Advertisement
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹ ವ್ಯಕ್ತವಾಯಿತು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಆರೆಸ್ಸೆಸ್‌ನ ಹಿರಿಯ ಮುಖಂಡ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅವರು, ಹಿಂದೂ ಧರ್ಮ, ಶ್ರದ್ಧಾಕೇಂದ್ರಗಳ ಮೇಲೆ ಕ್ರೂರ ಅಪಚಾರ ನಡೆಯುತ್ತಿದ್ದು, ಹಿಂದೂಗಳು ಇನ್ನೂ ಸಂಘಟಿತರಾಗದಿರುವುದೇ ಇದಕ್ಕೆ ಮುಖ್ಯ ಕಾರಣ. ಸರಕಾರದ ಅಧೀನದ ದೇಗುಲಗಳ ಆಡಳಿತ ಮಂಡಳಿಗಳಿಗೆ ಅನ್ಯ ಮತೀಯರನ್ನು ನೇಮಕ ಮಾಡಿ, ಧರ್ಮದ ಅಚರಣೆಗಳ ಮೇಲೆ ಅಪಚಾರ ಮಾಡಲಾಗುತ್ತಿದೆ. ತಿರುಪತಿಯಂತಹ ಘಟನೆ ಇತರ ಮತೀಯರ ಶ್ರದ್ಧಾ ಕೇಂದ್ರದಲ್ಲಿ ನಡೆಯುತ್ತಿದ್ದರೆ ದೇಶವೇ ಹೊತ್ತಿ ಉರಿಯುತ್ತಿತ್ತು ಎಂದರು.
Related Articles
ಒಡಿಯೂರು ಶ್ರೀ ಗುರುದೇವಾ ನಂದ ಸ್ವಾಮೀಜಿ ಮಾತನಾಡಿ, ಸನಾ ತನ ಹಿಂದೂ ಧರ್ಮಕ್ಕೆ ಧಕ್ಕೆಯಾ ದಾಗ ರಾಜಕೀಯ ರಹಿತವಾಗಿ ಹೋರಾಡಬೇಕು. ಇಚ್ಛಾಶಕ್ತಿಯ ಕೊರತೆ ಕಾರಣದಿಂದ ಅದು ನಮ್ಮಿಂದ ಸಾಧ್ಯ ವಾಗುತ್ತಿಲ್ಲ, ಸಮಾಜ ಹಾಗೂ ಸಂತರು ಜತೆಯಾಗಿ ಸಾಗಿದಾಗ ಮಾತ್ರ ಧರ್ಮಕ್ಕೆ ಜಯ ಸಿಗುತ್ತದೆ. ದೇವಾಲಯಗಳ ಆಡಳಿತ ನಾಸ್ತಿಕರ ಕೈಗೆ ಹೋಗದಂತೆ ತಡೆಯುವ ಅಗತ್ಯವಿದೆ ಎಂದರು.
