Advertisement

Infosys:CEO ಸಿಕ್ಕಾ ರಾಜೀನಾಮೆ;ಪ್ರವೀಣ್‌ ನೇಮಕ 

09:49 AM Aug 18, 2017 | |

ಹೊಸದಿಲ್ಲಿ : ಇನ್‌ಫೋಸಿಸ್‌‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಗೆ ವಿಶಾಲ್‌ ಸಿಕ್ಕಾ ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ. 

Advertisement

ಯು.ಬಿ.ಪ್ರವೀಣ್‌ ರಾವ್‌ ಅವರನ್ನು ಹಂಗಾಮಿ ಸಿಇಓ ಆಗಿ ನೇಮಕ ಮಾಡಲಾಗಿದೆ ಎಂದು ಕಂಪೆನಿ ಕಾರ್ಯದರ್ಶಿ ಎ.ಜಿ.ಎಸ್‌. ಮಣಿಕಂಠ ತಿಳಿಸಿದ್ದಾರೆ. 

ಅಗಸ್ಟ್‌ 18 ರಂದು ಸಿಕ್ಕಾ ಅವರ ರಾಜೀನಾಮೆಯನ್ನು ಕಂಪೆನಿಯ ಬೋರ್ಡ್‌ ಮೀಟಿಂಗ್‌ನಲ್ಲಿ ಅಂಗೀಕರಿಸಲಾಗಿದೆ.ಸಿಕ್ಕಾ ಇನ್ನುಮುಂದೆ ಕಂಪೆನಿಯ ಉಪಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಮಣಿಕಂಠ ತಿಳಿಸಿದ್ದಾರೆ. 

50 ರ ಹರೆಯದ ಸಿಕ್ಕಾ  2014 ಜೂನ್‌ 12 ರಿಂದ ಭಾರತದ 2 ನೇ ಅತೀ ದೊಡ್ಡ ಐಟಿ ಸರ್ವಿಸ್‌ ಕಂಪೆನಿ ಇನ್ಫೋಸಿಸ್‌ನ ಸಿಇಓ ಆಗಿ ಕಾರ್ಯನಿರ್ವಹಿಸಿದ್ದರು. 

30 ವರ್ಷಗಳ ಅನುಭವವಿರುವ ಪ್ರವೀಣ್‌ ರಾವ್‌ ಅವರು ಸದ್ಯ  ಇನ್ಫೋಸಿಸ್‌ ಬಿಪಿಒದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಾಗತಿಕ ಮಾರಾಟ, ಜಾಗತಿಕ ವಿತರಣೆ ಮತ್ತು ವ್ಯಾಪಾರ ಸಕ್ರಿಯಗೊಳಿಸುವ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next