಕೃಷ್ಣನನ್ನು ಪೂಜಿಸಿ, ಮಾರನೇದಿನ ಕೃಷ್ಣಲೀಲೆ ಅಂಗವಾಗಿ ಮಟ್ಕಾ (ಮಡಕೆ )ಗಳನ್ನು ಮೇಲೆ ಕಟ್ಟಿ ಒಡೆಯುತ್ತಾರೆ. ಅವನು ನವನೀತ ಚೋರ ಮಡಿಕೆ ಒಡೆದು ಬೆಣ್ಣೆ ತಿನ್ನುತ್ತಿದ್ದನಂತೆ, ಇದೇ ಮಟ್ಕಾ ಒಡೆಯುವ ಅರ್ಥ. ದಕ್ಷಿಣ ಭಾರತೀಯರು ಈ ದಿನ ಮಧ್ಯರಾತ್ರಿಯವರೆಗೂ ಉಪವಾಸವಿದ್ದು ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ಕರಿದ ತಿಂಡಿ ಅವನಿಗೆ ಪ್ರೀತಿಯಂತೆ! ನಮ್ಮ ಪಾತಿ ದಿನವೆಲ್ಲ ಉಪವಾಸವಿದ್ದು ಇಡೀ ರಾತ್ರಿ ಹಾಡುಗಳನ್ನು ಹಾಡುತ್ತ ಕೃಷ್ಣನಿಗೆ ಪ್ರಿಯವಾದ ತಿಂಡಿಗಳನ್ನು ಮಾಡಿ ಅರ್ಪಿಸಿ ಪ್ರಸಾದ ನೀಡುತ್ತಿದ್ದಾಗ ಬೆಳಗು ಜಾವ ಆಗುತ್ತಿತ್ತು! ಸಿಹಿ ತಿಂಡಿಗಳನ್ನು ಮಾಡಿ ಅವನಿಗೆ ಅರ್ಪಿಸುವುದು ವಾಡಿಕೆ. ಮಕ್ಕಳು ಕೃಷ್ಣನ ವೇಷಧರಿಸಿ ಕೊಳಲು ಹಿಡಿದು ಓಡಾಡುತ್ತಿದ್ದರೆ ಅದೇ ಕಣ್ಣಿಗೆ ಹಬ್ಬ. ಕೃಷ್ಣನಿಗೆ ಅನೇಕ ಹೆಸರುಗಳು. ಮುಕುಂದ, ಮಾಧವ, ಪಾರ್ಥಸಾರಥಿ, ವೇಣುಗಾನಲೋಲ , ಗೋಪಾಲ್ ಹೀಗೆ ಅನೇಕ ಹೆಸರುಗಳು. ಗೋವುಗಳ ಕಾಯ್ದವ ಕೃಷ್ಣನ ವೇಣುಗಾನಕ್ಕೆ, ಗೋಪಿಯರ ರಾಸಲೀಲೆಗೆ ಗೋವುಗಳು ಸಹ ತಲೆದೂಗುತ್ತಿದ್ದವಂತೆ. ಹೀಗೆ ಜನಾಷ್ಟಮಿ ಹೊರದೇಶಗಳಲ್ಲೂ ಆಚರಣೆಯಲ್ಲಿದೆ. ಎಲ್ಲರಿಗೂ ಜನ್ಮಾಷ್ಟಮಿಯ ಶುಭಾಶಯಗಳು. ಶ್ರೀ ಕೃಷ್ಣಾರ್ಪಣ ಮಸ್ತು.