Advertisement
ಸರಕಾರಗಳಿಂದ ನಿರ್ಲಕ್ಷ್ಯ: ಮಾಣಿಲ ಶ್ರೀಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಹಿಂದೂ ವಿರೋಧಿ ಧೋರಣೆ ಹೊಂದಿರುವ ಕೆಲವು ರಾಜ್ಯ ಸರಕಾರಗಳಿಗೆ ದೇವಸ್ಥಾನದ ಹಣ ಬೇಕು. ಆದರೆ ದೇಗುಲಗಳ ಅಭಿವೃದ್ಧಿಗೆ ಸರಕಾರ ಮುಂದಾಗುವುದಿಲ್ಲ ಎಂದರು. ಮಂಗಳೂರಿನ ಓಂ ಶ್ರೀಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಕನ್ಯಾನ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಓಂ ಶ್ರೀಮಠದ ಶ್ರೀ ಶಿವ ಜ್ಞಾನಮಹಿ ಸರಸ್ವತಿ, ವಿಹಿಂಪ ಕ್ಷೇತ್ರೀಯ ಮಂದಿರ ಅರ್ಚಕ ಪುರೋಹಿತ ಸಂಪರ್ಕ ವಿಭಾಗ ಪ್ರಮುಖ್ ಬಸವರಾಜ್ ಜೀ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುತೋಷತ್ತಮ್, ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರವೀಣ್ ನಾಗ್ವೇಕರ್, ಬಿ.ವರದರಾಯ ಎಸ್. ನಾಗ್ವೇಕರ್, ಬಿ.ಸಾಯಿದತ್ತ, ವಿಎಚ್‌ಪಿ ಪ್ರಮುಖರಾದ ಗೋಪಾಲ ಕುತ್ತಾರ್, ಕಟೀಲ್ ದಿನೇಶ್ ಪೈ, ರವಿ ಅಸೈಗೋಳಿ, ಭುಜಂಗ ಕುಲಾಲ್, ಮನೋಹರ್ ಸುವರ್ಣ, ಹರೀಶ್ ಶೇಟ್, ಗುರುಪ್ರಸಾದ್ ಕಡಂಬಾರು, ಪ್ರದೀಪ ಸರಿಪಳ್ಳ, ದೀಪಕ್ ಮರೋಳಿ, ಪೊಳಲಿ ಗಿರಿಪ್ರಕಾಶ್ ತಂತ್ರಿ, ಮುರುಳೀಧರ್ ರಾವ್, ಪ್ರವೀಣ್ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು. “ಭಗವಾನ್’ ಯೋಚನೆಯೇ ರಾಕ್ಷಸೀಯ: ಭಟ್
ಪ್ರೊ| ಭಗವಾನ್ ಈ ಹಿಂದಿನಿಂದಲೂ ಹುಚ್ಚು ಹುಚ್ಚಾಗಿ ಏನೇನೋ ಮಾತನಾಡುತ್ತಿದ್ದ. ಅವನು ಎಲ್ಲಿ ಹುಟ್ಟಿದ್ದಾನೆ ಎನ್ನುವುದು ಅವನಿಗೇ ಗೊತ್ತಿಲ್ಲ. ಅಪ್ಪ ಅಮ್ಮ ಯಾರೆಂದೂ ಗೊತ್ತಿಲ್ಲ. ಅದಕ್ಕಾಗಿ ಆ ರೀತಿ ಮಾತನಾಡುತ್ತಾನೆ. ಅವನಿಗೆ ಒಳ್ಳೆಯದಾಗಲಿ ಎಂದು “ಭಗವಾನ್’ ಎಂದು ಹೆಸರಿಟ್ಟಿದ್ದಾರೆ. ಆದರೆ ಆತ ರಾಕ್ಷಸನ ರೀತಿಯಲ್ಲಿ ಯೋಚಿಸುತ್ತಾನೆ ಎಂದು ಪ್ರೊ| ಕೆ.ಎಸ್.ಭಗವಾನ್ ವಿರುದ್ಧ ಆರೆಸ್ಸೆಸ್ ಮುಖಂಡ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅವರು ಏಕವಚನದಲ್ಲಿ ವಾಗ್ಧಾಳಿ ನಡೆಸಿದ್ದಾರೆ. ಮೈಸೂರಿನ ಮಹಿಷ ದಸರಾ ಆಚರಣೆ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅ ವರು, ಅದೊಂದು ರಾಕ್ಷಸಿ ವಂಶ. ಅದಕ್ಕಾಗಿ ರಾಕ್ಷಸರನ್ನು ಆರಾಧನೆ ಮಾಡುತ್ತದೆ. ಮನುಷ್ಯರ್ಯಾರೂ ರಾಕ್ಷಸರನ್ನು ಪೂಜಿಸುವುದಿಲ್ಲ. ರಾಕ್ಷಸರು ಮಾತ್ರ ರಾಕ್ಷಸರನ್ನೇ ಪೂಜಿಸುತ್ತಾರೆ ಮತ್ತು ಒಂದು ದಿನ ನಾಶವಾಗುತ್ತಾರೆ ಎಂದರು.