Advertisement

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

11:54 AM Dec 29, 2024 | Team Udayavani |

ಝಾನ್ಸಿ: ಶಾಲಾ ಶಿಕ್ಷಕರೊಬ್ಬರು ತರಗತಿಯಲ್ಲಿ ಅಶ್ಲೀಲ ವಿಡಿಯೋವೊಂದನ್ನು ನೋಡಿದ್ದು, ಇದನ್ನು ಗಮನಿಸಿದ ಎಂಟು ವರ್ಷದ ವಿದ್ಯಾರ್ಥಿಗೆ ದಂಡಿಸಿದ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ.

Advertisement

ಶನಿವಾರ (ಡಿ.29) ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆರೋಪಿ ಶಿಕ್ಷಕನನ್ನು ಕುಲದೀಪ್‌ ಯಾದವ್‌ ಎಂದು ಗುರುತಿಸಲಾಗಿದೆ.

ಶಿಕ್ಷಕ ಕುಲದೀಪ್ ಯಾದವ್ ಅವರು ತರಗತಿಯಲ್ಲಿ ವೀಡಿಯೊವನ್ನು ನೋಡುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಯು ತನ್ನ ಸಹಪಾಠಿಗಳೊಂದಿಗೆ ನಗುತ್ತಿದ್ದನು ಎಂದು ವರದಿಯಾಗಿದೆ. ಇದರಿಂದ ಕೋಪಗೊಂಡ ಶಿಕ್ಷಕ ಹುಡುಗನ ಕೂದಲನ್ನು ಹಿಡಿದು ಗೋಡೆಗೆ ತಲೆಯನ್ನು ಹೊಡೆದ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಕ್ಷಕನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಯ ತಂದೆಯ ಪ್ರಕಾರ, ಶಿಕ್ಷಕ ಯಾದವ್ ತರಗತಿಯಲ್ಲಿ ತನ್ನ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವೀಡಿಯೊವನ್ನು ವೀಕ್ಷಿಸುತ್ತಿದ್ದರು. ಆಗ ವಿದ್ಯಾರ್ಥಿಗಳು ಅವರ ಕೃತ್ಯದ ಬಗ್ಗೆ ಚರ್ಚಿಸಲು ಮತ್ತು ತಮ್ಮಲ್ಲಿ ನಗಲು ಪ್ರಾರಂಭಿಸಿದರು.

Advertisement

“ವಿದ್ಯಾರ್ಥಿಗಳ ಪ್ರತಿಕ್ರಿಯೆಯಿಂದ ಕೋಪಗೊಂಡ ಯಾದವ್ ನಂತರ ನನ್ನ ಮಗನನ್ನು ನಿಂದಿಸಿದರು, ಅಲ್ಲದೆ ಅಮಾನುಷವಾಗಿ ಥಳಿಸಿದರು. ಅವರು ನನ್ನ ಮಗನ ಕೂದಲನ್ನು ಹಿಡಿದು ಗೋಡೆಗೆ ಹೊಡೆದರು. ಅವರು ಬೆತ್ತದಿಂದ ಹೊಡೆದರು. ನನ್ನ ಮಗನಿಗೆ ಕಿವಿಗೆ ಸೇರಿದಂತೆ ಹಲವೆಡೆ ಗಾಯಗಳಾಗಿವೆ. ನಾನು ಶಿಕ್ಷಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇನೆ” ಎಂದು ಬಾಲಕನ ತಂದೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next