Advertisement

ವಿಷ್ಣುವರ್ಧನ್‌ ಹಳೆ ಮನೆ ಜಾಗದಲ್ಲೇ ಹೊಸ ಮನೆ ನಿರ್ಮಾಣ

10:08 AM Dec 12, 2019 | Lakshmi GovindaRaj |

ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅವರ ಜಯನಗರದ ಹಳೆಯ ಮನೆಯ ಜಾಗದಲ್ಲಿ ಹೊಸ ಮನೆ ತಲೆ ಎತ್ತಲಿದೆ! ಹೌದು, ಡಾ.ವಿಷ್ಣುವರ್ಧನ್‌ ಕುಟುಂಬ ಅವರ ಹಳೆಯ ಮನೆಯ ಜಾಗದಲ್ಲೇ ಹೊಸ ಮನೆ ನಿರ್ಮಿಸಲು ಮುಂದಾಗಿದ್ದು, ಈಗಾಗಲೇ ಮನೆ ನಿರ್ಮಾಣದ ಕೆಲಸ ಭರದಿಂದ ಸಾಗಿದೆ. 40 ವರ್ಷಗಳ ಹಿಂದೆ ವಿಷ್ಣುವರ್ಧನ್‌ ಅವರು ಜಯನಗರದಲ್ಲಿ ಮನೆಯನ್ನು ಕಟ್ಟಿದ್ದು, ಅವರ ಸಿನಿಕೆರಿಯರ್‌ನಲ್ಲಿ ಆಗು-ಹೋಗುಗಳು ಆ ಮನೆಯಲ್ಲೇ ನಡೆದಿತ್ತು.

Advertisement

ಈಗ ಆ ಜಾಗದಲ್ಲಿ ಹೊಸ ಮನೆ ತಲೆ ಎತ್ತಲಿದೆ. ಈ ಬಗ್ಗೆ ಮಾತನಾಡುವ ಅನಿರುದ್ಧ್, “ಹೊಸ ಮನೆ ನಿರ್ಮಿಸುತ್ತಿದ್ದೇವೆ. 40 ವರ್ಷಗಳ ಹಿಂದೆ ಅಪ್ಪಾಜಿ ಆ ಮನೆಯನ್ನು ಕಟ್ಟಿದ್ದರು. ಮುಂದೆ ಹೊಸ ಮನೆ ಕಟ್ಟಬೇಕೆಂಬ ಕನಸು ಕೂಡಾ ಅವರಿಗಿತ್ತು. ಈಗ ಅವರ ಕನಸಿನಂತೆ ಹೊಸ ಮನೆ ನಿರ್ಮಾಣದ ಕಾರ್ಯ ನಡೆಯುತ್ತಿದೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next