Advertisement

ಕಂಗೀಲು  ಅಧ್ಯಯನದಿಂದ ವಿಶೇಷಾನುಭವ: ಡಾ|ಕ್ಯಾಟಲಿನ್‌

03:35 AM Feb 16, 2017 | |

ಉಡುಪಿ: ಭಾರತೀಯ ಸಂಸ್ಕೃತಿಯ ಅಧ್ಯಯನ ವಿಶೇಷ ಅನುಭವ ನೀಡಿದೆ. ಇಲ್ಲಿನ ಕಲೆ, ಸಂಸ್ಕೃತಿಯಿಂದ ನನ್ನಲ್ಲೂ ಅನೇಕ ರೀತಿಯ ಬದಲಾವಣೆಗಳನ್ನು ಕಂಡುಕೊಂಡಿದ್ದೇನೆ. ಇದೊಂದು ಐತಿಹಾಸಿಕ ಕ್ಷಣ. ಕಂಗಿಲು ನೃತ್ಯ ಒಂದು ವಿಶೇಷ ಕಲಾ
ಪ್ರಕಾರವಾಗಿದ್ದು, ಅದರ ಕುರಿತ ಸಂಶೋಧನೆ ಖುಷಿ ಕೊಟ್ಟಿದೆ ಎಂದು ಅರ್ನಾಲ್ಡ್‌ ಬಾಕೆ ಮರು 1938 ಮರು ಅಧ್ಯಯನ, ಅಮೆರಿಕದ ಯುಸಿಎಲ್‌ಎ ಎಥೊ ಮ್ಯೂಸಿಕಾಲಜಿ ಪ್ರೊಫೆಸರ್‌ ಡಾ| ಆಮಿ ಕ್ಯಾಟಲಿನ್‌ ಜೈರಾಜ್‌ ಬಾಯ್‌ ಹೇಳಿದರು.

Advertisement

ಅವರು ಸೋಮವಾರ ನಡೆದ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ ಉಡುಪಿ, ತುಳುಕೂಟ ಉಡುಪಿಯ ಸಂಯುಕ್ತ ಆಶ್ರಯದಲ್ಲಿ  ಬಡಗಬೆಟ್ಟು ಕೋ- ಆಪರೇಟಿವ್‌ ಬ್ಯಾಂಕಿನ ಜಗನ್ನಾಥ  ಸಭಾಭವನದಲ್ಲಿ ನಡೆದ ಜಾನಪದೀಯ ಕಂಗೀಲು ನೃತ್ಯದ ದಾಖಲೀಕರಣ ಕಾರ್ಯಕ್ರಮ ದಲ್ಲಿ  ಪ್ರಾಚ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತುಳು ಒಕ್ಕೂಟದ ಅಧ್ಯಕ್ಷ ಬಿ. ಜಯಕರ್‌ ಶೆಟ್ಟಿ ಇಂದ್ರಾಳಿ ಯುವ ಜನರಿಗೆ ನಮ್ಮ  ಕಲೆ, ಸಂಸ್ಕೃತಿಯನ್ನು ತಿಳಿಸಿಕೊಡುವ ಕೆಲಸ ಆಗಬೇಕಿದೆ. ಪ್ರಾಚ್ಯ ಸಂಚಯ ಸಂಶೋಧನಾ ಸಂಸ್ಥೆಯಿಂದ ಪುರಾತನ ಕಲೆಗಳ ಪುನರುಜ್ಜೀವನ ಆಗುತ್ತಿರುವುದು ಸಂತಸದ ವಿಚಾರ ಎಂದರು.

ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಎಸ್‌.ಎ. ಕೃಷ್ಣಯ್ಯ ಅವರು ಅರ್ನಾಲ್ಡ್‌ ಬಾಕೆ ಮರು 1938 ಮರುಅಧ್ಯಯನ, ಕಂಗಿಲು ನೃತ್ಯದ ಬಗ್ಗೆ  ವಿವರಿಸಿದರು. ಭಾಷಾ ತಜ್ಞ ಡಾ| ಯು.ಪಿ. ಉಪಾಧ್ಯಾಯ, ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ಸಿ. ನಿರಂಜನ್‌ ಉಪಸ್ಥಿತರಿದ್ದರು. ಪ್ರೊ| ವಿ.ಕೆ. ಯಾದವ್‌ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಂಗಿಲು ನೃತ್ಯ ಪ್ರದರ್ಶನ  ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next